ಜನ್ಮದಿಂದಾಗುವ ಸಂಬಂಧಗಳು ನಿಷಿದ್ಧಗೊಳಿಸುವುದನ್ನು ಸ್ತನಪಾನದಿಂದಾಗುವ ಸಂಬಂಧವೂ ನಿಷಿದ್ಧಗೊಳಿಸುತ್ತದೆ

ಜನ್ಮದಿಂದಾಗುವ ಸಂಬಂಧಗಳು ನಿಷಿದ್ಧಗೊಳಿಸುವುದನ್ನು ಸ್ತನಪಾನದಿಂದಾಗುವ ಸಂಬಂಧವೂ ನಿಷಿದ್ಧಗೊಳಿಸುತ್ತದೆ

ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಜನ್ಮದಿಂದಾಗುವ ಸಂಬಂಧಗಳು ನಿಷಿದ್ಧಗೊಳಿಸುವುದನ್ನು ಸ್ತನಪಾನದಿಂದಾಗುವ ಸಂಬಂಧವೂ ನಿಷಿದ್ಧಗೊಳಿಸುತ್ತದೆ".

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಜನ್ಮ ಮತ್ತು ವಂಶಾವಳಿಯಿಂದ ನಿಷಿದ್ಧವಾಗುವ ಚಿಕ್ಕಮ್ಮ, ದೊಡ್ಡಮ್ಮ, ಚಿಕ್ಕಪ್ಪ, ದೊಡ್ಡಪ್ಪ, ಸಹೋದರ... ಮುಂತಾದ ಸಂಬಂಧಗಳೆಲ್ಲವೂ ಸ್ತನಪಾನದಿಂದಲೂ ನಿಷಿದ್ಧವಾಗುತ್ತವೆ. ಜನ್ಮದಿಂದಾಗುವ ಸಂಬಂಧವು ಯಾವ ನಿಯಮಗಳನ್ನು ಅನುಮತಿಸುತ್ತದೆಯೋ, ಅವುಗಳನ್ನು ಸ್ತನಪಾನದಿಂದಾಗುವ ಸಂಬಂಧವೂ ಅನುಮತಿಸುತ್ತದೆ.

فوائد الحديث

ಈ ಹದೀಸ್ ಸ್ತನಪಾನ ಸಂಬಂಧದ ನಿಯಮಗಳಲ್ಲಿ ಒಂದು ಮೂಲಭೂತ ನಿಯಮವಾಗಿದೆ.

ಇಬ್ನ್ ಹಜರ್ ಹೇಳುತ್ತಾರೆ: "ಜನ್ಮದಿಂದಾಗುವ ಸಂಬಂಧಗಳು ನಿಷಿದ್ಧಗೊಳಿಸುವುದನ್ನು ಸ್ತನಪಾನದಿಂದಾಗುವ ಸಂಬಂಧವೂ ನಿಷಿದ್ಧಗೊಳಿಸುತ್ತದೆ." ಅಂದರೆ, ಜನ್ಮದಿಂದಾಗುವ ಸಂಬಂಧವು ಯಾವುದನ್ನು ಅನುಮತಿಸುತ್ತದೆಯೋ ಅದನ್ನು ಸ್ತನಪಾನದಿಂದಾಗುವ ಸಂಬಂಧವೂ ಅನುಮತಿಸುತ್ತದೆ. ವಿವಾಹ ನಿಷಿದ್ಧ ಸಂಬಂಧಗಳು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳು, ಹಾಲುಣಿಸಿದ ಮಹಿಳೆಯ ಮಕ್ಕಳು ಮತ್ತು ಹಾಲುಕುಡಿದ ಮಗುವಿನ ನಡುವಿನ (ವಿವಾಹ) ನಿಷಿದ್ಧ ಸಂಬಂಧವು ಮುಂತಾದವುಗಳಿಗೆ ಈ ನಿಯಮವನ್ನು ಸರ್ವಾನುಮತದಿಂದ (ಇಜ್ಮಾ) ಅಂಗೀಕರಿಸಲಾಗಿದೆ. ಹಾಗೆಯೇ, ಅವರನ್ನು (ಸ್ತನಪಾನದಿಂದಾಗುವ ಸಂಬಂಧಿಕರನ್ನು) (ಪರಸ್ಪರ) ನೋಡುವುದು, ಅವರೊಂದಿಗೆ ಏಕಾಂತದಲ್ಲಿರುವುದು ಮತ್ತು ಪ್ರಯಾಣಿಸುವುದರ ಅನುಮತಿಯ ವಿಷಯದಲ್ಲಿ (ಈ ನಿಯಮವು) ಅವರನ್ನು (ಜನ್ಮದಿಂದಾಗುವ) ಸಂಬಂಧಿಕರ ಸ್ಥಾನದಲ್ಲಿರಿಸಲಾಗುತ್ತದೆ. ಆದರೆ, ಉತ್ತರಾಧಿಕಾರ, ಖರ್ಚಿಗೆ ನೀಡುವುದರ ಕಡ್ಡಾಯತೆ, ಒಡೆತನದಿಂದಾಗಿ ಸ್ವತಂತ್ರರಾಗುವುದು, ಸಾಕ್ಷ್ಯ, ರಕ್ತಪರಿಹಾರದ ಜವಾಬ್ದಾರಿ ಮತ್ತು ಖಿಸಾಸ್ (ಪ್ರತೀಕಾರ) ಅನ್ನು ಕೈಬಿಡುವುದು ಮುಂತಾದ ತಾಯ್ತನದ ಇತರ ನಿಯಮಗಳು ಇದಕ್ಕೆ ಅನ್ವಯವಾಗುವುದಿಲ್ಲ.

