ಒಬ್ಬ ವ್ಯಕ್ತಿಯ ಇಸ್ಲಾಂನ ಸೌಂದರ್ಯಗಳಲ್ಲಿ ಒಂದು ಏನೆಂದರೆ, ಅವನಿಗೆ ಸಂಬಂಧಿಸದ ವಿಷಯವನ್ನು ಅವನು ತ್ಯಜಿಸುವುದು

ಒಬ್ಬ ವ್ಯಕ್ತಿಯ ಇಸ್ಲಾಂನ ಸೌಂದರ್ಯಗಳಲ್ಲಿ ಒಂದು ಏನೆಂದರೆ, ಅವನಿಗೆ ಸಂಬಂಧಿಸದ ವಿಷಯವನ್ನು ಅವನು ತ್ಯಜಿಸುವುದು

ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ವ್ಯಕ್ತಿಯ ಇಸ್ಲಾಂನ ಸೌಂದರ್ಯಗಳಲ್ಲಿ ಒಂದು ಏನೆಂದರೆ, ಅವನಿಗೆ ಸಂಬಂಧಿಸದ ವಿಷಯವನ್ನು ಅವನು ತ್ಯಜಿಸುವುದು".

[قال النووي: حديث حسن] [رواه الترمذي وغيره]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಸ್ಪಷ್ಟಪಡಿಸುವುದೇನೆಂದರೆ, ಒಬ್ಬ ಮುಸ್ಲಿಮನ ಇಸ್ಲಾಂನ ಸೌಂದರ್ಯದ ಪರಿಪೂರ್ಣತೆ ಮತ್ತು ಅವನ ಈಮಾನ್‌ನ (ವಿಶ್ವಾಸದ) ಸಂಪೂರ್ಣತೆಗಳಲ್ಲಿ ಒಂದು ಏನೆಂದರೆ, ಅವನಿಗೆ ಸಂಬಂಧಿಸದ, ಅವನಿಗೆ ಹೊಂದಿಕೊಳ್ಳದ, ಅವನಿಗೆ ಮುಖ್ಯವಲ್ಲದ ಮತ್ತು ಅವನಿಗೆ ಪ್ರಯೋಜನ ನೀಡದ ಮಾತುಗಳು ಮತ್ತು ಕೆಲಸಗಳಿಂದ, ಅಥವಾ ಧಾರ್ಮಿಕ ಮತ್ತು ಲೌಕಿಕ ವಿಷಯಗಳಲ್ಲಿ ಅವನಿಗೆ ಸಂಬಂಧಿಸದ ವಿಷಯಗಳಿಂದ ದೂರವಿರುವುದು. ಏಕೆಂದರೆ, ಮನುಷ್ಯನಿಗೆ ಸಂಬಂಧಿಸದ ವಿಷಯಗಳಲ್ಲಿ ತೊಡಗುವುದು, ಬಹುಶಃ ಅವನಿಗೆ ಸಂಬಂಧಿಸಿದ ವಿಷಯಗಳಿಂದ ಅವನನ್ನು ವಿಮುಖಗೊಳಿಸಬಹುದು, ಅಥವಾ ಅವನು ಯಾವುದರಿಂದ ದೂರವಿರಬೇಕೋ ಅದರ ಕಡೆಗೆ ಅವನನ್ನು ಕೊಂಡೊಯ್ಯಬಹುದು. ಏಕೆಂದರೆ, ಮನುಷ್ಯನು ಪುನರುತ್ಥಾನ ದಿನದಂದು ತನ್ನ ಕರ್ಮಗಳ ಬಗ್ಗೆ ಉತ್ತರದಾಯಿಯಾಗಿದ್ದಾನೆ.

فوائد الحديث

ಜನರು ಇಸ್ಲಾಂನಲ್ಲಿ (ಅದರ ಪಾಲನೆಯಲ್ಲಿ) ಭಿನ್ನರಾಗಿರುತ್ತಾರೆ, ಮತ್ತು ಕೆಲವು ಕರ್ಮಗಳಿಂದ ಅದು (ಇಸ್ಲಾಂ) ಹೆಚ್ಚು ಸುಂದರವಾಗುತ್ತದೆ.

ವ್ಯರ್ಥ ಮಾತು ಮತ್ತು ಅನಗತ್ಯ ಮಾತುಗಳು ಹಾಗೂ ಕೆಲಸಗಳನ್ನು ತ್ಯಜಿಸುವುದು ಒಬ್ಬ ವ್ಯಕ್ತಿಯ ಇಸ್ಲಾಂನ ಪರಿಪೂರ್ಣತೆಗೆ ಪುರಾವೆಯಾಗಿದೆ.

ಒಬ್ಬ ವ್ಯಕ್ತಿಗೆ ಅವನ ಧಾರ್ಮಿಕ ಮತ್ತು ಲೌಕಿಕ ವಿಷಯಗಳಿಗೆ ಸಂಬಂಧಿಸಿದ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸಲಾಗಿದೆ. ಒಬ್ಬ ವ್ಯಕ್ತಿಯ ಇಸ್ಲಾಂನ ಸೌಂದರ್ಯವು ಅವನಿಗೆ ಸಂಬಂಧಿಸದ ವಿಷಯವನ್ನು ತ್ಯಜಿಸುವುದಾಗಿದ್ದರೆ, ಅವನಿಗೆ ಸಂಬಂಧಿಸಿದ ವಿಷಯದಲ್ಲಿ ತೊಡಗಿಕೊಳ್ಳುವುದು ಕೂಡ ಅವನ ಸೌಂದರ್ಯದ ಭಾಗವಾಗಿದೆ.

