إعدادات العرض
“ಸತ್ಯವಿಶ್ವಾಸಿ ಪುರುಷನು ಸತ್ಯವಿಶ್ವಾಸಿ ಸ್ತ್ರೀಯನ್ನು ದ್ವೇಷಿಸಬಾರದು. ಅವಳ ಒಂದು ಗುಣವನ್ನು ಅವನು ಇಷ್ಟಪಡದಿದ್ದರೆ, ಅವಳ…
“ಸತ್ಯವಿಶ್ವಾಸಿ ಪುರುಷನು ಸತ್ಯವಿಶ್ವಾಸಿ ಸ್ತ್ರೀಯನ್ನು ದ್ವೇಷಿಸಬಾರದು. ಅವಳ ಒಂದು ಗುಣವನ್ನು ಅವನು ಇಷ್ಟಪಡದಿದ್ದರೆ, ಅವಳ ಇನ್ನೊಂದು ಗುಣವು ಅವನಿಗೆ ಇಷ್ಟವಾಗಬಹುದು
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸತ್ಯವಿಶ್ವಾಸಿ ಪುರುಷನು ಸತ್ಯವಿಶ್ವಾಸಿ ಸ್ತ್ರೀಯನ್ನು ದ್ವೇಷಿಸಬಾರದು. ಅವಳ ಒಂದು ಗುಣವನ್ನು ಅವನು ಇಷ್ಟಪಡದಿದ್ದರೆ, ಅವಳ ಇನ್ನೊಂದು ಗುಣವು ಅವನಿಗೆ ಇಷ್ಟವಾಗಬಹುದು." ಅಥವಾ ಅವರು ಹೀಗೆ ಹೇಳಿದರು: "ಅವಳ ಬೇರೊಂದು ಗುಣವು."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी සිංහල Hausa Kurdî Kiswahili Português دری অসমীয়া Tiếng Việt Svenska Yorùbá Кыргызча ગુજરાતી नेपाली Oromoo Română മലയാളം Nederlands Soomaali پښتو తెలుగు Kinyarwanda Српски Moore ქართული Українська Čeština Magyar Македонски Lietuvių Azərbaycan Wolof Malagasyالشرح
ಗಂಡ ತನ್ನ ಹೆಂಡತಿಯ ಮೇಲೆ ಅನ್ಯಾಯವೆಸಗುವುದು, ಅವಳನ್ನು ತ್ಯಜಿಸುವುದು, ನಿರ್ಲಕ್ಷಿಸುವುದು ಮುಂತಾದವುಗಳಿಗೆ ಕಾರಣವಾಗುವ ರೀತಿಯಲ್ಲಿ ಅವಳನ್ನು ದ್ವೇಷಿಸುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ. ಏಕೆಂದರೆ, ಮನುಷ್ಯನನ್ನು ನ್ಯೂನತೆಗಳೊಂದಿಗೆ ಸೃಷ್ಟಿಸಲಾಗಿದೆ. ಅವನು ಅವಳಲ್ಲಿರುವ ಕೆಟ್ಟ ಗುಣವನ್ನು ಇಷ್ಟಪಡದಿದ್ದರೆ, ಅವಳಲ್ಲಿ ಉತ್ತಮವಾದ ಬೇರೆ ಗುಣವು ಕಂಡುಬರಬಹುದು. ಆಗ ಅವನು ತನಗೆ ಒಪ್ಪಿಗೆಯಾಗುವ ಉತ್ತಮ ಗುಣದ ಬಗ್ಗೆ ಸಂತೃಪ್ತನಾಗಿ, ತನಗೆ ಇಷ್ಟವಿಲ್ಲದ ಕೆಟ್ಟ ಗುಣದ ಬಗ್ಗೆ ತಾಳ್ಮೆ ತೋರಬೇಕು. ಇದು ಅವಳಿಂದ ಬೇರ್ಪಡಲು ಕಾರಣವಾಗುವ ರೀತಿಯಲ್ಲಿ ಅವಳನ್ನು ದ್ವೇಷಿಸದೆ ತಾಳ್ಮೆಯಿಂದಿರಲು ಸಹಾಯ ಮಾಡುತ್ತದೆ.فوائد الحديث
ಹೆಂಡತಿಯೊಂದಿಗೆ ಯಾವುದೇ ಕಲಹ ಉಂಟಾದರೂ, ಉದ್ವೇಗ ಮತ್ತು ಭಾವನೆಗಳಿಗೆ ಒಳಗಾಗದೆ, ನ್ಯಾಯವನ್ನು ಪಾಲಿಸಬೇಕೆಂದು ಮತ್ತು ಬುದ್ಧಿ ಉಪಯೋಗಿಸಿ ಸಮಸ್ಯೆ ಬಗೆಹರಿಸಬೇಕೆಂದು ಸತ್ಯವಿಶ್ವಾಸಿಗೆ ಕರೆ ನೀಡಲಾಗಿದೆ.
ಒಬ್ಬ ಸತ್ಯವಿಶ್ವಾಸಿ ತನ್ನ ಸತ್ಯವಿಶ್ವಾಸಿಯಾದ ಹೆಂಡತಿಯನ್ನು, ಅವಳಿಂದ ಬೇರ್ಪಡಲು ಕಾರಣವಾಗುವ ರೀತಿಯಲ್ಲಿ ಸಂಪೂರ್ಣವಾಗಿ ದ್ವೇಷಿಸಬಾರದು. ಬದಲಿಗೆ, ಅವನು ಅವಳಲ್ಲಿ ಇಷ್ಟಪಡುವ ಗುಣವನ್ನು ಸ್ವೀಕರಿಸಿ ಇಷ್ಟಪಡದ ಗುಣವನ್ನು ನಿರ್ಲಕ್ಷಿಸಬೇಕು.
ದಂಪತಿಗಳು ಪರಸ್ಪರ ಉತ್ತಮ ವರ್ತನೆ ಮತ್ತು ಒಡನಾಟ ತೋರುವುದನ್ನು ಪ್ರೋತ್ಸಾಹಿಸಲಾಗಿದೆ.
ಸತ್ಯವಿಶ್ವಾಸವು ಉತ್ತಮ ಗುಣನಡವಳಿಕೆಯ ಕಡೆಗೆ ಕರೆಯುತ್ತದೆ. ಆದ್ದರಿಂದ, ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಸ್ತ್ರೀಯರು ಉತ್ತಮ ಗುಣನಡವಳಿಕೆಯನ್ನು ಹೊಂದಿರಬೇಕು. ಇಬ್ಬರಲ್ಲೂ ಶ್ಲಾಘನೀಯ ಗುಣಗಳು ಕಂಡುಬರಬೇಕೆಂಬುದನ್ನು ಸತ್ಯವಿಶ್ವಾಸವು ಅನಿವಾರ್ಯಗೊಳಿಸುತ್ತದೆ.