ದಾಸರು ಬೆಳಗನ್ನು ಪ್ರವೇಶಿಸುವ ಪ್ರತಿ ದಿನವೂ ಎರಡು ದೇವದೂತರುಗಳು ಇಳಿದು ಬರುತ್ತಾರೆ. ಆಗ ಅವರಲ್ಲೊಬ್ಬರು ಹೇಳುವರು: ಓ ಅಲ್ಲಾಹ್!…

ದಾಸರು ಬೆಳಗನ್ನು ಪ್ರವೇಶಿಸುವ ಪ್ರತಿ ದಿನವೂ ಎರಡು ದೇವದೂತರುಗಳು ಇಳಿದು ಬರುತ್ತಾರೆ. ಆಗ ಅವರಲ್ಲೊಬ್ಬರು ಹೇಳುವರು: ಓ ಅಲ್ಲಾಹ್! ಖರ್ಚು ಮಾಡುವವರಿಗೆ ಬದಲಿಯನ್ನು ನೀಡು. ಇನ್ನೊಬ್ಬರು ಹೇಳುವರು: ಓ ಅಲ್ಲಾಹ್! (ಖರ್ಚು ಮಾಡದೆ) ತಡೆಹಿಡಿಯುವವರಿಗೆ ಹಾನಿಯನ್ನು ನೀಡು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ದಾಸರು ಬೆಳಗನ್ನು ಪ್ರವೇಶಿಸುವ ಪ್ರತಿ ದಿನವೂ ಎರಡು ದೇವದೂತರುಗಳು ಇಳಿದು ಬರುತ್ತಾರೆ. ಆಗ ಅವರಲ್ಲೊಬ್ಬರು ಹೇಳುವರು: ಓ ಅಲ್ಲಾಹ್! ಖರ್ಚು ಮಾಡುವವರಿಗೆ ಬದಲಿಯನ್ನು ನೀಡು. ಇನ್ನೊಬ್ಬರು ಹೇಳುವರು: ಓ ಅಲ್ಲಾಹ್! (ಖರ್ಚು ಮಾಡದೆ) ತಡೆಹಿಡಿಯುವವರಿಗೆ ಹಾನಿಯನ್ನು ನೀಡು."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸೂರ್ಯ ಉದಯಿಸುವ ಪ್ರತಿದಿನವೂ, ಇಬ್ಬರು ದೇವದೂತರುಗಳು ಇಳಿದು ಬಂದು ಘೋಷಿಸುವರು. ಅವರಲ್ಲೊಬ್ಬರು ಹೇಳುವರು: ಓ ಅಲ್ಲಾಹ್! ಸತ್ಕರ್ಮಗಳಿಗೆ, ಕುಟುಂಬಕ್ಕೆ, ಅತಿಥಿಗಳಿಗೆ ಮತ್ತು ಸ್ವಯಂಪ್ರೇರಿತ ಉತ್ತಮ ಕಾರ್ಯಗಳಿಗೆ ಖರ್ಚು ಮಾಡುವವರಿಗೆ ಬದಲಿಯನ್ನು ನೀಡು, ಅವರು ಖರ್ಚು ಮಾಡಿದ್ದಕ್ಕೆ ಪ್ರತಿಯಾಗಿ ಅವರಿಗೆ ಒಳಿತು ಮತ್ತು ಸಮೃದ್ಧಿಯನ್ನು ದಯಪಾಲಿಸು. ಇನ್ನೊಬ್ಬರು ಹೇಳುವರು: ಓ ಅಲ್ಲಾಹ್! (ಖರ್ಚು ಮಾಡದೆ) ತಡೆಹಿಡಿಯುವವರಿಗೆ ಹಾನಿಯನ್ನು ನೀಡು ಮತ್ತು ಹಕ್ಕುದಾರರಿಗೆ ಕೊಡದೆ ಅವರು ತಡೆಹಿಡಿದ ಆ ಸಂಪತ್ತನ್ನು ನಾಶಪಡಿಸು.

