ಒಮ್ಮೆ ಒಬ್ಬ ವ್ಯಕ್ತಿ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಎಡಗೈಯಿಂದ ಆಹಾರ ಸೇವಿಸಿದನು. ಆಗ…

ಒಮ್ಮೆ ಒಬ್ಬ ವ್ಯಕ್ತಿ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಎಡಗೈಯಿಂದ ಆಹಾರ ಸೇವಿಸಿದನು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಬಲಗೈಯಿಂದ ಸೇವಿಸಿರಿ." ಆ ವ್ಯಕ್ತಿ ಉತ್ತರಿಸಿದನು: "ನನಗೆ ಅದು ಸಾಧ್ಯವಿಲ್ಲ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮಗೆ ಅದು ಸಾಧ್ಯವಾಗದಿರಲಿ

ಸಲಮ ಬಿನ್ ಅಕ್ವಅ್‌ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. "ಒಮ್ಮೆ ಒಬ್ಬ ವ್ಯಕ್ತಿ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಎಡಗೈಯಿಂದ ಆಹಾರ ಸೇವಿಸಿದನು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಬಲಗೈಯಿಂದ ಸೇವಿಸಿರಿ." ಆ ವ್ಯಕ್ತಿ ಉತ್ತರಿಸಿದನು: "ನನಗೆ ಅದು ಸಾಧ್ಯವಿಲ್ಲ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮಗೆ ಅದು ಸಾಧ್ಯವಾಗದಿರಲಿ." ಅಹಂಕಾರದ ಹೊರತು ಬೇರೇನೂ ಅವನನ್ನು ಬಲಗೈಯಿಂದ ಸೇವಿಸದಂತೆ ತಡೆದಿರಲಿಲ್ಲ. ನಂತರ ಅವನಿಗೆ ಅದನ್ನು ಬಾಯಿಗೆ ಎತ್ತಲು ಆಗಲೇ ಇಲ್ಲ."

[صحيح] [رواه مسلم]

الشرح

ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಬ್ಬ ವ್ಯಕ್ತಿ ತನ್ನ ಎಡಗೈಯಿಂದ ಆಹಾರ ಸೇವಿಸುವುದನ್ನು ಕಂಡರು. ಅವರು ಅವನಿಗೆ ಬಲಗೈಯಿಂದ ಆಹಾರ ಸೇವಿಸುವಂತೆ ಆದೇಶಿಸಿದರು. ಆದರೆ, ಆ ವ್ಯಕ್ತಿ ತನಗೆ ಸಾಧ್ಯವಿಲ್ಲ ಎಂದು ಅಹಂಕಾರದಿಂದ ಸುಳ್ಳು ಹೇಳಿದನು! ಆದ್ದರಿಂದ, ಆತನಿಗೆ ಇನ್ನು ಮುಂದೆ ಬಲಗೈಯಿಂದ ತಿನ್ನಲು ಸಾಧ್ಯವಾಗದಿರಲಿ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥಿಸಿದರು. ಅಲ್ಲಾಹು ಅವನ ಬಲಗೈಯನ್ನು ಪಾರ್ಶ್ವವಾಯುವಿಗೆ ಒಳಪಡಿಸುವ ಮೂಲಕ ಪ್ರವಾದಿಯ ಪ್ರಾರ್ಥನೆಗೆ ಉತ್ತರಿಸಿದನು. ಅದರ ನಂತರ ಅವನಿಗೆ ಆಹಾರ ಅಥವಾ ಪಾನೀಯ ಸೇವಿಸಲು ಅದನ್ನು ತನ್ನ ಬಾಯಿಗೆ ಎತ್ತಲಾಗಲಿಲ್ಲ.

فوائد الحديث

ಬಲಗೈಯಿಂದ ಆಹಾರ ಸೇವಿಸುವುದು ಕಡ್ಡಾಯವಾಗಿದೆ. ಎಡಗೈಯಿಂದ ಆಹಾರ ಸೇವಿಸುವುದು ನಿಷಿದ್ಧವಾಗಿದೆ.

ಧಾರ್ಮಿಕ ನಿಯಮಗಳನ್ನು ಅಳವಡಿಸುವ ವಿಷಯದಲ್ಲಿ ಅಹಂಕಾರ ಪ್ರದರ್ಶಿಸುವುದು ಶಿಕ್ಷಾರ್ಹವಾಗಿದೆ.

ಅಲ್ಲಾಹು ತನ್ನ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಪ್ರಾರ್ಥನೆಗೆ ಉತ್ತರಿಸುವ ಮೂಲಕ ಅವರನ್ನು ಗೌರವಿಸಿದ್ದಾನೆ.

ಎಲ್ಲಾ ಸಂದರ್ಭಗಳಲ್ಲೂ—ತಿನ್ನುವಾಗಲೂ ಸಹ—ಒಳಿತನ್ನು ಆದೇಶಿಸಬೇಕು ಮತ್ತು ಕೆಡುಕನ್ನು ವಿರೋಧಿಸಬೇಕೆಂದು ಇಸ್ಲಾಂ ಬೋಧಿಸುತ್ತದೆ.

التصنيفات

Manners of Eating and Drinking