ನಿಮ್ಮಲ್ಲೊಬ್ಬರು ತನ್ನ ಸಹೋದರನನ್ನು ಭೇಟಿಯಾದರೆ ಅವನಿಗೆ ಸಲಾಂ ಹೇಳಲಿ. ನಂತರ ಅವರಿಬ್ಬರ ನಡುವೆ ಒಂದು ಮರ, ಅಥವಾ ಗೋಡೆ, ಅಥವಾ ಕಲ್ಲು…

ನಿಮ್ಮಲ್ಲೊಬ್ಬರು ತನ್ನ ಸಹೋದರನನ್ನು ಭೇಟಿಯಾದರೆ ಅವನಿಗೆ ಸಲಾಂ ಹೇಳಲಿ. ನಂತರ ಅವರಿಬ್ಬರ ನಡುವೆ ಒಂದು ಮರ, ಅಥವಾ ಗೋಡೆ, ಅಥವಾ ಕಲ್ಲು ಅಡ್ಡವಾಗಿ ಬಂದು, ನಂತರ ಪುನಃ ಅವರು ಭೇಟಿಯಾದರೆ ಅವನಿಗೆ ಮತ್ತೊಮ್ಮೆ ಸಲಾಂ ಹೇಳಲಿ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬರು ತನ್ನ ಸಹೋದರನನ್ನು ಭೇಟಿಯಾದರೆ ಅವನಿಗೆ ಸಲಾಂ ಹೇಳಲಿ. ನಂತರ ಅವರಿಬ್ಬರ ನಡುವೆ ಒಂದು ಮರ, ಅಥವಾ ಗೋಡೆ, ಅಥವಾ ಕಲ್ಲು ಅಡ್ಡವಾಗಿ ಬಂದು, ನಂತರ ಪುನಃ ಅವರು ಭೇಟಿಯಾದರೆ ಅವನಿಗೆ ಮತ್ತೊಮ್ಮೆ ಸಲಾಂ ಹೇಳಲಿ."

[صحيح] [رواه أبو داود]

الشرح

ಒಬ್ಬ ಮುಸಲ್ಮಾನನು ತನ್ನ ಸಹೋದರನನ್ನು ಭೇಟಿಯಾದಾಗಲೆಲ್ಲಾ ಸಲಾಂ ಹೇಳಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಪ್ರೋತ್ಸಾಹಿಸುತ್ತಿದ್ದಾರೆ. ಎಲ್ಲಿಯವರೆಗೆಂದರೆ, ಅವರಿಬ್ಬರು ಜೊತೆಯಾಗಿ ನಡೆಯುತ್ತಿದ್ದು, ಅವರಿಬ್ಬರ ನಡುವೆ ಒಂದು ಮರ, ಅಥವಾ ಗೋಡೆ, ಅಥವಾ ಕಲ್ಲು ಅಡ್ಡವಾಗಿ ಬಂದು, ನಂತರ ಪುನಃ ಅವರು ಭೇಟಿಯಾದರೆ ಅವನಿಗೆ ಮತ್ತೊಮ್ಮೆ ಸಲಾಂ ಹೇಳಬೇಕಾಗಿದೆ.

فوائد الحديث

ಸಲಾಂ ಹೇಳುವುದನ್ನು ವ್ಯಾಪಕಗೊಳಿಸುವುದು ಮತ್ತು ಪರಿಸ್ಥಿತಿಯು ಬದಲಾಗುವಾಗಲೆಲ್ಲ ಪುನಃ ಸಲಾಂ ಹೇಳುವುದು ಅಪೇಕ್ಷಣೀಯವಾಗಿದೆ.

ಸಲಾಂ ಹೇಳುವ ಸುನ್ನತ್ತನ್ನು ವ್ಯಾಪಕಗೊಳಿಸಲು ಮತ್ತು ಅದರಲ್ಲಿ ಉತ್ಪ್ರೇಕ್ಷೆಯನ್ನು ತೋರಿಸಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅತಿಯಾದ ಆಸಕ್ತಿ ತೋರುತ್ತಿದ್ದರು. ಏಕೆಂದರೆ ಅದರಿಂದ ಮುಸಲ್ಮಾನರ ನಡುವೆ ಪ್ರೀತಿ ಮತ್ತು ಸಲುಗೆ ಉಂಟಾಗುತ್ತದೆ.

ಸಲಾಂ ಎಂದರೆ ಮೊದಲ ಬಾರಿ ಭೇಟಿಯಾಗುವಾಗ ಹಸ್ತಲಾಘವ ಮಾಡುವುದರೊಂದಿಗೆ, "ಅಸ್ಸಲಾಂ ಅಲೈಕುಂ" ಅಥವಾ "ಅಸ್ಸಲಾಂ ಅಲೈಕುಂ ವರಹ್ಮತುಲ್ಲಾಹಿ ವಬರಕಾತುಹು" ಎಂದು ಹೇಳುವುದಾಗಿದೆ.

ಸಲಾಂ ಒಂದು ಪ್ರಾರ್ಥನೆಯಾಗಿದೆ. ಮುಸಲ್ಮಾನರು ಒಬ್ಬರು ಇನ್ನೊಬ್ಬರ ಪ್ರಾರ್ಥನೆಯ ಅಗತ್ಯವುಳ್ಳವರಾಗಿದ್ದಾರೆ. ಅದು ಪುನಃ ಪುನಃ ಹೇಳುವುದಾಗಿದ್ದರೂ ಸಹ.

التصنيفات

Manners of Greeting and Seeking Permission