ಸ್ತನಪಾನದಿಂದಾಗುವ (ವಿವಾಹ) ನಿಷಿದ್ಧದ ನಿಯಮವು ಶಾಶ್ವತವಾದ ನಿಷೇಧವಾಗಿದೆ.

ಇತರ ಹದೀಸ್‌ಗಳು ಸೂಚಿಸುವಂತೆ, ಸ್ತನಪಾನದಿಂದಾಗುವ ನಿಷೇಧವು ಐದು ಸುಪರಿಚಿತ (ಪ್ರತ್ಯೇಕ) ಹಾಲುಣಿಸುವಿಕೆಯಿಂದ ಸ್ಥಾಪಿತವಾಗುತ್ತದೆ. ಹಾಗೆಯೇ, ಅದು ಮಗುವಿಗೆ ಮೊದಲ ಎರಡು ವರ್ಷ ತುಂಬುವುದರೊಳಗೆ ಆಗಿರಬೇಕು.

ವಂಶಾವಳಿಯಿಂದ ನಿಷಿದ್ಧರಾದವರು: ತಾಯಂದಿರು - ಇದರಲ್ಲಿ ತಾಯಿಯ ಅಥವಾ ತಂದೆಯ ಕಡೆಯ ಅಜ್ಜಿಯರು, ಅವರು ಎಷ್ಟೇ ಮೇಲಿನವರಾಗಿದ್ದರೂ ಸೇರುತ್ತಾರೆ. ಹೆಣ್ಣುಮಕ್ಕಳು - ಇದರಲ್ಲಿ ಹೆಣ್ಣುಮಕ್ಕಳ ಹೆಣ್ಣುಮಕ್ಕಳು, ಮತ್ತು ಗಂಡುಮಕ್ಕಳ ಹೆಣ್ಣುಮಕ್ಕಳು, ಅವರು ಎಷ್ಟೇ ಕೆಳಗಿನವರಾಗಿದ್ದರೂ ಸೇರುತ್ತಾರೆ. ಸಹೋದರಿಯರು - ಅವರು ತಂದೆ-ತಾಯಿ ಇಬ್ಬರಿಂದಲೂ, ಅಥವಾ ಅವರಿಬ್ಬರಲ್ಲಿ ಒಬ್ಬರಿಂದಲೂ ಆಗಿರಬಹುದು. ಅತ್ತೆ (ತಂದೆಯ ಸಹೋದರಿಯರು) - ಇದರಲ್ಲಿ ತಂದೆಯ ಪೂರ್ಣ ಮತ್ತು ಮಲ ಸಹೋದರಿಯರೆಲ್ಲರೂ, ಹಾಗೆಯೇ ನಿಮ್ಮ ಅಜ್ಜಂದಿರ ಎಲ್ಲಾ ಸಹೋದರಿಯರೂ, ಅವರು ಎಷ್ಟೇ ಮೇಲಿನವರಾಗಿದ್ದರೂ, ಸೇರುತ್ತಾರೆ. ಚಿಕ್ಕಮ್ಮ/ದೊಡ್ಡಮ್ಮ (ತಾಯಿಯ ಸಹೋದರಿಯರು) - ಇದರಲ್ಲಿ ತಾಯಿಯ ಪೂರ್ಣ ಮತ್ತು ಮಲ ಸಹೋದರಿಯರೆಲ್ಲರೂ, ಹಾಗೆಯೇ ಅಜ್ಜಿಯರ ಎಲ್ಲಾ ಸಹೋದರಿಯರೂ, ಅವರು ಎಷ್ಟೇ ಮೇಲಿನವರಾಗಿದ್ದರೂ, ಅವರು ತಂದೆಯ ಕಡೆಯ ಅಜ್ಜಿಯರಾಗಲಿ ಅಥವಾ ತಾಯಿಯ ಕಡೆಯ ಅಜ್ಜಿಯರಾಗಲಿ, ಸೇರುತ್ತಾರೆ. ಸಹೋದರನ ಹೆಣ್ಣುಮಕ್ಕಳು, ಮತ್ತು ಸಹೋದರಿಯ ಹೆಣ್ಣುಮಕ್ಕಳು, ಮತ್ತು ಅವರ ಹೆಣ್ಣುಮಕ್ಕಳು, ಅವರು ಎಷ್ಟೇ ಕೆಳಗಿನವರಾಗಿದ್ದರೂ, ಸೇರುತ್ತಾರೆ.

ಸ್ತನಪಾನ ಸಂಬಂಧದಿಂದ ನಿಷಿದ್ಧರಾದವರು: ವಂಶಾವಳಿಯಿಂದ ನಿಷಿದ್ಧವಾಗುವುದೆಲ್ಲವೂ ಸ್ತನಪಾನದಿಂದಲೂ ನಿಷಿದ್ಧವಾಗುತ್ತವೆ. ಆದ್ದರಿಂದ, ವಂಶಾವಳಿಯಿಂದ ನಿಷಿದ್ಧವಾಗುವ ಪ್ರತಿಯೊಬ್ಬ ಮಹಿಳೆಗೆ ಸಮಾನಳಾಗಿರುವವಳು ಸ್ತನಪಾನದಿಂದಲೂ ನಿಷಿದ್ಧಳಾಗುತ್ತಾಳೆ. ಆದರೆ, ಸ್ತನಪಾನದಿಂದ ಉಂಟಾಗುವ ಸಹೋದರನ ತಾಯಿ ಮತ್ತು ಅವನ ಮಗನ ಸಹೋದರಿ ನಿಷಿದ್ಧಳಾಗುವುದಿಲ್ಲ.

التصنيفات

Breastfeeding