ಎಲ್ಲಾ ಎರಡು ಅಝಾನ್‌ಗಳ ನಡುವೆ ಒಂದು ನಮಾಝ್ ಇದೆ. ಎಲ್ಲಾ ಎರಡು ಅಝಾನ್‌ಗಳ ನಡುವೆ ಒಂದು ನಮಾಝ್ ಇದೆ." ನಂತರ ಮೂರನೆಯದಾಗಿ ಹೇಳಿದರು:…

ಎಲ್ಲಾ ಎರಡು ಅಝಾನ್‌ಗಳ ನಡುವೆ ಒಂದು ನಮಾಝ್ ಇದೆ. ಎಲ್ಲಾ ಎರಡು ಅಝಾನ್‌ಗಳ ನಡುವೆ ಒಂದು ನಮಾಝ್ ಇದೆ." ನಂತರ ಮೂರನೆಯದಾಗಿ ಹೇಳಿದರು: "ಇಚ್ಛಿಸುವವರಿಗೆ ಮಾತ್ರ

ಅಬ್ದುಲ್ಲಾ ಬಿನ್ ಮುಗಫ್ಫಲ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಎಲ್ಲಾ ಎರಡು ಅಝಾನ್‌ಗಳ ನಡುವೆ ಒಂದು ನಮಾಝ್ ಇದೆ. ಎಲ್ಲಾ ಎರಡು ಅಝಾನ್‌ಗಳ ನಡುವೆ ಒಂದು ನಮಾಝ್ ಇದೆ." ನಂತರ ಮೂರನೆಯದಾಗಿ ಹೇಳಿದರು: "ಇಚ್ಛಿಸುವವರಿಗೆ ಮಾತ್ರ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಎಲ್ಲಾ ಅಝಾನ್ ಮತ್ತು ಇಕಾಮತ್‌ಗಳ ನಡುವೆ ಒಂದು ಐಚ್ಛಿಕ ನಮಾಝ್ ಇದೆ. ಅವರು ಇದನ್ನು ಮೂರು ಬಾರಿ ಹೇಳಿ, ಮೂರನೆಯದರಲ್ಲಿ, ಅದು ಅಪೇಕ್ಷಣೀಯವಾಗಿದ್ದು ನಿರ್ವಹಿಸಲು ಬಯಸುವವರು ನಿರ್ವಹಿಸಬಹುದು ಎಂದು ಸೇರಿಸಿ ಹೇಳಿದರು.

فوائد الحديث

ಅಝಾನ್ ಮತ್ತು ಇಕಾಮತ್‌ನ ಮಧ್ಯೆ ನಮಾಝ್ ನಿರ್ವಹಿಸುವುದು ಅಪೇಕ್ಷಣೀಯವಾಗಿದೆ.

ವಿಷಯವನ್ನು ಪುನರಾವರ್ತಿಸುವುದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಚರ್ಯೆಯಾಗಿದೆ. ಹೇಳಲಿರುವ ವಿಷಯದ ಬಗ್ಗೆ ಸಭಿಕರ ಗಮನ ಸೆಳೆಯಲು ಮತ್ತು ವಿಷಯಕ್ಕೆ ಒತ್ತು ನೀಡಲು ಅವರು ಹೀಗೆ ಮಾಡುತ್ತಾರೆ.

ಎರಡು ಅಝಾನ್‌ಗಳು ಎಂದರೆ ಅಝಾನ್ ಮತ್ತು ಇಕಾಮತ್. ಇದನ್ನು ಹೆಚ್ಚಾಗಿ ಅಝಾನೈನ್ (ಎರಡು ಅಝಾನ್‌ಗಳು) ಎಂದು ಹೇಳಲಾಗುತ್ತದೆ. ಸೂರ್ಯ ಮತ್ತು ಚಂದ್ರರನ್ನು ಕಮರೈನ್ (ಎರಡು ಚಂದ್ರರಗಳು) ಹಾಗೂ ಅಬೂಬಕರ್ ಮತ್ತು ಉಮರ್ ರನ್ನು ಉಮರೈನ್ (ಎರಡು ಉಮರ್‌ಗಳು) ಎಂದು ಹೇಳುವಂತೆ.

ಅಝಾನ್ ಎಂದರೆ ನಮಾಝ್‌ನ ಸಮಯ ಆರಂಭವಾಗಿದೆ ಎಂದು ತಿಳಿಸುವ ಘೋಷಣೆಯಾಗಿದೆ. ಇಕಾಮತ್ ಎಂದರೆ ನಮಾಝ್‌ ಆರಂಭವಾಗಿದೆ ಎಂದು ತಿಳಿಸುವ ಘೋಷಣೆಯಾಗಿದೆ.

التصنيفات

The Azan and Iqaamah, Voluntary Prayer