ಇಬ್ನುಲ್ ಕಯ್ಯಿಮ್ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಹೇಳುತ್ತಾರೆ: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಪೂರ್ಣ 'ವರಅ್' (ಧರ್ಮನಿಷ್ಠೆ/ಸೂಕ್ಷ್ಮತೆ) ಅನ್ನು ಒಂದೇ ವಾಕ್ಯದಲ್ಲಿ ಸಂಗ್ರಹಿಸಿದ್ದಾರೆ. ಅವರು ಹೇಳಿದರು: "ಒಬ್ಬ ವ್ಯಕ್ತಿಯ ಇಸ್ಲಾಂನ ಸೌಂದರ್ಯವೇನೆಂದರೆ, ಅವನಿಗೆ ಸಂಬಂಧಿಸದ ವಿಷಯವನ್ನು ಅವನು ತ್ಯಜಿಸುವುದು." ಇದು ಮಾತು, ನೋಟ, ಕೇಳುವಿಕೆ, ಹಿಡಿಯುವುದು, ನಡೆಯುವುದು, ಆಲೋಚನೆ, ಮುಂತಾದ ಎಲ್ಲಾ ಬಾಹ್ಯ ಮತ್ತು ಆಂತರಿಕ ಚಲನೆಗಳಲ್ಲಿ ಅವನಿಗೆ ಸಂಬಂಧಿಸದ ವಿಷಯವನ್ನು ತ್ಯಜಿಸುವುದನ್ನು ಒಳಗೊಳ್ಳುತ್ತದೆ. ಇದು 'ವರಅ್' ವಿಷಯದಲ್ಲಿ ಒಂದು ಸಮಗ್ರವಾದ ವಾಕ್ಯವಾಗಿದೆ."

ಇಬ್ನ್ ರಜಬ್ ಹೇಳುತ್ತಾರೆ: "ಈ ಹದೀಸ್ 'ಅದಬ್' (ಶಿಷ್ಟಾಚಾರ) ದ ಮೂಲಭೂತ ತತ್ವಗಳಲ್ಲಿ ಒಂದಾಗಿದೆ."

ಜ್ಞಾನವನ್ನು ಕಲಿಯಲು ಪ್ರೋತ್ಸಾಹಿಸಲಾಗಿದೆ. ಏಕೆಂದರೆ ಅದರ ಮೂಲಕ ಮನುಷ್ಯನು ತನಗೆ ಸಂಬಂಧಿಸಿದ್ದು ಯಾವುದು ಮತ್ತು ಸಂಬಂಧಿಸಿದ್ದಲ್ಲದ್ದು ಯಾವುದು ಎಂದು ತಿಳಿಯುತ್ತಾನೆ.

ಒಳಿತನ್ನು ಆದೇಶಿಸುವುದು, ಕೆಡುಕನ್ನು ನಿಷೇಧಿಸುವುದು ಮತ್ತು ಉಪದೇಶ ನೀಡುವುದು ಮನುಷ್ಯನಿಗೆ ಸಂಬಂಧಿಸಿದ ವಿಷಯಗಳಾಗಿವೆ. ಏಕೆಂದರೆ ಅವುಗಳನ್ನು ಮಾಡಲು ಅವನಿಗೆ ಆದೇಶಿಸಲಾಗಿದೆ.

ಈ ಹದೀಸ್‌ನ ಸಾಮಾನ್ಯ ಅರ್ಥದಲ್ಲಿ ಈ ವಿಷಯಗಳು ಒಳಗೊಳ್ಳುತ್ತವೆ: ಅಲ್ಲಾಹು ನಿಷೇಧಿಸಿದ ಮತ್ತು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನಪೇಕ್ಷಿತವೆಂದು (ಕರಾಹತ್) ಪರಿಗಣಿಸಿದ ವಿಷಯಗಳಿಂದ ದೂರವಿರುವುದು. ಹಾಗೆಯೇ, ಪರಲೋಕದ ವಿಷಯಗಳಲ್ಲಿ ಒಳಪಟ್ಟ ಅನಗತ್ಯ ವಿಷಯಗಳಿಂದ - ಉದಾಹರಣೆಗೆ ಅಗೋಚರದ ಸತ್ಯಾಂಶಗಳು ಮತ್ತು ಸೃಷ್ಟಿ ಹಾಗೂ ಆದೇಶದಲ್ಲಿನ ತೀರ್ಪಿನ ವಿವರಗಳು - ಮುಂತಾದವುಗಳಿಂದ ದೂರವಿರುವುದು. ಅದೇ ರೀತಿ ಈಗಾಗಲೇ ಸಂಭವಿಸಿಲ್ಲದ, ಅಥವಾ ಸಂಭವಿಸುವುದು ಸಾಧ್ಯವಿಲ್ಲದ, ಅಥವಾ ಸಂಭವಿಸುವುದನ್ನು ಕಲ್ಪಿಸಲೂ ಸಾಧ್ಯವಾಗದಂತಹ ಕಾಲ್ಪನಿಕ ವಿಷಯಗಳ ಬಗ್ಗೆ ಪ್ರಶ್ನಿಸುವುದು ಮತ್ತು ಸಂಶೋಧನೆ ಮಾಡುವುದು (ಸಹ ಇವುಗಳಲ್ಲಿ ಒಳಪಡುತ್ತದೆ).

التصنيفات

Blameworthy Morals