ಕೆನ್ನೆಗೆ ಹೊಡೆಯುವವರು, ಅಂಗಿಯನ್ನು ಹರಿಯುವವರು ಮತ್ತು ಅಜ್ಞಾನಕಾಲದ ಪ್ರಾರ್ಥನೆಗಳನ್ನು ಪ್ರಾರ್ಥಿಸುವವರು ನಮ್ಮಲ್ಲಿ…

ಕೆನ್ನೆಗೆ ಹೊಡೆಯುವವರು, ಅಂಗಿಯನ್ನು ಹರಿಯುವವರು ಮತ್ತು ಅಜ್ಞಾನಕಾಲದ ಪ್ರಾರ್ಥನೆಗಳನ್ನು ಪ್ರಾರ್ಥಿಸುವವರು ನಮ್ಮಲ್ಲಿ ಸೇರಿದವರಲ್ಲ

ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕೆನ್ನೆಗೆ ಹೊಡೆಯುವವರು, ಅಂಗಿಯನ್ನು ಹರಿಯುವವರು ಮತ್ತು ಅಜ್ಞಾನಕಾಲದ ಪ್ರಾರ್ಥನೆಗಳನ್ನು ಪ್ರಾರ್ಥಿಸುವವರು ನಮ್ಮಲ್ಲಿ ಸೇರಿದವರಲ್ಲ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಅಜ್ಞಾನಕಾಲದ ಜನರು ಮಾಡುತ್ತಿದ್ದ ಕೆಲವು ಕೃತ್ಯಗಳನ್ನು ಎಚ್ಚರಿಸುತ್ತಾ ಮತ್ತು ನಿಷೇಧಿಸುತ್ತಾ ಹಾಗೆ ಮಾಡುವವರು ನಮ್ಮವರಲ್ಲ ಎಂದು ಹೇಳಿದ್ದಾರೆ. ಒಂದು: ಕೆನ್ನೆಗೆ ಹೊಡೆಯುವುದು. ಇಲ್ಲಿ ಕೆನ್ನೆಯನ್ನು ವಿಶೇಷವಾಗಿ ಹೇಳಿದ್ದೇಕೆಂದರೆ, ಹೆಚ್ಚಾಗಿ ಮುಖಕ್ಕೆ ಹೊಡೆಯುವಾಗ ಕೆನ್ನೆಗೇ ಹೊಡೆಯಲಾಗುತ್ತದೆ. ಆದಾಗ್ಯೂ, ಮುಖದ ಇತರ ಭಾಗಗಳಿಗೆ ಹೊಡೆಯುವುದೂ ಇದರಲ್ಲಿ ಒಳಪಡುತ್ತದೆ. ಎರಡು: ದುಃಖ ತಡೆಯಲಾಗದೆ ಅಂಗಿಯೊಳಗೆ ತಲೆಯನ್ನು ತೂರಿಸುವ ಭಾಗವನ್ನು (ಕಾಲರ್) ಎರಡು ಕೈಗಳಿಂದ ಹಿಡಿದು ಹರಿಯುವುದು. ಮೂರು: ಅಜ್ಞಾನಕಾಲದ ಪ್ರಾರ್ಥನೆಗಳನ್ನು ಪ್ರಾರ್ಥಿಸುವುದು. ಉದಾಹರಣೆಗೆ, ನಾಶ ಮತ್ತು ವಿನಾಶಕ್ಕಾಗಿ ಪ್ರಾರ್ಥಿಸುವುದು, ಗೋಳಿಡುವುದು, ಶೋಕಗೀತೆ ಹಾಡುವುದು ಇತ್ಯಾದಿ.

فوائد الحديث

ಹದೀಸಿನಲ್ಲಿರುವ ಈ ಎಚ್ಚರಿಕೆಯು ಈ ಕೃತ್ಯಗಳು ಮಹಾಪಾಪಗಳಲ್ಲಿ ಸೇರುತ್ತವೆ ಎಂಬುದಕ್ಕೆ ಪುರಾವೆಯಾಗಿದೆ.

ಕಷ್ಟ ಬರುವಾಗ ತಾಳ್ಮೆ ತೋರುವುದು ಕಡ್ಡಾಯವಾಗಿದೆ ಮತ್ತು ಅಲ್ಲಾಹನ ವಿಧಿಯು ಯಾತನಾಮಯವಾಗಿದ್ದರೆ ಕೋಪಿಸುವುದು ಮತ್ತು ಆ ಕೋಪವನ್ನು ರೋದನದ ಮೂಲಕ, ಶೋಕಗೀತೆ ಹಾಡುವ ಮೂಲಕ, ತಲೆ ಬೋಳಿಸುವ ಮೂಲಕ, ಅಂಗಿಯನ್ನು ಹರಿಯುವ ಮೂಲಕ ಇತ್ಯಾದಿ ಪ್ರಕಟಿಸುವುದು ನಿಷಿದ್ಧವಾಗಿದೆ.

ಶಾಸನಕರ್ತನು ದೃಢೀಕರಿಸದ ಅಜ್ಞಾನಕಾಲದ ಆಚರಣೆಗಳನ್ನು ಅಂಧವಾಗಿ ಅನುಕರಿಸುವುದು ನಿಷಿದ್ಧವಾಗಿದೆ.

ದುಃಖಿಸುವುದು ಮತ್ತು ಅಳುವುದರಲ್ಲಿ ತೊಂದರೆಯಿಲ್ಲ. ಅದು ಅಲ್ಲಾಹನ ವಿಧಿಯ ಬಗ್ಗೆ ತಾಳ್ಮೆ ತೋರುವುದಕ್ಕೆ ವಿರುದ್ಧವಲ್ಲ. ಬದಲಿಗೆ, ಅದು ಹತ್ತಿರದ ದೂರದ ಸಂಬಂಧಿಕರ ಹೃದಯದಲ್ಲಿ ಅಲ್ಲಾಹು ನಿಕ್ಷೇಪಿಸುವ ಕರುಣೆಯಾಗಿದೆ.

ಮುಸಲ್ಮಾನನು ಅಲ್ಲಾಹನ ವಿಧಿ-ನಿರ್ಣಯದ ಬಗ್ಗೆ ಸಂತೃಪ್ತನಾಗಬೇಕು. ಸಂತೃಪ್ತನಾಗಲು ಸಾಧ್ಯವಾಗದಿದ್ದರೂ ತಾಳ್ಮೆ ತೋರುವುದು ಕಡ್ಡಾಯವಾಗಿದೆ.

التصنيفات

Issues of Pre-Islamic Era