ಸೂರ್ಯೋದಯಕ್ಕೆ ಮೊದಲು ಮತ್ತು ಸೂರ್ಯಾಸ್ತಕ್ಕೆ ಮೊದಲು ನಮಾಝ್ ಮಾಡಿದವರು ಎಂದಿಗೂ ನರಕವನ್ನು ಪ್ರವೇಶಿಸುವುದಿಲ್ಲ

ಸೂರ್ಯೋದಯಕ್ಕೆ ಮೊದಲು ಮತ್ತು ಸೂರ್ಯಾಸ್ತಕ್ಕೆ ಮೊದಲು ನಮಾಝ್ ಮಾಡಿದವರು ಎಂದಿಗೂ ನರಕವನ್ನು ಪ್ರವೇಶಿಸುವುದಿಲ್ಲ

ಅಬೂ ಝುಹೈರ್ ಉಮಾರ ಬಿನ್ ರುಐಬ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸೂರ್ಯೋದಯಕ್ಕೆ ಮೊದಲು ಮತ್ತು ಸೂರ್ಯಾಸ್ತಕ್ಕೆ ಮೊದಲು ನಮಾಝ್ ಮಾಡಿದವರು ಎಂದಿಗೂ ನರಕವನ್ನು ಪ್ರವೇಶಿಸುವುದಿಲ್ಲ."

[صحيح] [رواه مسلم]

الشرح

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಫಜ್ರ್ ನಮಾಝ್ ಮತ್ತು ಅಸರ್ ನಮಾಝನ್ನು ತಪ್ಪದೆ ನಿರ್ವಹಿಸುವವರು ನರಕವನ್ನು ಪ್ರವೇಶಿಸುವುದಿಲ್ಲ. ಇಲ್ಲಿ ಈ ಎರಡು ನಮಾಝ್‌ಗಳನ್ನು ವಿಶೇಷವಾಗಿ ಉಲ್ಲೇಖಿಸಿದ್ದೇಕೆಂದರೆ, ಇವೆರಡು ಅತ್ಯಂತ ಭಾರವಾದ ನಮಾಝ್‌ಗಳಾಗಿವೆ. ಬೆಳಗ್ಗಿನ ಸಮಯವು ಸವಿ ನಿದ್ರೆಯ ಸಮಯವಾಗಿದೆ ಮತ್ತು ಅಸರ್‌ನ ಸಮಯವು ದೈನಂದಿನ ಕೆಲಸ-ಕಾರ್ಯಗಳ ಹಾಗೂ ವ್ಯಾಪಾರದ ಸಮಯವಾಗಿದೆ.ಅತ್ಯಂತ ಕಷ್ಟದಿಂದ ನಿರ್ವಹಿಸಲಾಗುವ ಈ ಎರಡು ನಮಾಝ್‌ಗಳಿಗೆ ಕಾಳಜಿ ನೀಡುವವರು ಉಳಿದ ನಮಾಝ್‌ಗಳಿಗೂ ಕಾಳಜಿ ನೀಡುತ್ತಾರೆ.

فوائد الحديث

ಸುಬಹ್ ಮತ್ತು ಅಸರ್ ನಮಾಝ್‌ಗಳ ಶ್ರೇಷ್ಠತೆಯನ್ನು ಮತ್ತು ಅವುಗಳ ಬಗ್ಗೆ ಕಾಳಜಿ ವಹಿಸಬೇಕೆಂದು ತಿಳಿಸಲಾಗಿದೆ.

ಈ ನಮಾಝ್‌ಗಳನ್ನು ನಿರ್ವಹಿಸುವವರು ಸಾಮಾನ್ಯವಾಗಿ ಸೋಮಾರಿಗಳಾಗಿರುವುದಿಲ್ಲ ಮತ್ತು ತೋರಿಕೆಯನ್ನು ಹೊಂದಿರುವುದಿಲ್ಲ. ಅವರು ಆರಾಧನೆಯನ್ನು ಇಷ್ಟಪಡುತ್ತಾರೆ.

التصنيفات

Virtue of Prayer