ಕೊನೆಯ ಕಾಲದಲ್ಲಿ ಕೆಲವು ಜನರು ಬರುವರು. ಅವರು ನೀವಾಗಲಿ ನಿಮ್ಮ ಪೂರ್ವಿಕರಾಗಲಿ ಕೇಳದೇ ಇರುವುದನ್ನು ನಿಮಗೆ ಹೇಳುವರು. ಆದ್ದರಿಂದ…

ಕೊನೆಯ ಕಾಲದಲ್ಲಿ ಕೆಲವು ಜನರು ಬರುವರು. ಅವರು ನೀವಾಗಲಿ ನಿಮ್ಮ ಪೂರ್ವಿಕರಾಗಲಿ ಕೇಳದೇ ಇರುವುದನ್ನು ನಿಮಗೆ ಹೇಳುವರು. ಆದ್ದರಿಂದ ನೀವು ಅವರಿಂದ ದೂರವಿರಿ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕೊನೆಯ ಕಾಲದಲ್ಲಿ ಕೆಲವು ಜನರು ಬರುವರು. ಅವರು ನೀವಾಗಲಿ ನಿಮ್ಮ ಪೂರ್ವಿಕರಾಗಲಿ ಕೇಳದೇ ಇರುವುದನ್ನು ನಿಮಗೆ ಹೇಳುವರು. ಆದ್ದರಿಂದ ನೀವು ಅವರಿಂದ ದೂರವಿರಿ."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅವರ ಸಮುದಾಯದ ಕೊನೆಯ ಕಾಲದಲ್ಲಿ ಕೆಲವು ಜನರು ಪ್ರತ್ಯಕ್ಷರಾಗುವರು. ಅವರು ಕಪೋಕಲ್ಪಿತ ಮಾತುಗಳನ್ನು ಹೇಳುವರು. ನಿಮಗಿಂತ ಮೊದಲು ಯಾರೂ ಹೇಳದೇ ಇರುವ ಮಾತುಗಳನ್ನು ಹೇಳುವರು. ಅವರು ಸುಳ್ಳು ಸುಳ್ಳಾಗಿ ರಚಿಸಿದ ಹದೀಸ್‌ಗಳನ್ನು ಹೇಳುವರು. ಆದ್ದರಿಂದ ನಾವು ಅವರಿಂದ ದೂರವಿದ್ದು ಅವರ ಸಹವಾಸವನ್ನು ಬಿಟ್ಟುಬಿಡಬೇಕು ಮತ್ತು ಅವರು ಹೇಳುವ ಹದೀಸ್‌ಗಳಿಗೆ ಕಿವಿಗೊಡಬಾರದೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶಿಸುತ್ತಾರೆ. ಇದೇಕೆಂದರೆ ಆ ಕೃತಕ ಹದೀಸ್‌ಗಳು ನಮ್ಮ ಹೃದಯದಲ್ಲಿ ಅಚ್ಚೊತ್ತಿ ನಾವು ಅದರಿಂದ ಹೊರಬರಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಬಹುದು.

فوائد الحديث

ಇದರಲ್ಲಿ ಪ್ರವಾದಿತ್ವದ ಒಂದು ಚಿಹ್ನೆಯಿದೆ. ಅದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಮುದಾಯದಲ್ಲಿ ಮುಂದೆ ಉಂಟಾಗಬಹುದೆಂದು ಹೇಳಿದ ಸಂಗತಿಯು ಅವರು ತಿಳಿಸಿದಂತೆಯೇ ನಡೆದಿದೆ.

ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಸರಲ್ಲಿ ಮತ್ತು ಇಸ್ಲಾಂ ಧರ್ಮದ ಹೆಸರಲ್ಲಿ ಸುಳ್ಳು ಹೇಳುವವರಿಂದ ದೂರವಿರಬೇಕು ಮತ್ತು ಅವರ ಸುಳ್ಳುಗಳಿಗೆ ಕಿವಿಗೊಡಬಾರದು.

ಹದೀಸ್‌ನ ಸಿಂಧುತ್ವವನ್ನು ದೃಡೀಕರಿಸದೆ ಅದನ್ನು ಸ್ವೀಕರಿಸುವುದರ ಬಗ್ಗೆ ಮತ್ತು ಅದನ್ನು ಪ್ರಚಾರ ಮಾಡುವುದರ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

التصنيفات

Significance and Status of the Sunnah, Writing the Sunnah, The Barzakh Life (After death Period)