ನೀವು ಈ ಚಂದ್ರನನ್ನು ನೋಡುವಂತೆ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ನೋಡುವಿರಿ. ಅವನನ್ನು ನೋಡುವುದರಲ್ಲಿ ನಿಮಗೆ ಯಾವುದೇ…

ನೀವು ಈ ಚಂದ್ರನನ್ನು ನೋಡುವಂತೆ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ನೋಡುವಿರಿ. ಅವನನ್ನು ನೋಡುವುದರಲ್ಲಿ ನಿಮಗೆ ಯಾವುದೇ ತೊಂದರೆಯಿರುವುದಿಲ್ಲ

ಜರೀರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಯಲ್ಲಿದ್ದೆವು. ಆಗ ಅವರು ರಾತ್ರಿಯಲ್ಲಿ ಚಂದ್ರನ ಕಡೆಗೆ—ಅಂದರೆ ಪೂರ್ಣಚಂದ್ರನ ಕಡೆಗೆ—ನೋಡಿ ಹೇಳಿದರು: "ನೀವು ಈ ಚಂದ್ರನನ್ನು ನೋಡುವಂತೆ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ನೋಡುವಿರಿ. ಅವನನ್ನು ನೋಡುವುದರಲ್ಲಿ ನಿಮಗೆ ಯಾವುದೇ ತೊಂದರೆಯಿರುವುದಿಲ್ಲ. ಆದ್ದರಿಂದ ಸೂರ್ಯೋದಯಕ್ಕೆ ಮೊದಲಿನ ಮತ್ತು ಸೂರ್ಯಾಸ್ತಕ್ಕೆ ಮೊದಲಿನ ನಮಾಝ್‌ಗಳನ್ನು ಕಳಕೊಳ್ಳದಿರಲು ನಿಮಗೆ ಸಾಧ್ಯವಾಗುವುದಾದರೆ ಹಾಗೆ ಮಾಡಿರಿ." ನಂತರ ಅವರು ಪಠಿಸಿದರು: "ಮತ್ತು ಸೂರ್ಯೋದಯಕ್ಕೆ ಮೊದಲು ಹಾಗೂ ಸೂರ್ಯಾಸ್ತಕ್ಕೆ ಮೊದಲು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ."

[صحيح] [متفق عليه]

الشرح

ಒಮ್ಮೆ ಹುಣ್ಣಿಮೆಯ ರಾತ್ರಿಯಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಚರರೊಂದಿಗೆ ಕುಳಿತಿದ್ದಾಗ ಹೀಗೆ ಹೇಳಿದರು: ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಯಾವುದೇ ಗೊಂದಲಗಳಿಲ್ಲದೆ ನೇರವಾಗಿ ಕಣ್ಣಾರೆ ನೋಡುವರು. ಅವನನ್ನು ನೋಡಲು ಅವರು ನೂಕು-ನುಗ್ಗಾಟ ಮಾಡುವುದಿಲ್ಲ. ಅಥವಾ ಅವನನ್ನು ನೋಡಲು ಅವರು ಆಯಾಸ ಅಥವಾ ಕಷ್ಟ ಅನುಭವಿಸುವುದಿಲ್ಲ. ನಂತರ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಫಜ್ರ್ ಮತ್ತು ಅಸರ್ ನಮಾಝ್‌ಗಳಿಂದ ನಿಮ್ಮನ್ನು ತಡೆಯುವ ಯಾವುದೇ ಅಡ್ಡಿಗಳನ್ನು ನಿವಾರಿಸಲು ನಿಮಗೆ ಸಾಧ್ಯವಾದರೆ ಹಾಗೆ ಮಾಡಿರಿ. ಆ ಎರಡು ನಮಾಝ್‌ಗಳನ್ನು ಪೂರ್ಣರೂಪದಲ್ಲಿ ಅವುಗಳ ಸಮಯದಲ್ಲಿ ಸಾಮೂಹಿಕವಾಗಿ ನಿರ್ವಹಿಸಿರಿ. ಏಕೆಂದರೆ ಅಲ್ಲಾಹನ ಮುಖ ದರ್ಶನವಾಗಲು ಅದು ಒಂದು ಕಾರಣವಾಗಿದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ವಚನವನ್ನು ಪಠಿಸಿದರು: "ಮತ್ತು ಸೂರ್ಯೋದಯಕ್ಕೆ ಮೊದಲು ಹಾಗೂ ಸೂರ್ಯಾಸ್ತಕ್ಕೆ ಮೊದಲು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ."

فوائد الحديث

ಸ್ವರ್ಗದಲ್ಲಿ ಅಲ್ಲಾಹನ ದರ್ಶನಭಾಗ್ಯದ ಬಗ್ಗೆ ಸತ್ಯವಿಶ್ವಾಸಿಗಳಿಗೆ ಶುಭ ಸುದ್ದಿ ನೀಡಲಾಗಿದೆ.

ಒತ್ತಿ ಹೇಳುವುದು, ಉತ್ತೇಜಿಸುವುದು ಮತ್ತು ಉದಾಹರಣೆಗಳನ್ನು ಬಳಸುವುದು ಧರ್ಮಬೋಧನೆ ಮಾಡುವ ವಿಧಾನಗಳಲ್ಲಿ ಒಳಪಡುತ್ತದೆ.

التصنيفات

The Hereafter Life