إعدادات العرض
ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಲ್ಬಿಯ ಹೀಗಿತ್ತು: "ಲಬ್ಬೈಕ ಅಲ್ಲಾಹುಮ್ಮ ಲಬ್ಬೈಕ್, ಲಬ್ಬೈಕ…
ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಲ್ಬಿಯ ಹೀಗಿತ್ತು: "ಲಬ್ಬೈಕ ಅಲ್ಲಾಹುಮ್ಮ ಲಬ್ಬೈಕ್, ಲಬ್ಬೈಕ ಲಾ ಶರೀಕ ಲಕ ಲಬ್ಬೈಕ್, ಇನ್ನಲ್-ಹಮ್ದ ವನ್ನಿಅಮತ ಲಕ ವಲ್-ಮುಲ್ಕ್, ಲಾ ಶರೀಕ ಲಕ್
ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಲ್ಬಿಯ ಹೀಗಿತ್ತು: "ಲಬ್ಬೈಕ ಅಲ್ಲಾಹುಮ್ಮ ಲಬ್ಬೈಕ್, ಲಬ್ಬೈಕ ಲಾ ಶರೀಕ ಲಕ ಲಬ್ಬೈಕ್, ಇನ್ನಲ್-ಹಮ್ದ ವನ್ನಿಅಮತ ಲಕ ವಲ್-ಮುಲ್ಕ್, ಲಾ ಶರೀಕ ಲಕ್." (ಓ ಅಲ್ಲಾಹ್, ನಾನು ನಿನ್ನ ಕರೆಗೆ ಓಗೊಡುತ್ತೇನೆ, ನಾನು ಓಗೊಡುತ್ತೇನೆ. ನಾನು ನಿನ್ನ ಕರೆಗೆ ಓಗೊಡುತ್ತೇನೆ, ನಿನಗೆ ಯಾವುದೇ ಸಹಭಾಗಿಗಳಿಲ್ಲ, ನಾನು ಓಗೊಡುತ್ತೇನೆ. ಖಂಡಿತವಾಗಿಯೂ ಸ್ತುತಿ, ಅನುಗ್ರಹ ಮತ್ತು ಸಾರ್ವಭೌಮತ್ವವು ನಿನಗೆ ಸೇರಿದ್ದು. ಅದರಲ್ಲಿ ನಿನಗೆ ಯಾವುದೇ ಸಹಭಾಗಿಗಳಿಲ್ಲ). ಅಬ್ದುಲ್ಲಾ ಇಬ್ನ್ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅದಕ್ಕೆ ಇದನ್ನು ಸೇರಿಸುತ್ತಿದ್ದರು: ಲಬ್ಬೈಕ ಲಬ್ಬೈಕ, ವ ಸಅದಯ್ಕ, ವಲ್-ಖೈರು ಬಿಯದೈಕ್. ಲಬ್ಬೈಕ ವರ್ರಗ್ಬಾಉ ಇಲೈಕ ವಲ್-ಅಮಲ್ (ನಾನು ನಿನ್ನ ಕರೆಗೆ ಓಗೊಡುತ್ತೇನೆ, ನಾನು ನಿನ್ನ ಕರೆಗೆ ಓಗೊಡುತ್ತೇನೆ, ಮತ್ತು ನಿನ್ನ ಕರೆಗೆ ಓಗೊಡುವುದರಲ್ಲೇ ನನ್ನ ಸೌಭಾಗ್ಯವಿದೆ. ಒಳಿತೆಲ್ಲವೂ ನಿನ್ನ ಕೈಯಲ್ಲಿದೆ. ನಾನು ನಿನ್ನ ಕರೆಗೆ ಓಗೊಡುತ್ತೇನೆ, ಬಯಕೆಗಳು ನಿನ್ನ ಕಡೆಗಿದೆ ಮತ್ತು ಕರ್ಮಗಳು ನಿನಗಾಗಿಯೇ ಇದೆ).
