ಸ್ತ್ರೀಯರ ಉಡುಪನ್ನು ಧರಿಸುವ ಪುರುಷನನ್ನು ಮತ್ತು ಪುರುಷರ ಉಡುಪನ್ನು ಧರಿಸುವ ಸ್ತ್ರೀಯನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ…

ಸ್ತ್ರೀಯರ ಉಡುಪನ್ನು ಧರಿಸುವ ಪುರುಷನನ್ನು ಮತ್ತು ಪುರುಷರ ಉಡುಪನ್ನು ಧರಿಸುವ ಸ್ತ್ರೀಯನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶಪಿಸಿದ್ದಾರೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಸ್ತ್ರೀಯರ ಉಡುಪನ್ನು ಧರಿಸುವ ಪುರುಷನನ್ನು ಮತ್ತು ಪುರುಷರ ಉಡುಪನ್ನು ಧರಿಸುವ ಸ್ತ್ರೀಯನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶಪಿಸಿದ್ದಾರೆ."

[صحيح]

الشرح

ಮಹಿಳೆಯರಿಗೆ ಮಾತ್ರ ಸೀಮಿತವಾಗಿರುವ ಉಡುಪುಗಳನ್ನು ಧರಿಸಿ ಮಹಿಳೆಯರನ್ನು ಅನುಕರಿಸುವ ಪ್ರತಿಯೊಬ್ಬ ಪುರುಷನೂ ಅಲ್ಲಾಹನ ಕರುಣೆಯಿಂದ ದೂರವಾಗಲಿ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥಿಸಿದರು. ಅನುಕರಿಸುವುದು ನೋಟದಲ್ಲಿ, ಬಣ್ಣದಲ್ಲಿ, ರೀತಿಯಲ್ಲಿ, ಉಡುಪು ಧರಿಸುವ ವಿಧಾನದಲ್ಲಿ, ಅಲಂಕಾರದಲ್ಲಿ ಅಥವಾ ಬೇರೆ ಯಾವುದರಲ್ಲಾಗಿದ್ದರೂ ಎಲ್ಲವೂ ಇದರಲ್ಲಿ ಒಳಪಡುತ್ತವೆ. ಅದೇ ರೀತಿ, ಪುರುಷರಿಗೆ ಮಾತ್ರ ಸೀಮಿತವಾಗಿರುವ ಉಡುಪುಗಳನ್ನು ಧರಿಸಿ ಪುರುಷರನ್ನು ಅನುಕರಿಸುವ ಮಹಿಳೆಯು ಕೂಡ. ಈ ರೀತಿ ಮಾಡುವುದು ಮಹಾಪಾಪಗಳಲ್ಲಿ ಒಂದಾಗಿದೆ.

فوائد الحديث

ಶೌಕಾನಿ ಹೇಳುತ್ತಾರೆ: "ಪುರುಷರು ಸ್ತ್ರೀಯರನ್ನು ಅನುಕರಿಸುವುದು ಮತ್ತು ಸ್ತ್ರೀಯರು ಪುರುಷರನ್ನು ಅನುಕರಿಸುವುದು ನಿಷಿದ್ಧವಾಗಿದೆ. ಏಕೆಂದರೆ ಶಾಪವು ನಿಷಿದ್ಧವಾದ ಕ್ರಿಯೆಗೆ ಮಾತ್ರ ಇರುತ್ತದೆ."

ಇಬ್ನ್ ಉಸೈಮೀನ್ ಹೇಳುತ್ತಾರೆ: "ಪುರುಷರು ಮತ್ತು ಸ್ತ್ರೀಯರು ಇಬ್ಬರೂ ಧರಿಸುವ ಕೆಲವು ಅಂಗಿಗಳನ್ನು ಹೋಲುವಂತಹ, ಇಬ್ಬರೂ ಹಂಚಿಕೊಳ್ಳುವ ಉಡುಪುಗಳನ್ನು ಧರಿಸುವುದರಲ್ಲಿ ಯಾವುದೇ ತೊಂದರೆಯಿಲ್ಲ. ಅಂದರೆ ಪುರುಷರು ಮತ್ತು ಸ್ತ್ರೀಯರು ಇಬ್ಬರೂ ಅದನ್ನು ಧರಿಸಬಹುದು; ಏಕೆಂದರೆ ಅದು ಇಬ್ಬರೂ ಧರಿಸುವಂತದ್ದಾಗಿದೆ."

التصنيفات

Forbidden Emulation, Clothing and Adornment