إعدادات العرض
ಜನರು ಪೂರ್ವ ಪ್ರವಾದಿಗಳಿಂದ ಪಡೆದ ಮಾತುಗಳಲ್ಲಿ ಒಂದು ಏನೆಂದರೆ: ನಿನಗೆ ನಾಚಿಕೆ ಇಲ್ಲದಿದ್ದರೆ ನೀನಿಚ್ಛಿಸುವುದನ್ನು ಮಾಡು
ಜನರು ಪೂರ್ವ ಪ್ರವಾದಿಗಳಿಂದ ಪಡೆದ ಮಾತುಗಳಲ್ಲಿ ಒಂದು ಏನೆಂದರೆ: ನಿನಗೆ ನಾಚಿಕೆ ಇಲ್ಲದಿದ್ದರೆ ನೀನಿಚ್ಛಿಸುವುದನ್ನು ಮಾಡು
ಅಬೂ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಜನರು ಪೂರ್ವ ಪ್ರವಾದಿಗಳಿಂದ ಪಡೆದ ಮಾತುಗಳಲ್ಲಿ ಒಂದು ಏನೆಂದರೆ: ನಿನಗೆ ನಾಚಿಕೆ ಇಲ್ಲದಿದ್ದರೆ ನೀನಿಚ್ಛಿಸುವುದನ್ನು ಮಾಡು."
الترجمة
العربية বাংলা Bosanski English Español فارسی Français Bahasa Indonesia Tagalog Türkçe اردو 中文 हिन्दी Hausa Kurdî Português සිංහල Русский Nederlands অসমীয়া Tiếng Việt Kiswahili ગુજરાતી پښتو አማርኛ Oromoo ไทย Română മലയാളം Malagasy नेपाली Deutsch Кыргызча తెలుగు ქართული Moore Magyar Svenska Македонски Українськаالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಪೂರ್ವ ಪ್ರವಾದಿಗಳ ಹಿತವಚನಗಳ ಪೈಕಿ ಜನರ ನಡುವೆ ಪ್ರಸಾರವಾದ ಮತ್ತು ಜನರು ತಲೆಮಾರುಗಳ ನಂತರ ತಲೆಮಾರುಗಳಿಗೆ ಹಸ್ತಾಂತರಿಸಿ, ಈ ಸಮುದಾಯದವರೆಗೆ ತಲುಪಿದ ಒಂದು ಹಿತವಚನ ಹೀಗಿದೆ: ಅದೇನೆಂದರೆ, ನೀವು ಮಾಡಲು ಉದ್ದೇಶಿಸುವ ಕಾರ್ಯದ ಬಗ್ಗೆ ಆಲೋಚಿಸಿ. ಅದು ನಾಚಿಕೆಯ ಕಾರ್ಯವಲ್ಲದಿದ್ದರೆ ಮಾಡಿರಿ. ನಾಚಿಕೆಯ ಕಾರ್ಯವಾಗಿದ್ದರೆ ಮಾಡಬೇಡಿ. ಏಕೆಂದರೆ, ನಾಚಿಕೆಯು ಕೆಟ್ಟಕೃತ್ಯಗಳನ್ನು ಮಾಡದಂತೆ ತಡೆಯುತ್ತದೆ. ನಾಚಿಕೆಯೆಂಬುದು ಇಲ್ಲದಿದ್ದರೆ ಯಾವುದೇ ಅಶ್ಲೀಲ ಮತ್ತು ದುಷ್ಟಕೃತ್ಯಗಳನ್ನು ಮಾಡಬಹುದಾಗಿದೆ.فوائد الحديث
ನಾಚಿಕೆಯು ಉದಾತ್ತ ನಡವಳಿಕೆಯ ಮೂಲ ಅಡಿಪಾಯವಾಗಿದೆ.
ನಾಚಿಕೆಯು ಸಂದೇಶವಾಹಕರುಗಳ ಗುಣವಾಗಿದೆ. ಅದು ಅವರಿಂದ ಉತ್ತರಾಧಿಕಾರವಾಗಿ ಬಂದಿದೆ.
