إعدادات العرض
ಓ ದೊಡ್ಡಪ್ಪಾ! ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂದು ಹೇಳಿರಿ. ಅಲ್ಲಾಹನ ಬಳಿ ಅದರ ಮೂಲಕ…
ಓ ದೊಡ್ಡಪ್ಪಾ! ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂದು ಹೇಳಿರಿ. ಅಲ್ಲಾಹನ ಬಳಿ ಅದರ ಮೂಲಕ ನಾನು ನಿಮಗಾಗಿ ವಾದಿಸುತ್ತೇನೆ
ಸಈದ್ ಬಿನ್ ಮುಸಯ್ಯಬ್‌ರಿಂದ, ಅವರ ತಮ್ಮ ತಂದೆಯಿಂದ ವರದಿ. ಅವರು ಹೇಳುತ್ತಾರೆ: ಅಬೂ ತಾಲಿಬ್ ಮರಣಾಸನ್ನರಾಗಿದ್ದ ಸಂದರ್ಭ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಬಳಿಗೆ ಬಂದರು. ಅಲ್ಲಿ ಅವರ ಬಳಿ ಅಬೂ ಜಹಲ್ ಮತ್ತು ಅಬ್ದುಲ್ಲಾ ಬಿನ್ ಅಬೂ ಉಮಯ್ಯ ಬಿನ್ ಮುಗೀರ ಕುಳಿತಿರುವುದನ್ನು ಕಂಡರು. ಪ್ರವಾದಿಯವರು ಹೇಳಿದರು: "ಓ ದೊಡ್ಡಪ್ಪಾ! ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂದು ಹೇಳಿರಿ. ಅಲ್ಲಾಹನ ಬಳಿ ಅದರ ಮೂಲಕ ನಾನು ನಿಮಗಾಗಿ ವಾದಿಸುತ್ತೇನೆ." ಆಗ ಅಬೂ ಜಹಲ್ ಮತ್ತು ಅಬ್ದುಲ್ಲಾ ಬಿನ್ ಅಬೂ ಉಮಯ್ಯ ಹೇಳಿದರು: "ನೀನು ಅಬ್ದುಲ್ ಮುತ್ತಲಿಬ್‌ರ ಧರ್ಮದಿಂದ ಹಿಮ್ಮೆಟ್ಟುವೆಯಾ?" ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು (ಲಾಇಲಾಹ ಇಲ್ಲಲ್ಲಾಹ್) ಅವರ ಮುಂದಿಡುತ್ತಲೇ ಇದ್ದರು ಮತ್ತು ಅವರಿಬ್ಬರು ಅವರ ಮಾತನ್ನು ಪುನರುಚ್ಛರಿಸುತ್ತಲೇ ಇದ್ದರು. ಎಲ್ಲಿಯವರೆಗೆಂದರೆ, ಅಬೂ ತಾಲಿಬ್ ತಮ್ಮ ಕೊನೆಯ ಮಾತನ್ನು ಹೀಗೆ ಹೇಳಿದರು: "ಅಬ್ದುಲ್ ಮುತ್ತಲಿಬ್‌ರ ಧರ್ಮದಲ್ಲಿ." ಅವರು "ಲಾಇಲಾಹ ಇಲ್ಲಲ್ಲಾಹ್" ಹೇಳಲು ನಿರಾಕರಿಸಿದರು. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹನಾಣೆ! ನಾನು ತಮಗಾಗಿ ಅಲ್ಲಾಹನಲ್ಲಿ ಖಂಡಿತ ಕ್ಷಮೆಯಾಚಿಸುತ್ತೇನೆ. ಅದನ್ನು ನನಗೆ ನಿಷೇಧಿಸದಿರುವ ತನಕ." ಆಗ ಅಲ್ಲಾಹು ಅವತೀರ್ಣಗೊಳಿಸಿದನು: "ಬಹುದೇವವಿಶ್ವಾಸಿಗಳಿಗಾಗಿ (ಅಲ್ಲಾಹನಲ್ಲಿ) ಕ್ಷಮೆಯಾಚನೆ ಮಾಡಲು ಪ್ರವಾದಿಗೆ ಮತ್ತು ಸತ್ಯವಿಶ್ವಾಸಿಗಳಿಗೆ ಅನುಮತಿಯಿಲ್ಲ." [ತೌಬ: 113]. ಮತ್ತು ಅಬೂ ತಾಲಿಬರ ವಿಷಯದಲ್ಲಿ ಕುರ್‌ಆನ್ ವಚನವನ್ನು ಅವತೀರ್ಣಗೊಳಿಸುತ್ತಾ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದನು: "ನಿಶ್ಚಯವಾಗಿಯೂ ನಿಮಗೆ ಇಷ್ಟವಿರುವವರನ್ನು ಸನ್ಮಾರ್ಗಕ್ಕೆ ಸೇರಿಸಲು ನಿಮ್ಮಿಂದ ಸಾಧ್ಯವಿಲ್ಲ. ಆದರೆ ಅಲ್ಲಾಹು ಅವನು ಇಚ್ಛಿಸುವವರನ್ನು ಸನ್ಮಾರ್ಗಕ್ಕೆ ಸೇರಿಸುತ್ತಾನೆ." [ಕಸಸ್ 56].
