ಒಬ್ಬ ಮುಸ್ಲಿಮನೊಡನೆ ಸಮಾಧಿಯಲ್ಲಿ ಪ್ರಶ್ನೆ ಕೇಳುವಾಗ, ಅವನು ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು…

ಒಬ್ಬ ಮುಸ್ಲಿಮನೊಡನೆ ಸಮಾಧಿಯಲ್ಲಿ ಪ್ರಶ್ನೆ ಕೇಳುವಾಗ, ಅವನು ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯ ವಹಿಸುತ್ತಾನೆ

ಬರಾಅ್ ಬಿನ್ ಆಝಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ಮುಸ್ಲಿಮನೊಡನೆ ಸಮಾಧಿಯಲ್ಲಿ ಪ್ರಶ್ನೆ ಕೇಳುವಾಗ, ಅವನು ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯ ವಹಿಸುತ್ತಾನೆ." ಇದನ್ನೇ ಅಲ್ಲಾಹು ಹೀಗೆ ಹೇಳಿದ್ದಾನೆ:"ಅಲ್ಲಾಹು ಸತ್ಯವಿಶ್ವಾಸಿಗಳನ್ನು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಸದೃಢ ವಚನದ ಮೂಲಕ ದೃಢವಾಗಿ ನಿಲ್ಲಿಸುತ್ತಾನೆ." [ಇಬ್ರಾಹೀಂ: 27].

[صحيح] [متفق عليه]

الشرح

ಸಮಾಧಿಯಲ್ಲಿ ಸತ್ಯವಿಶ್ವಾಸಿಯನ್ನು ಪ್ರಶ್ನಿಸಲಾಗುತ್ತದೆ. ಪ್ರಶ್ನೆ ಕೇಳುವ ಕೆಲಸವನ್ನು ವಹಿಸಿಕೊಡಲಾದ—ಅನೇಕ ಹದೀಸ್‌ಗಳಲ್ಲಿ ವರದಿಯಾದ ಪ್ರಕಾರ ಇವರ ಹೆಸರು ಮುನ್ಕರ್ ಮತ್ತು ನಕೀರ್—ಎರಡು ದೇವದೂತರು ಅವನೊಡನೆ ಪ್ರಶ್ನೆ ಕೇಳುವರು. ಆಗ ಅವನು, ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷ್ಯ ವಹಿಸುವನು. ಇದೇ ಅಲ್ಲಾಹು ಈ ಕೆಳಗಿನ ವಚನದಲ್ಲಿ ಹೇಳಿದ "ಸದೃಢ ವಚನ" ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಸತ್ಯವಿಶ್ವಾಸಿಗಳನ್ನು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಸದೃಢ ವಚನದ ಮೂಲಕ ದೃಢವಾಗಿ ನಿಲ್ಲಿಸುತ್ತಾನೆ." [ಇಬ್ರಾಹೀಂ: 27].

فوائد الحديث

ಸಮಾಧಿಯಲ್ಲಿನ ವಿಚಾರಣೆಯು ಸತ್ಯವಾಗಿದೆ.

ಸದೃಢ ವಚನದಲ್ಲಿ ದೃಢವಾಗಿ ನಿಲ್ಲಿಸುವ ಮೂಲಕ ಅಲ್ಲಾಹು ತನ್ನ ಸತ್ಯವಿಶ್ವಾಸಿ ದಾಸರ ಮೇಲೆ ತೋರಿದ ವಿಶಾಲವಾದ ಔದಾರ್ಯವನ್ನು ತಿಳಿಸಲಾಗಿದೆ.

ಏಕದೇವವಿಶ್ವಾಸದ ಸಾಕ್ಷ್ಯ ಮತ್ತು ಅದರಲ್ಲೇ ಸಾವನ್ನಪ್ಪುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ.

ಅಲ್ಲಾಹು ಸತ್ಯವಿಶ್ವಾಸಿಗಳನ್ನು ಇಹಲೋಕದಲ್ಲಿ ವಿಶ್ವಾಸದಲ್ಲಿ ದೃಢವಾಗಿ ನಿಲ್ಲಿಸುವ ಮೂಲಕ ಮತ್ತು ನೇರ ಮಾರ್ಗಕ್ಕೆ ಸೇರಿಸುವ ಮೂಲಕ ಸದೃಢವಾಗಿ ನಿಲ್ಲಿಸುತ್ತಾನೆ. ಮರಣದ ಸಮಯದಲ್ಲಿ ಏಕದೇವವಿಶ್ವಾಸದಲ್ಲಿ ಸಾವನ್ನಪ್ಪುವಂತೆ ಮಾಡುವ ಮೂಲಕ ಸದೃಢವಾಗಿ ನಿಲ್ಲಿಸುತ್ತಾನೆ. ಸಮಾಧಿಯಲ್ಲಿ ಎರಡು ದೇವದೂತರುಗಳು ಪ್ರಶ್ನಿಸುವಾಗ ಸದೃಢವಾಗಿ ನಿಲ್ಲಿಸುತ್ತಾನೆ.

التصنيفات

The Barzakh Life (After death Period)