“ಏಳು ವಿನಾಶಕಾರಿ ಪಾಪಗಳಿಂದ ದೂರವಿರಿ

“ಏಳು ವಿನಾಶಕಾರಿ ಪಾಪಗಳಿಂದ ದೂರವಿರಿ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಏಳು ವಿನಾಶಕಾರಿ ಪಾಪಗಳಿಂದ ದೂರವಿರಿ” ಅವರು (ಸಂಗಡಿಗರು) ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಅವು ಯಾವುವು?” ಅವರು ಹೇಳಿದರು: “ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವುದು; ಮಾಟಗಾರಿಕೆ (ವಾಮಾಚಾರ) ಮಾಡುವುದು; ಅಲ್ಲಾಹು (ಹತ್ಯೆ ಮಾಡುವುದು) ನಿಷೇಧಿಸಿದ ಮನುಷ್ಯ ಜೀವಿಯನ್ನು ನೈತಿಕ ಹಕ್ಕಿನಿಂದಲ್ಲದೆ ಹತ್ಯೆ ಮಾಡುವುದು; ಬಡ್ಡಿ ತಿನ್ನುವುದು; ಅನಾಥರ ಆಸ್ತಿಯನ್ನು ತಿನ್ನುವುದು; ಯುದ್ಧಭೂಮಿಯಿಂದ ಪಲಾಯನ ಮಾಡುವುದು; ಮತ್ತು ಪರಿಶುದ್ಧ, ಮುಗ್ಧ ಹಾಗೂ ಸತ್ಯವಿಶ್ವಾಸಿಗಳಾದ ಮಹಿಳೆಯರ ಮೇಲೆ ದುರಾರೋಪ ಹೊರಿಸುವುದು.”

[صحيح] [متفق عليه]