الترجمة
العربية বাংলা Bosanski English Español فارسی Français Bahasa Indonesia Türkçe اردو 中文 हिन्दी Tagalog ئۇيغۇرچە Hausa Kurdî Kiswahili Português සිංහල Русский Svenska ગુજરાતી አማርኛ Yorùbá Tiếng Việt پښتو অসমীয়া دری Кыргызча or नेपाली Malagasy Čeština Oromoo Română Nederlands Soomaali తెలుగు ไทย Lietuvių മലയാളം Српски Українська Kinyarwanda Shqip Wolof Moore ქართული Magyarالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಾವಿನ ಅಂಚಿನಲ್ಲಿದ್ದ ಅವರ ದೊಡ್ಡಪ್ಪ ಅಬೂ ತಾಲಿಬ್‌ರ ಬಳಿಗೆ ಬಂದರು. ನಂತರ ಹೇಳಿದರು: ಓ ದೊಡ್ಡಪ್ಪಾ! "ಲಾಇಲಾಹ ಇಲ್ಲಲ್ಲಾಹ್" (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂದು ಹೇಳಿರಿ. ಆ ವಚನದ ಮೂಲಕ ನಾನು ಅಲ್ಲಾಹನ ಬಳಿ ತಮಗಾಗಿ ಸಾಕ್ಷ್ಯ ವಹಿಸುವೆನು. ಆಗ ಅಬೂ ಜಹಲ್ ಮತ್ತು ಅಬ್ದುಲ್ಲಾ ಬಿನ್ ಅಬೂ ಉಮಯ್ಯ ಹೇಳಿದರು: ಓ ಅಬೂ ತಾಲಿಬ್! ನೀನು ನಿನ್ನ ತಂದೆ ಅಬ್ದುಲ್ ಮುತ್ತಲಿಬ್‌ರ ಧರ್ಮವನ್ನು ತೊರೆಯುತ್ತೀಯಾ!? ಅದು ವಿಗ್ರಹಾರಾಧನೆಯ ಧರ್ಮವಾಗಿತ್ತು. ಅವರಿಬ್ಬರೂ ಅವರೊಡನೆ ಅದನ್ನು ಹೇಳುತ್ತಲೇ ಇದ್ದರು. ಎಲ್ಲಿಯವರೆಗೆಂದರೆ, ಅವರು (ಅಬೂತಾಲಿಬ್) ತಮ್ಮ ಕೊನೆಯ ಮಾತನ್ನು ಹೀಗೆ ಹೇಳಿದರು: ಅಬ್ದುಲ್ ಮುತ್ತಲಿಬ್‌ರ ಧರ್ಮದಲ್ಲಿ, ಬಹುದೇವಾರಾಧನೆ ಮತ್ತು ವಿಗ್ರಹಾರಾಧನೆಯ ಧರ್ಮದಲ್ಲಿ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನಾನು ನಿಮ್ಮ ಕ್ಷಮೆಗಾಗಿ ಪ್ರಾರ್ಥಿಸುವೆನು, ನನ್ನ ಪರಿಪಾಲಕ (ಅಲ್ಲಾಹು) ಅದನ್ನು ನನಗೆ ನಿಷೇಧಿಸದಿರುವ ತನಕ. ಆಗ ಅಲ್ಲಾಹನ ಈ ವಚನ ಅವತೀರ್ಣವಾಯಿತು: "ಬಹುದೇವವಿಶ್ವಾಸಿಗಳು ನರಕವಾಸಿಗಳೆಂದು ಸ್ಪಷ್ಟವಾದ ಬಳಿಕ ಅವರಿಗೋಸ್ಕರ (ಅಲ್ಲಾಹನಲ್ಲಿ) ಕ್ಷಮೆಯಾಚನೆ ಮಾಡಲು ಪ್ರವಾದಿಗೆ ಮತ್ತು ಸತ್ಯವಿಶ್ವಾಸಿಗಳಿಗೆ ಅನುಮತಿಯಿಲ್ಲ. ಅವರು ಆಪ್ತ ಸಂಬಂಧಿಕರಾಗಿದ್ದರೂ ಸಹ." [ತೌಬ: 113]. ಮತ್ತು ಅಬೂ ತಾಲಿಬ್‌ರ ವಿಷಯದಲ್ಲಿ ಅಲ್ಲಾಹನ ಈ ವಚನ ಅವತೀರ್ಣವಾಯಿತು: "ನಿಮಗೆ ಇಷ್ಟವಿರುವವರನ್ನು ಸನ್ಮಾರ್ಗಕ್ಕೆ ಸೇರಿಸಲು ನಿಮ್ಮಿಂದ ಸಾಧ್ಯವಿಲ್ಲ. ಆದರೆ ಅಲ್ಲಾಹು ಅವನು ಇಚ್ಛಿಸುವವರನ್ನು ಸನ್ಮಾರ್ಗಕ್ಕೆ ಸೇರಿಸುತ್ತಾನೆ. ಸನ್ಮಾರ್ಗದಲ್ಲಿರುವವರ ಬಗ್ಗೆ ಅವನು ಬಹಳ ಚೆನ್ನಾಗಿ ತಿಳಿದಿದ್ದಾನೆ." [ಕಸಸ್: 56].، ನಿಮಗೆ ಇಷ್ಟವಿರುವವರಿಗೆ ಸನ್ಮಾರ್ಗ ನೀಡಲು ನಿಮಗೆ ಸಾಧ್ಯವಿಲ್ಲ. ನಿಮ್ಮ ಕರ್ತವ್ಯ ತಲುಪಿಸಿಕೊಡುವುದು ಮಾತ್ರ. ಅಲ್ಲಾಹು ಅವನು ಇಚ್ಛಿಸುವವರನ್ನು ಸನ್ಮಾರ್ಗಕ್ಕೆ ಸೇರಿಸುತ್ತಾನೆ.فوائد الحديث
ಬಹುದೇವವಿಶ್ವಾಸಿಗಳಿಗೆ, ಕ್ಷಮೆಯಾಚನೆ ಮಾಡುವುದನ್ನು ನಿಷೇಧಿಸಲಾಗಿದೆ. ಈ ವಿಷಯದಲ್ಲಿ ಅವರ ರಕ್ತಸಂಬಂಧ, ಕರ್ಮಗಳು ಅಥವಾ ಉಪಕಾರಗಳು ಮುಂತಾದ ಯಾವುದನ್ನೂ ಗಣನೆಗೆ ತೆಗೆದುಕೊಳ್ಳಬಾರದು.
ಅಸತ್ಯದ ಮಾರ್ಗದಲ್ಲಿ ಪೂರ್ವಜರನ್ನು ಮತ್ತು ಹಿರಿಯರನ್ನು ಅಂಧಾನುಕರಣೆ ಮಾಡುವುದು ಅಜ್ಞಾನಕಾಲದ ಜನರ ಅಭ್ಯಾಸವಾಗಿದೆ.
