ಒಬ್ಬ ವ್ಯಕ್ತಿ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು:"ಇಸ್ಲಾಂ ಧರ್ಮದಲ್ಲಿ…

ಒಬ್ಬ ವ್ಯಕ್ತಿ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು:"ಇಸ್ಲಾಂ ಧರ್ಮದಲ್ಲಿ ಅತಿಶ್ರೇಷ್ಠವಾದುದು ಯಾವುದು?" ಅವರು ಉತ್ತರಿಸಿದರು: "ಜನರಿಗೆ ಆಹಾರ ನೀಡುವುದು ಮತ್ತು ಪರಿಚಯವಿರುವವರಿಗೂ, ಪರಿಚಯವಿಲ್ಲದವರಿಗೂ ಸಲಾಂ ಹೇಳುವುದು

ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಬ್ಬ ವ್ಯಕ್ತಿ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು:"ಇಸ್ಲಾಂ ಧರ್ಮದಲ್ಲಿ ಅತಿಶ್ರೇಷ್ಠವಾದುದು ಯಾವುದು?" ಅವರು ಉತ್ತರಿಸಿದರು: "ಜನರಿಗೆ ಆಹಾರ ನೀಡುವುದು ಮತ್ತು ಪರಿಚಯವಿರುವವರಿಗೂ, ಪರಿಚಯವಿಲ್ಲದವರಿಗೂ ಸಲಾಂ ಹೇಳುವುದು."

[صحيح] [متفق عليه]

الشرح

ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲಾಯಿತು: ಇಸ್ಲಾಂ ಧರ್ಮದ ಅತಿಶ್ರೇಷ್ಠ ಲಕ್ಷಣಗಳು ಯಾವುವು? ಆಗ ಅವರು ಎರಡು ಲಕ್ಷಣಗಳನ್ನು ತಿಳಿಸಿದರು: ಒಂದು: ಬಡವರಿಗೆ ಹೆಚ್ಚು ಹೆಚ್ಚಾಗಿ ಆಹಾರ ನೀಡುವುದು. ದಾನಧರ್ಮ, ಉಡುಗೊರೆ, ಆತಿಥ್ಯ, ಔತಣ ಮುಂತಾದವುಗಳು ಇದರಲ್ಲಿ ಒಳಪಡುತ್ತವೆ. ಬರಗಾಲ ಮತ್ತು ಬೆಲೆಯೇರಿಕೆಯ ಸಂದರ್ಭಗಳಲ್ಲಿ ಈ ಶ್ರೇಷ್ಠತೆಯು ಇನ್ನಷ್ಟು ಪ್ರಬಲವಾಗುತ್ತದೆ. ಎರಡು: ಎಲ್ಲಾ ಮುಸಲ್ಮಾನರಿಗೂ, ಅವರ ಪರಿಚಯವಿದ್ದರೂ ಇಲ್ಲದಿದ್ದರೂ ಸಲಾಂ ಹೇಳುವುದು.

فوائد الحديث

ಇಹಲೋಕ ಮತ್ತು ಪರಲೋಕದಲ್ಲಿ ಪ್ರಯೋಜನ ನೀಡುವ ವಿಷಯಗಳ ಬಗ್ಗೆ ತಿಳಿಯಲು ಸಹಾಬಿಗಳಿಗಿದ್ದ ಉತ್ಸಾಹವನ್ನು ತಿಳಿಸಲಾಗಿದೆ.

ಸಲಾಂ ಹೇಳುವುದು ಮತ್ತು ಆಹಾರ ನೀಡುವುದು ಇಸ್ಲಾಂ ಧರ್ಮದಲ್ಲಿ ಶ್ರೇಷ್ಠ ಸತ್ಕರ್ಮಗಳಾಗಿವೆ. ಏಕೆಂದರೆ ಅದಕ್ಕೆ ಹೆಚ್ಚು ಪ್ರತಿಫಲವಿದೆ ಮತ್ತು ಜನರಿಗೆ ಅದು ಎಲ್ಲಾ ಸಮಯಗಳಲ್ಲೂ ಆವಶ್ಯಕವಾಗಿದೆ.

ಈ ಎರಡು ಲಕ್ಷಣಗಳಿಂದ ಮಾತು ಮತ್ತು ಕ್ರಿಯೆಗಳ ಮೂಲಕ ಮಾಡುವ ಉಪಕಾರವನ್ನು ಜೊತೆಗೂಡಿಸಬಹುದು. ಇದು ಉಪಕಾರದ ಸಂಪೂರ್ಣ ರೂಪವಾಗಿದೆ.

ಈ ಲಕ್ಷಣಗಳು ಮುಸ್ಲಿಮರು ಪರಸ್ಪರ ವ್ಯವಹರಿಸುವ ವಿಷಯಗಳಿಗೆ ಸಂಬಂಧಿಸಿವೆ. ದಾಸನು ತನ್ನ ಪರಿಪಾಲಕನೊಂದಿಗೆ (ಅಲ್ಲಾಹನೊಂದಿಗೆ) ವ್ಯವಹರಿಸುವ ಬೇರೆ ಕೆಲವು ಲಕ್ಷಣಗಳಿವೆ.

ಮುಂದಾಗಿ ಸಲಾಂ ಹೇಳಬೇಕಾದುದು ಮುಸ್ಲಿಮರಿಗೆ ಮಾತ್ರ. ಸತ್ಯನಿಷೇಧಿಗಳಿಗೆ ಮುಂದಾಗಿ ಸಲಾಂ ಹೇಳಲು ಹೋಗಬಾರದು.

التصنيفات

Virtues and Manners, Manners of Greeting and Seeking Permission