الترجمة
العربية বাংলা Bosanski English Español فارسی Français Bahasa Indonesia Tagalog Türkçe اردو 中文 हिन्दी ئۇيغۇرچە Hausa Português Kurdî සිංහල Русский Kiswahili Tiếng Việt অসমীয়া ગુજરાતી Nederlands മലയാളം Română Magyar ქართული Mooreالشرح
ಹಜ್ಜ್ ಅಥವಾ ಉಮ್ರಾದ ಆಚರಣೆಗಳನ್ನು ಪ್ರಾರಂಭಿಸಲು ಉದ್ದೇಶಿಸಿದಾಗ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಿದ್ದ ತಲ್ಬಿಯ ಹೀಗಿತ್ತು: "ಓ ಅಲ್ಲಾಹ್, ನಾನು ನಿನ್ನ ಕರೆಗೆ ಓಗೊಡುತ್ತೇನೆ, ನಾನು ಓಗೊಡುತ್ತೇನೆ." ನಿಷ್ಕಳಂಕತೆ, ಏಕದೇವಾರಾಧನೆ, ಹಜ್ಜ್ ಮುಂತಾದವುಗಳು ಸೇರಿದಂತೆ ನೀನು ನಮ್ಮನ್ನು ಕರೆದ ವಿಷಯಗಳಿಗೆ ಸಂಬಂಧಿಸಿದಂತೆ ಮತ್ತೆ ಮತ್ತೆ ಓಗೊಡುತ್ತಿದ್ದೇನೆ. "ನಾನು ನಿನ್ನ ಕರೆಗೆ ಓಗೊಡುತ್ತೇನೆ, ನಿನಗೆ ಯಾವುದೇ ಸಹಭಾಗಿಗಳಿಲ್ಲ, ನಾನು ಓಗೊಡುತ್ತೇನೆ." ಏಕೆಂದರೆ ನೀನು ಮಾತ್ರ ಆರಾಧನೆಗೆ ಅರ್ಹನು. ನಿನ್ನ ಪ್ರಭುತ್ವ, ಆರಾಧನೆ, ಹೆಸರುಗಳು ಮತ್ತು ಗುಣಲಕ್ಷಣಗಳಲ್ಲಿ ನಿನಗೆ ಯಾವುದೇ ಸಹಭಾಗಿಗಳಿಲ್ಲ. "ಖಂಡಿತವಾಗಿಯೂ ಸ್ತುತಿ", ಕೃತಜ್ಞತೆ, ಪ್ರಶಂಸೆ "ಮತ್ತು ಅನುಗ್ರಹವು" ನಿನ್ನಿಂದಾಗಿವೆ, ನೀನೇ ಅವುಗಳನ್ನು ನೀಡುವವನು. "ಸಾರ್ವಭೌಮತ್ವವು" ಎಲ್ಲಾ ಸಂದರ್ಭಗಳಲ್ಲಿಯೂ ನಿನಗೇ ಅರ್ಹವಾಗಿದೆ. "ನಿನಗೆ ಯಾವುದೇ ಸಹಭಾಗಿಗಳಿಲ್ಲ". ಏಕೆಂದರೆ ಅವುಗಳೆಲ್ಲವೂ ನಿನಗೆ ಮಾತ್ರ ಸೇರಿದ್ದು. ಇಬ್ನ್ ಉಮರ್ ಅದರಲ್ಲಿ ಇನ್ನೂ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಸೇರಿಸುತ್ತಿದ್ದರು: "ನಾನು ನಿನ್ನ ಕರೆಗೆ ಓಗೊಡುತ್ತೇನೆ, ನಾನು ನಿನ್ನ ಕರೆಗೆ ಓಗೊಡುತ್ತೇನೆ, ಮತ್ತು ನಿನ್ನ ಕರೆಗೆ ಓಗೊಡುವುದರಲ್ಲೇ ನನ್ನ ಸೌಭಾಗ್ಯವಿದೆ." ಅಂದರೆ, ನನಗೆ ಸೌಭಾಗ್ಯದ ನಂತರ ಸೌಭಾಗ್ಯವನ್ನು ಕರುಣಿಸು. "ಒಳಿತೆಲ್ಲವೂ ನಿನ್ನ ಕೈಯಲ್ಲಿದೆ." ಎಲ್ಲವೂ ನಿನ್ನ ಅನುಗ್ರಹ ಮತ್ತು ಕೃಪೆಯಿಂದಲೇ ಆಗಿದೆ. "ನಾನು ನಿನ್ನ ಕರೆಗೆ ಓಗೊಡುತ್ತೇನೆ, ಬಯಕೆಗಳು ನಿನ್ನ ಕಡೆಗಿದೆ." ಯಾರ ಕೈಯಲ್ಲಿ ಒಳಿತುಗಳಿವೆಯೋ ಅವನ ಕಡೆಗೇ ಮನವಿ ಮತ್ತು ಬೇಡಿಕೆಗಳನ್ನಿಡಲಾಗುತ್ತದೆ. "ಮತ್ತು ಕರ್ಮಗಳು ನಿನಗಾಗಿಯೇ ಇದೆ" ಏಕೆಂದರೆ ಆರಾಧನೆಗೆ ನೀನು ಮಾತ್ರ ಅರ್ಹನು.فوائد الحديث
ಹಜ್ಜ್ ಮತ್ತು ಉಮ್ರಾದಲ್ಲಿ ತಲ್ಬಿಯ ಹೇಳುವುದು ಧಾರ್ಮಿಕ ನಿಯಮವಾಗಿದೆ. ಅಷ್ಟೇ ಅಲ್ಲ ಅದು ಹೆಚ್ಚು ಒತ್ತುಕೊಡಲಾದ ವಿಷಯವಾಗಿದೆ. ಏಕೆಂದರೆ ಅದು ಅವುಗಳ ವಿಶೇಷ ಘೋಷಣೆಯಾಗಿದೆ. ತಕ್ಬೀರ್ ನಮಾಝಿನ ಘೋಷಣೆಯಂತೆ.
