إعدادات العرض
ನೀವು ರೇಷ್ಮೆ ಅಥವಾ ಬ್ರೊಕೇಡು (ಜರತಾರಿ ರೇಷ್ಮೆ) ಗಳನ್ನು ಧರಿಸಬೇಡಿ. ಬಂಗಾರ ಅಥವಾ ಬೆಳ್ಳಿಯ ಪಾತ್ರೆಗಳಲ್ಲಿ ಕುಡಿಯಬೇಡಿ ಮತ್ತು…
ನೀವು ರೇಷ್ಮೆ ಅಥವಾ ಬ್ರೊಕೇಡು (ಜರತಾರಿ ರೇಷ್ಮೆ) ಗಳನ್ನು ಧರಿಸಬೇಡಿ. ಬಂಗಾರ ಅಥವಾ ಬೆಳ್ಳಿಯ ಪಾತ್ರೆಗಳಲ್ಲಿ ಕುಡಿಯಬೇಡಿ ಮತ್ತು ಅವುಗಳ ಬಟ್ಟಲುಗಳಲ್ಲಿ ಆಹಾರ ಸೇವಿಸಬೇಡಿ. ಏಕೆಂದರೆ, ಇವು ಇಹಲೋಕದಲ್ಲಿ ಅವರಿಗೆ ಮತ್ತು ಪರಲೋಕದಲ್ಲಿ ನಮಗೆ ಇರುವುದಾಗಿವೆ
ಅಬ್ದುರ್‍ರಹ್ಮಾನ್ ಬಿನ್ ಅಬೂ ಲೈಲಾ ರಿಂದ ವರದಿ. ಒಮ್ಮೆ ಅವರು ಹುದೈಫರ ಜೊತೆಯಲ್ಲಿದ್ದರು. ಆಗ ಅವರು ನೀರು ಕೇಳಿದರು ಮತ್ತು ಒಬ್ಬ ಮಜೂಸಿ ಅವರಿಗೆ ನೀರು ತಂದು ಕೊಟ್ಟನು. ಆತ ಲೋಟವನ್ನು ಅವರ ಕೈಯಲ್ಲಿಟ್ಟಾಗ, ಅವರು ಅದನ್ನು ಆತನ ಕಡೆಗೆ ಎಸೆದು ಹೇಳಿದರು: ನಾನು ಇದನ್ನು ಬಳಸದಂತೆ ಒಂದು ಅಥವಾ ಎರಡು ಬಾರಿ ಅವನಿಗೆ ನಿಷೇಧಿಸದಿರುತ್ತಿದ್ದರೆ—ನಾನು ಹೀಗೆ ಮಾಡುತ್ತಿರಲಿಲ್ಲ ಎಂದು ಹೇಳುವುದು ಅವರ ಇಂಗಿತವಾಗಿರಬಹುದು—ಏಕೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನೀವು ರೇಷ್ಮೆ ಅಥವಾ ಬ್ರೊಕೇಡು (ಜರತಾರಿ ರೇಷ್ಮೆ) ಗಳನ್ನು ಧರಿಸಬೇಡಿ. ಬಂಗಾರ ಅಥವಾ ಬೆಳ್ಳಿಯ ಪಾತ್ರೆಗಳಲ್ಲಿ ಕುಡಿಯಬೇಡಿ ಮತ್ತು ಅವುಗಳ ಬಟ್ಟಲುಗಳಲ್ಲಿ ಆಹಾರ ಸೇವಿಸಬೇಡಿ. ಏಕೆಂದರೆ, ಇವು ಇಹಲೋಕದಲ್ಲಿ ಅವರಿಗೆ ಮತ್ತು ಪರಲೋಕದಲ್ಲಿ ನಮಗೆ ಇರುವುದಾಗಿವೆ."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी ئۇيغۇرچە Hausa Português Kurdî മലയാളം Kiswahili සිංහල دری Svenska አማርኛ অসমীয়া ไทย Tiếng Việt Yorùbá Кыргызча ગુજરાતી Malagasy नेपाली Română Nederlands Soomaali Oromoo