ಒಬ್ಬ ಮುಸಲ್ಮಾನನು ಸುಂದರವಾದ ಮತ್ತು ಅಂದವಾದ ಕಾರ್ಯಗಳನ್ನು ಮಾಡಲು ಮತ್ತು ಕೆಟ್ಟ ಹಾಗೂ ಹೊಲಸು ಕಾರ್ಯಗಳನ್ನು ತೊರೆಯಲು ನಾಚಿಕೆಯು ಕಾರಣವಾಗುತ್ತದೆ.
ನವವಿ ಹೇಳಿದರು: "ಇದು ಅನುಮತಿ ನೀಡುವ ರೂಪದಲ್ಲಿರುವ ಆಜ್ಞೆಯಾಗಿದೆ. ಅಂದರೆ, ನೀವೊಂದು ಕಾರ್ಯವನ್ನು ಮಾಡಲು ಉದ್ದೇಶಿಸಿದರೆ, ಆ ಕಾರ್ಯವನ್ನು ಅಲ್ಲಾಹನ ಮುಂದೆ ಮತ್ತು ಜನರ ಮುಂದೆ ಮಾಡಲು ನೀವು ನಾಚುವುದಿಲ್ಲವಾದರೆ ಮಾಡಿರಿ. ನಾಚುವುದಾದರೆ ಮಾಡಬೇಡಿ. ಇದು ಇಸ್ಲಾಂ ಧರ್ಮದ ತಿರುಳು. ಇದರ ತಾತ್ಪರ್ಯವೇನೆಂದರೆ, ಕಡ್ಡಾಯವಾಗಿರುವ ಮತ್ತು ಪ್ರೋತ್ಸಾಹಕರವಾಗಿರುವ ಕಾರ್ಯಗಳನ್ನು ತೊರೆಯುವುದರಿಂದ ನಾಚಿಕೆಪಡಬೇಕು ಮತ್ತು ನಿಷೇಧಿಸಲಾದ ಹಾಗೂ ಅಸಹ್ಯಪಡಲಾದ ಕಾರ್ಯಗಳನ್ನು ಮಾಡಲು ನಾಚಿಕೆಪಡಬೇಕು. ಇನ್ನು ಅನುಮತಿಯಿರುವ ಕಾರ್ಯದ ಬಗ್ಗೆ ಹೇಳುವುದಾದರೆ ಅದನ್ನು ಮಾಡಲು ಅಥವಾ ತೊರೆಯಲು ನಾಚಿಕೆ ಪಡುವುದು ಸಮ್ಮತಾರ್ಹ. ಒಟ್ಟಿನಲ್ಲಿ, ಈ ಹದೀಸ್ ಪಂಚ ನಿಯಮಗಳನ್ನು ಒಳಗೊಂಡಿದೆ. ಹೀಗೆ ಹೇಳಲಾಗುತ್ತದೆ: ಇದು ಬೆದರಿಕೆಯ ರೂಪದಲ್ಲಿರುವ ಆಜ್ಞೆಯಾಗಿದೆ. ಅಂದರೆ, ನಿಮಗೆ ನಾಚಿಕೆಯಿಲ್ಲದಿದ್ದರೆ, ನಿಮಗೆ ಇಷ್ಟವಿರುವುದನ್ನು ಮಾಡಿರಿ. ಅಲ್ಲಾಹು ನಿಮಗೆ ಅದಕ್ಕೆ ತಕ್ಕ ಪ್ರತಿಫಲ ನೀಡುವನು. ಹೀಗೂ ಹೇಳಲಾಗುತ್ತದೆ: ಇದು ತಿಳುವಳಿಕೆ ನೀಡುವ ರೂಪದಲ್ಲಿರುವ ಆಜ್ಞೆಯಾಗಿದೆ. ಅಂದರೆ, ನಾಚಿಕೆಯಿಲ್ಲದವನು ಅವನಿಗೆ ತೋಚಿದ್ದನ್ನು ಮಾಡುತ್ತಾನೆ."
التصنيفات
Praiseworthy Morals