ಜನರನ್ನು ಇಸ್ಲಾಂ ಧರ್ಮಕ್ಕೆ ಕರೆಯಲು ಮತ್ತು ಅವರಿಗೆ ಸನ್ಮಾರ್ಗ ತೋರಿಸಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೊಂದಿದ್ದ ಪೂರ್ಣ ಸಹಾನುಭೂತಿ ಮತ್ತು ಉತ್ಸಾಹವನ್ನು ತಿಳಿಸಲಾಗಿದೆ.
ಅಬೂ ತಾಲಿಬ್ ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆಂದು ವಾದಿಸುವವರಿಗೆ ಇದರಲ್ಲಿ ಉತ್ತರವಿದೆ.
ಕರ್ಮಗಳಲ್ಲಿ ಅಂತಿಮವಾಗಿರುವುದೇ ನಿರ್ಣಾಯಕವಾಗಿವೆ.
ಲಾಭವನ್ನು ತರಲು ಅಥವಾ ಹಾನಿಯನ್ನು ದೂರೀಕರಿಸಲು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಅವಲಂಬಿತರಾಗುವುದು ವ್ಯರ್ಥವಾಗಿದೆ.
ಯಾರು ಜ್ಞಾನ, ದೃಢನಂಬಿಕೆ ಮತ್ತು ವಿಶ್ವಾಸದಿಂದ "ಲಾಇಲಾಹ ಇಲ್ಲಲ್ಲಾಹ್" (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂದು ಹೇಳುತ್ತಾರೋ ಅವರು ಇಸ್ಲಾಂ ಧರ್ಮದಲ್ಲಿ ಪ್ರವೇಶಿಸುತ್ತಾರೆ.
ಕೆಟ್ಟ ಸಹಚರರು ಮತ್ತು ದುಷ್ಟ ಸಂಗಡಿಗರಿಂದ ಮನುಷ್ಯನಿಗೆ ಹಾನಿ ಉಂಟಾಗುತ್ತದೆ.
"ಲಾಇಲಾಹ ಇಲ್ಲಲ್ಲಾಹ್" (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂದರೆ, ವಿಗ್ರಹಾರಾಧನೆ, ಮಹಾಪುರುಷರು (ಔಲಿಯಾ) ಮತ್ತು ಸಜ್ಜನರನ್ನು ತೊರೆದು ಆರಾಧನೆಯನ್ನು ಅಲ್ಲಾಹನಿಗೆ ಮಾತ್ರ ಸೀಮಿತಗೊಳಿಸುವುದಾಗಿದೆ. ಬಹುದೇವವಿಶ್ವಾಸಿಗಳು ಅದರ ಅರ್ಥವನ್ನು ತಿಳಿದಿದ್ದರು.
ರೋಗಿಯಾಗಿರುವ ಬಹುದೇವವಿಶ್ವಾಸಿಯು ಇಸ್ಲಾಂ ಸ್ವೀಕರಿಸಬಹುದೆಂಬ ನಿರೀಕ್ಷೆಯಿದ್ದರೆ ಅವನನ್ನು ಸಂದರ್ಶಿಸಬಹುದು.
ಹಿದಾಯತು-ತ್ತೌಫೀಕ್ (ಹೊಂದಿಸಿಕೊಡುವ ಅಥವಾ ಸತ್ಯವನ್ನು ಸ್ವೀಕರಿಸಲು ಸುಗಮಗೊಳಿಸುವ ಮಾರ್ಗದರ್ಶನ) ಕೇವಲ ಅಲ್ಲಾಹನ ಕೈಯಲ್ಲಿದೆ. ಅದರಲ್ಲಿ ಅವನು ಏಕೈಕನು ಮತ್ತು ಅವನಿಗೆ ಯಾವುದೇ ಸಹಭಾಗಿಗಳಿಲ್ಲ. ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕರ್ತವ್ಯವು ಸರಿಯಾದ ದಾರಿ ಯಾವುದೆಂದು ತೋರಿಸಿಕೊಡುವುದು, ಮಾರ್ಗದರ್ಶನ ಮಾಡುವುದು ಮತ್ತು ಸಂದೇಶವನ್ನು ತಲುಪಿಸುವುದು ಮಾತ್ರವಾಗಿದೆ.