الشرح

ಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಏಳು ವಿನಾಶಕಾರಿ ಅಪರಾಧ ಮತ್ತು ಪಾಪಗಳಿಂದ ದೂರವಿರಲು ಆಜ್ಞಾಪಿಸುತ್ತಿದ್ದಾರೆ. ಅವು ಯಾವುವು ಎಂದು ಅವರೊಡನೆ ಪ್ರಶ್ನಿಸಲಾದಾಗ, ಅವರು ಈ ಕೆಳಗಿನಂತೆ ವಿವರಿಸಿದರು: ಮೊದಲನೆಯದು: ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವುದು. ಅಂದರೆ, ಸರ್ವಶಕ್ತನಾದ ಅಲ್ಲಾಹನಿಗೆ—ಯಾವುದೇ ರೂಪದಲ್ಲಾದರೂ—ಸಮಾನರನ್ನು ಮತ್ತು ಸರಿಸಾಟಿಗಳನ್ನು ನಿಶ್ಚಯಿಸುವುದು. ಅಥವಾ ಆರಾಧನೆಯ ಯಾವುದಾದರೂ ಒಂದು ವಿಧವನ್ನು ಅಲ್ಲಾಹು ಅಲ್ಲದವರಿಗೆ ಅರ್ಪಿಸುವುದು. ಶಿರ್ಕ್ (ಸಹಭಾಗಿತ್ವ) ಅತಿ ಭಯಾನಕ ಪಾಪವಾಗಿರುವುದರಿಂದ ಪ್ರವಾದಿಯವರು ಅದನ್ನು ಮೊಟ್ಟಮೊದಲು ತಿಳಿಸಿದ್ದಾರೆ. ಎರಡನೆಯದು: ಮಾಟಗಾರಿಕೆ (ವಾಮಾಚಾರ) ಮಾಡುವುದು. ಗಂಟುಗಳಲ್ಲಿ ಊದುವುದು, ಮಂತ್ರ ಮಾಡುವುದು, ಪ್ರೇತಗಳನ್ನು ಬಳಸಿ ಚಿಕಿತ್ಸೆ ಮಾಡುವುದು, ಹೊಗೆಯಾಡಿಸುವುದು ಮುಂತಾದ ಎಲ್ಲವೂ ಇದರಲ್ಲಿ ಒಳಪಡುತ್ತವೆ. ಇದರಿಂದಾಗಿ ಕೆಲವೊಮ್ಮೆ ಮಾಟ ಮಾಡಲ್ಪಟ್ಟ ವ್ಯಕ್ತಿ ಸಾಯುತ್ತಾನೆ ಅಥವಾ ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ಕೆಲವೊಮ್ಮೆ ಇದರಿಂದ ಪತಿ-ಪತ್ನಿಯರ ನಡುವೆ ಒಡಕುಂಟಾಗುತ್ತದೆ. ಇದೊಂದು ಪೈಶಾಚಿಕ ಪ್ರವೃತ್ತಿಯಾಗಿದ್ದು, ಬಹುದೇವಾರಾಧನೆ ಮತ್ತು ದುಷ್ಟಶಕ್ತಿಗಳನ್ನು ತೃಪ್ತಿಪಡಿಸುವ ಮೂಲಕವಲ್ಲದೆ ಇದನ್ನು ಮಾಡಲು ಸಾಧ್ಯವಿಲ್ಲ. ಮೂರನೆಯದು: ಅಲ್ಲಾಹು ಹತ್ಯೆ ಮಾಡಬಾರದೆಂದು ಹೇಳಿದ ಮನುಷ್ಯ ಜೀವಿಯನ್ನು ಆಡಳಿತಗಾರರು ಕಾನೂನುಬದ್ಧವಾಗಿ ಹೊರಡಿಸುವ ಆಜ್ಞೆಯ ಮೂಲಕವಲ್ಲದೆ ಕೊಲೆಗೈಯ್ಯುವುದು. ನಾಲ್ಕನೆಯದು: ಬಡ್ಡಿ ಪಡೆಯುವುದು. ಅದು ನೇರವಾಗಿ ಪಡೆಯುವುದಾಗಿದ್ದರೂ ಅಥವಾ ಬೇರೆ ಯಾವುದಾದರೂ ಪ್ರಯೋಜನಗಳನ್ನು ಪಡೆಯುವ ಮೂಲಕವಾಗಿದ್ದರೂ ಅದರಲ್ಲಿ ವ್ಯತ್ಯಾಸವಿಲ್ಲ. ಐದನೆಯದು: ತಂದೆಯನ್ನು ಕಳಕೊಂಡ ಅಪ್ರಾಪ್ತ ಮಕ್ಕಳ ಆಸ್ತಿಯನ್ನು ಬೇಕಾಬಿಟ್ಟಿ ಖರ್ಚು ಮಾಡುವುದು ಮತ್ತು ಕಬಳಿಸುವುದು. ಆರನೆಯದು: ಸತ್ಯನಿಷೇಧಿಗಳ ವಿರುದ್ಧ ಯುದ್ಧ ಮಾಡುವಾಗ ಯುದ್ಧರಂಗದಿಂದ ಪಲಾಯನ ಮಾಡುವುದು. ಏಳನೆಯದು: ಪರಿಶುದ್ಧ ಮತ್ತು ಕುಲೀನ ಮಹಿಳೆಯರ ಮೇಲೆ ವ್ಯಭಿಚಾರದ ಆರೋಪ ಮಾಡುವುದು; ಅದೇ ರೀತಿ, ಪುರುಷರ ಮೇಲೂ.

فوائد الحديث

ಮಹಾಪಾಪಗಳು ಈ ಹದೀಸಿನಲ್ಲಿರುವ ಏಳು ಪಾಪಗಳಿಗೆ ಸೀಮಿತವಲ್ಲ. ಈ ಏಳು ಪಾಪಗಳು ಗಂಭೀರ ಮತ್ತು ಅಪಾಯಕಾರಿ ಪಾಪಗಳಾಗಿರುವುದರಿಂದ ಅವುಗಳನ್ನು ವಿಶೇಷವಾಗಿ ಇಲ್ಲಿ ಉಲ್ಲೇಖಿಸಲಾಗಿದೆ.

ಕಾನೂನುಬದ್ಧವಾಗಿ ಮನುಷ್ಯ ಹತ್ಯೆ ಮಾಡಲು ಅನುಮತಿಯಿದೆ. ಉದಾಹರಣೆಗೆ, ಪ್ರತೀಕಾರವಾಗಿ, ಧರ್ಮಪರಿತ್ಯಾಗ ಮಾಡಿದ್ದಕ್ಕಾಗಿ, ವಿವಾಹವಾದ ನಂತರ ವ್ಯಭಿಚಾರ ಮಾಡಿದ್ದಕ್ಕಾಗಿ ಇತ್ಯಾದಿ. ಆದರೆ ಇಂತಹ ಸಂದರ್ಭಗಳಲ್ಲಿ ಕಾನೂನುಬದ್ಧ ಆಡಳಿತಗಾರ ಮಾತ್ರ ಮರಣ ಶಾಸನವನ್ನು ಹೊರಡಿಸಬೇಕು.

التصنيفات

Blameworthy Morals, Condemning Sins