فوائد الحديث

ದಾನ ಮಾಡುವ ಉದಾರಿಗಳಿಗೆ ಹೆಚ್ಚಿನ ಪರಿಹಾರವನ್ನು ನೀಡಲು ಮತ್ತು ಅವರು ಖರ್ಚು ಮಾಡಿದ್ದಕ್ಕಿಂತ ಉತ್ತಮವಾದದ್ದನ್ನು ಬದಲಿಯಾಗಿ ನೀಡಲು ಪ್ರಾರ್ಥಿಸಬಹುದು. ಜಿಪುಣತನದಿಂದ ಹಣವನ್ನು ತಡೆಹಿಡಿದು, ಅಲ್ಲಾಹು ಕಡ್ಡಾಯಗೊಳಿಸಿದ ಮಾರ್ಗಗಳಲ್ಲಿ ಖರ್ಚು ಮಾಡದವನ ವಿರುದ್ಧ ಕೂಡ ಅವನ ಸಂಪತ್ತು ನಾಶವಾಗಲು ಪ್ರಾರ್ಥಿಸಬಹುದು.

ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವ ನೀತಿವಂತ ಸತ್ಯವಿಶ್ವಾಸಿಗಳಿಗೆ ಒಳಿತು ಮತ್ತು ಸಮೃದ್ಧಿಯನ್ನು ದಯಪಾಲಿಸಲು ದೇವದೂತರುಗಳು ಪ್ರಾರ್ಥಿಸುತ್ತಾರೆ ಮತ್ತು ಅವರ ಪ್ರಾರ್ಥನೆಗೆ ಉತ್ತರ ದೊರೆಯುತ್ತದೆ ಎಂದು ತಿಳಿಸಲಾಗಿದೆ.

ಕಡ್ಡಾಯ ಕಾರ್ಯಗಳಿಗೆ ಮತ್ತು ಐಚ್ಛಿಕ ಕಾರ್ಯಗಳಿಗೆ ಖರ್ಚು ಮಾಡುವುದನ್ನು ಪ್ರೋತ್ಸಾಹಿಸಲಾಗಿದೆ. ಉದಾಹರಣೆಗೆ, ಕುಟುಂಬಕ್ಕೆ, ಕುಟುಂಬ ಸಂಬಂಧವನ್ನು ಕಾಪಾಡಿಕೊಳ್ಳುವುದಕ್ಕೆ ಮತ್ತು ಇತರ ಸತ್ಕರ್ಮಗಳಿಗೆ ಖರ್ಚು ಮಾಡುವುದು.

ಒಳಿತಿನ ಮಾರ್ಗಗಳಲ್ಲಿ ಖರ್ಚು ಮಾಡುವವರ ಶ್ರೇಷ್ಠತೆಯನ್ನು ಮತ್ತು ಅದರ ಪರಿಣಾಮವಾಗಿ ಅಲ್ಲಾಹು ಅವನಿಗೆ ಬದಲಿಯನ್ನು ನೀಡುತ್ತಾನೆ ಎಂದು ವಿವರಿಸಲಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನೀವು ಏನೇ ಖರ್ಚು ಮಾಡಿದರೂ ಅವನು ಅದಕ್ಕೆ ಬದಲಿಯನ್ನು ನೀಡುವನು. ಅವನು ಉಪಜೀವನ ಒದಗಿಸುವವರಲ್ಲಿ ಅತಿಶ್ರೇಷ್ಠನಾಗಿದ್ದಾನೆ.” [ಸಬಅ್:39]

ಈ ಪ್ರಾರ್ಥನೆಯು ಕಡ್ಡಾಯವಾಗಿ ಖರ್ಚು ಮಾಡಬೇಕಾದುದನ್ನು ತಡೆಹಿಡಿಯುವವನ ವಿರುದ್ಧವಾಗಿದೆ. ಅಪೇಕ್ಷಣೀಯ ಕಾರ್ಯಗಳಿಗಾಗಿ ಖರ್ಚು ಮಾಡದವನಿಗೆ ಇದು ಅನ್ವಯವಾಗುವುದಿಲ್ಲ. ಏಕೆಂದರೆ ಅಂತಹವರು ಈ ಪ್ರಾರ್ಥನೆಗೆ ಅರ್ಹರಾಗುವುದಿಲ್ಲ.

ಜಿಪುಣತನ ಮತ್ತು ದುರಾಸೆಯನ್ನು ನಿಷಿದ್ಧಗೊಳಿಸಲಾಗಿದೆ.

التصنيفات

Voluntary Charity