ಶಕುನ ನಂಬುವುದು ಶಿರ್ಕ್, ಶಕುನ ನಂಬುವುದು ಶಿರ್ಕ್, ಶಕುನ ನಂಬುವುದು ಶಿರ್ಕ್." (ಅವರು ಇದನ್ನು ಮೂರು ಬಾರಿ ಹೇಳಿದರು). "ಆದರೆ ನಮ್ಮಲ್ಲಿ…

ಶಕುನ ನಂಬುವುದು ಶಿರ್ಕ್, ಶಕುನ ನಂಬುವುದು ಶಿರ್ಕ್, ಶಕುನ ನಂಬುವುದು ಶಿರ್ಕ್." (ಅವರು ಇದನ್ನು ಮೂರು ಬಾರಿ ಹೇಳಿದರು). "ಆದರೆ ನಮ್ಮಲ್ಲಿ (ಶಕುನ ನಂಬದವರು) ಯಾರೂ ಇಲ್ಲ. ಆದರೆ ಅಲ್ಲಾಹು ಅದನ್ನು ತವಕ್ಕುಲ್ (ಭರವಸೆ) ನಿಂದ ನಿವಾರಿಸುತ್ತಾನೆ

ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಶಕುನ ನಂಬುವುದು ಶಿರ್ಕ್, ಶಕುನ ನಂಬುವುದು ಶಿರ್ಕ್, ಶಕುನ ನಂಬುವುದು ಶಿರ್ಕ್." (ಅವರು ಇದನ್ನು ಮೂರು ಬಾರಿ ಹೇಳಿದರು). "ಆದರೆ ನಮ್ಮಲ್ಲಿ (ಶಕುನ ನಂಬದವರು) ಯಾರೂ ಇಲ್ಲ. ಆದರೆ ಅಲ್ಲಾಹು ಅದನ್ನು ತವಕ್ಕುಲ್ (ಭರವಸೆ) ನಿಂದ ನಿವಾರಿಸುತ್ತಾನೆ."

[صحيح] [رواه أبو داود والترمذي وابن ماجه وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಶಕುನದಲ್ಲಿ ನಂಬಿಕೆಯಿಡುವುದರ ಬಗ್ಗೆ ಎಚ್ಚರಿಸಿದ್ದಾರೆ. ಶಕುನ ಎಂದರೆ ಹಕ್ಕಿ, ಪ್ರಾಣಿ, ಅಂಗವಿಕಲರು, ಕೆಲವು ಸಂಖ್ಯೆಗಳು, ದಿನಗಳು ಮುಂತಾದ ನಾವು ಕಾಣುವ ಅಥವಾ ಕೇಳುವ ಯಾವುದಾದರೂ ವಸ್ತುಗಳನ್ನು ಅಪಶಕುನವೆಂದು ನಂಬುವುದು. ಇಲ್ಲಿ ನಿರ್ದಿಷ್ಟವಾಗಿ "ತೈರ್" (ಹಕ್ಕಿ, ಶಕುನ) ಎಂಬ ಪದವನ್ನು ಉಲ್ಲೇಖಿಸಿದ್ದು ಏಕೆಂದರೆ ಅಜ್ಞಾನಕಾಲದಲ್ಲಿ ಇದು ಪ್ರಖ್ಯಾತವಾಗಿತ್ತು. ಪ್ರಯಾಣ ಅಥವಾ ವ್ಯಾಪಾರದಂತಹ ಚಟುವಟಿಕೆಗಳ ಪ್ರಾರಂಭದಲ್ಲಿ ಜನರು ಹಕ್ಕಿಯನ್ನು ಹಾರಿಸುವ ಮೂಲಕ ಶಕುನ ನೋಡುತ್ತಿದ್ದ ಕಾರಣ ಈ ಹೆಸರು ಬಂದಿದೆ. ಹಕ್ಕಿ ಬಲಕ್ಕೆ ಹಾರಿಹೋದರೆ, ಅವರು ಅದನ್ನು ಶುಭಶಕುನವೆಂದು ಪರಿಗಣಿಸಿ ತಮ್ಮ ಕಾರ್ಯದಲ್ಲಿ ಮುಂದುವರಿಯುತ್ತಿದ್ದರು. ಆದರೆ ಅದು ಎಡಕ್ಕೆ ಹಾರಿಹೋದರೆ, ಅವರು ಅದನ್ನು ಅಪಶಕುನವೆಂದು ಪರಿಗಣಿಸಿ ತಮ್ಮ ಉದ್ದೇಶಿತ ಕಾರ್ಯವನ್ನು ಮೊಟಕುಗೊಳಿಸುತ್ತಿದ್ದರು. ಅಂತಹ ನಂಬಿಕೆಗಳು ಶಿರ್ಕ್ (ಬಹುದೇವತ್ವ) ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಘೋಷಿಸಿದರು. ಅಪಶಕುನವನ್ನು ನಂಬುವುದು ಶಿರ್ಕ್ ಏಕೆಂದರೆ ಒಳಿತನ್ನು ತರುವವನು ಮತ್ತು ಹಾನಿಯನ್ನು ತಡೆಗಟ್ಟುವವನು ಅಲ್ಲಾಹು ಮಾತ್ರ. ಅದರಲ್ಲಿ ಅವನಿಗೆ ಯಾವುದೇ ಪಾಲುದಾರರಿಲ್ಲ. ಒಬ್ಬ ಸತ್ಯವಿಶ್ವಾಸಿಯ ಹೃದಯದಲ್ಲಿ ಕೆಲವೊಮ್ಮೆ ಅಪಶಕುನದ ಅನುಭವವು ಉಂಟಾಗಬಹುದು ಎಂದು ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ. ಆದರೆ ಅವನು ಅಲ್ಲಾಹನಲ್ಲಿ ಭರವಸೆಯಿಟ್ಟು ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಅದನ್ನು ಹಿಮ್ಮೆಟ್ಟಿಸಬೇಕು.

فوائد الحديث

ಶಕುನದಲ್ಲಿ ನಂಬಿಕೆಯಿಡುವುದು ಶಿರ್ಕ್. ಏಕೆಂದರೆ ಅದರಿಂದ ಅಲ್ಲಾಹೇತರರ ಮೇಲೆ ಅವಲಂಬಿತವಾಗಬೇಕಾಗುತ್ತದೆ.

ಪ್ರಮುಖ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಅವು ಹೃದಯದಲ್ಲಿ ದೃಢವಾಗಿ ತಳವೂರಲು ಅವುಗಳನ್ನು ಪುನರುಚ್ಛರಿಸುವುದರ ಮಹತ್ವವನ್ನು ತಿಳಿಸಲಾಗಿದೆ.

ಅಲ್ಲಾಹನಲ್ಲಿರುವ ಭರವಸೆಯು ಅಪಶಕುನಗಳನ್ನು ತೊಲಗಿಸುತ್ತದೆ.

ಅಲ್ಲಾಹನ ಮೇಲೆ ಮಾತ್ರ ಭರವಸೆಯಿಡಲು ಮತ್ತು ಹೃದಯವನ್ನು ಅವನೊಂದಿಗೆ ಜೋಡಿಸಿಕೊಳ್ಳಲು ಆದೇಶಿಸಲಾಗಿದೆ.

التصنيفات

Polytheism, Merits of Heart Acts