ಅದು ಎಪ್ಪತ್ತು ವರ್ಷಗಳ ಹಿಂದೆ ನರಕಕ್ಕೆ ಎಸೆಯಲಾದ ಒಂದು ಕಲ್ಲು. ಅದು ನರಕದೊಳಗೆ ಬೀಳುತ್ತಾ ಇದೀಗ ಅದರ ತಳಭಾಗವನ್ನು ತಲುಪಿದೆ

ಅದು ಎಪ್ಪತ್ತು ವರ್ಷಗಳ ಹಿಂದೆ ನರಕಕ್ಕೆ ಎಸೆಯಲಾದ ಒಂದು ಕಲ್ಲು. ಅದು ನರಕದೊಳಗೆ ಬೀಳುತ್ತಾ ಇದೀಗ ಅದರ ತಳಭಾಗವನ್ನು ತಲುಪಿದೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಒಂದು ಸದ್ದು ಕೇಳಿಸಿತು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಇದೇನೆಂದು ನಿಮಗೆ ತಿಳಿದಿದೆಯೇ?" ನಾವು ಹೇಳಿದೆವು: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು." ಅವರು ಹೇಳಿದರು: "ಅದು ಎಪ್ಪತ್ತು ವರ್ಷಗಳ ಹಿಂದೆ ನರಕಕ್ಕೆ ಎಸೆಯಲಾದ ಒಂದು ಕಲ್ಲು. ಅದು ನರಕದೊಳಗೆ ಬೀಳುತ್ತಾ ಇದೀಗ ಅದರ ತಳಭಾಗವನ್ನು ತಲುಪಿದೆ."

[صحيح] [رواه مسلم]

الشرح

ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಕಾಶಕಾಯವು ಕೆಳಗೆ ಬಿದ್ದಂತಹ ಒಂದು ಕಳವಳಕಾರಿ ಸದ್ದನ್ನು ಕೇಳಿದರು. ಅವರು ತಮ್ಮ ಬಳಿಯಿದ್ದ ಸಂಗಡಿಗರೊಡನೆ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಆ ಸದ್ದಿನ ಬಗ್ಗೆ ಕೇಳಿದಾಗ, ಅವರು ಉತ್ತರಿಸಿದರು: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ಬಲ್ಲವರು." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಕೇಳಿದ ಈ ಸದ್ದು ಎಪ್ಪತ್ತು ವರ್ಷಗಳ ಹಿಂದೆ ನರಕದ ಮೇಲ್ಭಾಗದಿಂದ ಅದಕ್ಕೆ ಎಸೆಯಲಾದ ಒಂದು ಕಲ್ಲಾಗಿದೆ. ಅದು ನರಕದೊಳಗೆ ಬೀಳುತ್ತಾ, ಇದೀಗ ನೀವು ಅದರ ಸದ್ದು ಕೇಳುವಾಗ ನರಕದ ತಳಭಾಗವನ್ನು ತಲುಪಿದೆ."

فوائد الحديث

ಅಂತ್ಯದಿನಕ್ಕಾಗಿ ಸತ್ಕರ್ಮಗಳೊಂದಿಗೆ ತಯಾರಿ ನಡೆಸಲು ಪ್ರೋತ್ಸಾಹಿಸಲಾಗಿದೆ ಮತ್ತು ನರಕಾಗ್ನಿಯ ಬಗ್ಗೆ ಎಚ್ಚರಿಸಲಾಗಿದೆ.

ಮನುಷ್ಯನಿಗೆ ಜ್ಞಾನವಿಲ್ಲದ ವಿಷಯಗಳನ್ನು ಅಲ್ಲಾಹನಿಗೆ ವಹಿಸಿಕೊಡುವುದು ಅಪೇಕ್ಷಣೀಯವಾಗಿದೆ.

ಸಭಿಕರು ಹೆಚ್ಚು ಪರಿಣಾಮಕಾರಿಯಾಗಿ ಅರ್ಥಮಾಡಿಕೊಳ್ಳಲು ಶಿಕ್ಷಕರು ವಿವರಣೆಗೆ ಮುನ್ನ ಜನರ ಆಸಕ್ತಿ ಮತ್ತು ಗಮನವನ್ನು ಸೆಳೆಯಬೇಕಾಗಿದೆ.

التصنيفات

Descriptions of Paradise and Hell