ಇಬ್ನುಲ್-ಮುನೀರ್ ಹೇಳಿದರು: ತಲ್ಬಿಯವನ್ನು ಧಾರ್ಮಿಕ ನಿಯಮವಾಗಿ ಮಾಡಿರುವುದರಲ್ಲಿ ಅಲ್ಲಾಹು ತನ್ನ ದಾಸರಿಗೆ ನೀಡುವ ಗೌರವದ ಕಡೆಗೆ ಸೂಚನೆಯಿದೆ. ಏಕೆಂದರೆ ಅವನ ಭವನಕ್ಕೆ ಅವರ ಆಗಮನವು ಅವನ ಆಹ್ವಾನದ ನಿಮಿತ್ತ ಮಾತ್ರವಾಗಿದೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಲಿಸಿದ ತಲ್ಬಿಯವನ್ನು ಅವಲಂಬಿಸಿಕೊಳ್ಳುವುದು ಶ್ರೇಷ್ಠವಾಗಿದೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಮೋದಿಸಿದ್ದರಿಂದ ಹೆಚ್ಚುವರಿಯನ್ನು ಸೇರಿಸುವುದರಲ್ಲಿ ತಪ್ಪೇನಿಲ್ಲ. ಇಬ್ನ್ ಹಜರ್ ಹೇಳಿದರು: "ಇದು ಅತ್ಯಂತ ಸಮತೋಲಿತ ಮಾರ್ಗವಾಗಿದೆ. ಮರ್‌ಫೂಅ್ (ಪ್ರವಾದಿಯಿಂದ ವರದಿಯಾದದ್ದು) ಆಗಿ ಬಂದಿರುವುದನ್ನು ಪ್ರತ್ಯೇಕವಾಗಿ ಪಠಿಸಬೇಕು (ಅದನ್ನು ಇತರರ ಮಾತುಗಳಿಗೆ ಸೇರಿಸಬಾರದು). ಮೌಕೂಫ್ (ಸಹಾಬಿಯಿಂದ ವರದಿಯಾದದ್ದು) ಆಗಿರುವುದನ್ನು ಸ್ವೀಕರಿಸುವುದಾದರೆ, ಅಥವಾ ಅದಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಸ್ವತಃ ರಚಿಸಿದ್ದಾಗಿದ್ದರೆ, ಅದನ್ನು ಪ್ರತ್ಯೇಕವಾಗಿ ಹೇಳಬೇಕು. ಅದು ಮರ್‌ಫೂಅ್ ನೊಂದಿಗೆ ಬೆರೆಯದಂತೆ ನೋಡಿಕೊಳ್ಳಬೇಕು. ಇದು ತಶಹ್ಹುದ್ ಸಮಯದಲ್ಲಿ ಪ್ರಾರ್ಥಿಸುವುದಕ್ಕೆ ಸಮಾನವಾಗಿದೆ. ಅಲ್ಲಿ ಪ್ರಾರ್ಥಿಸುವುದರ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಂತರ ಅವನು ತನಗೆ ಇಷ್ಟವಾದ ಸ್ತುತಿ ಮತ್ತು ಬೇಡಿಕೆಯನ್ನು ಆರಿಸಿಕೊಳ್ಳಲಿ." ಅಂದರೆ, ಮರ್‌ಫೂಅ್ ಆಗಿ ಬಂದಿರುವ ಪ್ರಾರ್ಥನೆಗಳನ್ನು ಪ್ರಾರ್ಥಿಸಿದ ನಂತರ.
ಪುರುಷರು ತಲ್ಬಿಯ ಹೇಳುವಾಗ ತಮ್ಮ ಧ್ವನಿಯನ್ನು ಎತ್ತುವುದು ಅಪೇಕ್ಷಣೀಯವಾಗಿದೆ. ಆದರೆ ಮಹಿಳೆಯರು, ಫಿತ್ನವಾಗಬಹುದೆಂಬ ಭಯದಿಂದ ತಮ್ಮ ಧ್ವನಿಯನ್ನು ತಗ್ಗಿಸಬೇಕು.