پښتو తెలుగు Kinyarwanda Српски Moore Lietuvių ქართულიالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರೇಷ್ಮೆಯ ಎಲ್ಲಾ ವಿಧಗಳನ್ನು ಪುರುಷರಿಗೆ ನಿಷೇಧಿಸಿದರು. ಅವರು ಬಂಗಾರ ಅಥವಾ ಬೆಳ್ಳಿಯ ಪಾತ್ರೆ-ಪಗಡೆಗಳಲ್ಲಿ ಆಹಾರ-ಪಾನೀಯ ಸೇವಿಸುವುದನ್ನು ಪುರುಷರಿಗೆ ಮತ್ತು ಮಹಿಳೆಯರಿಗೆ ನಿಷೇಧಿಸಿದರು. ಪುನರುತ್ಥಾನ ದಿನದಂದು ಅವು ಕೇವಲ ಸತ್ಯವಿಶ್ವಾಸಿಗಳಿಗೆ ಮಾತ್ರ ಸೀಮಿತವೆಂದು ಅವರು ತಿಳಿಸಿದರು. ಏಕೆಂದರೆ, ಇಹಲೋಕದಲ್ಲಿ ಅವರು ಅಲ್ಲಾಹನ ಆಜ್ಞೆಯನ್ನು ಅನುಸರಿಸಿ ಅದರಿಂದ ದೂರವಿದ್ದರು. ಅವು ಪರಲೋಕದಲ್ಲಿ ಸತ್ಯನಿಷೇಧಿಗಳಿಗೆ ಇರುವುದಿಲ್ಲ. ಏಕೆಂದರೆ, ಅವರು ಅವುಗಳನ್ನು ಉಪಯೋಗಿಸುವ ಮೂಲಕ ಇಹಲೋಕದಲ್ಲೇ ತಮ್ಮ ಸತ್ಕರ್ಮಗಳಿಗೆ ಪ್ರತಿಫಲ ಪಡೆಯಲು ಆತುರ ತೋರಿದರು ಮತ್ತು ಅಲ್ಲಾಹನ ಆಜ್ಞೆಗಳನ್ನು ಉಲ್ಲಂಘಿಸಿದರು.فوائد الحديث
ಪುರುಷರಿಗೆ ರೇಷ್ಮೆ ಮತ್ತು ಬ್ರೊಕೇಡು ವಸ್ತ್ರಗಳನ್ನು ನಿಷೇಧಿಸಲಾಗಿದೆ. ಅವುಗಳನ್ನು ಧರಿಸುವವರಿಗೆ ಉಗ್ರ ಎಚ್ಚರಿಕೆ ನೀಡಲಾಗಿದೆ.
ಮಹಿಳೆಯರಿಗೆ ರೇಷ್ಮೆ ಮತ್ತು ಬ್ರೊಕೇಡು ವಸ್ತ್ರಗಳನ್ನು ಧರಿಸಲು ಅನುಮತಿಸಲಾಗಿದೆ.
ಬಂಗಾರ ಅಥವಾ ಬೆಳ್ಳಿಯ ಬಟ್ಟಲುಗಳಲ್ಲಿ ಮತ್ತು ಪಾತ್ರೆಗಳಲ್ಲಿ ಆಹಾರ-ಪಾನೀಯ ಸೇವಿಸುವುದನ್ನು ಪುರುಷರಿಗೆ ಮತ್ತು ಮಹಿಳೆಯರಿಗೆ ನಿಷೇಧಿಸಲಾಗಿದೆ.
ಹುದೈಫ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ನಿರಾಕರಣೆಯಲ್ಲಿ ಕಠೋರತೆಯಿತ್ತು. ಏಕೆಂದರೆ, ಅವರು ಅವನಿಗೆ ಬಂಗಾರ ಮತ್ತು ಬೆಳ್ಳಿಯ ಪಾತ್ರೆಗಳನ್ನು ಬಳಸುವುದನ್ನು ಒಂದಕ್ಕಿಂತ ಹೆಚ್ಚು ಬಾರಿ ನಿಷೇಧಿಸಿದ್ದರು. ಆದರೂ ಅವನು ಅದನ್ನು ನಿಲ್ಲಿಸಿರಲಿಲ್ಲ.
التصنيفات
Manners of Dressing