ಓ ಜನರೇ! ಅಲ್ಲಾಹು ನಿಮ್ಮಿಂದ ಅಜ್ಞಾನಕಾಲದ ದರ್ಪ ಮತ್ತು ಪೂರ್ವಜರ ಹೆಸರಿನಲ್ಲಿ ಜಂಭಕೊಚ್ಚುವುದನ್ನು ತೆಗೆದುಹಾಕಿದ್ದಾನೆ

ಓ ಜನರೇ! ಅಲ್ಲಾಹು ನಿಮ್ಮಿಂದ ಅಜ್ಞಾನಕಾಲದ ದರ್ಪ ಮತ್ತು ಪೂರ್ವಜರ ಹೆಸರಿನಲ್ಲಿ ಜಂಭಕೊಚ್ಚುವುದನ್ನು ತೆಗೆದುಹಾಕಿದ್ದಾನೆ

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: "ಮಕ್ಕಾ ವಿಜಯದ ದಿನದಂದು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಚನ ನೀಡುತ್ತಾ ಹೇಳಿದರು: "ಓ ಜನರೇ! ಅಲ್ಲಾಹು ನಿಮ್ಮಿಂದ ಅಜ್ಞಾನಕಾಲದ ದರ್ಪ ಮತ್ತು ಪೂರ್ವಜರ ಹೆಸರಿನಲ್ಲಿ ಜಂಭಕೊಚ್ಚುವುದನ್ನು ತೆಗೆದುಹಾಕಿದ್ದಾನೆ. ಜನರಲ್ಲಿ ಎರಡು ವಿಧಗಳಿವೆ: ಅಲ್ಲಾಹನ ಗೌರವಕ್ಕೆ ಪಾತ್ರರಾದ ಧರ್ಮನಿಷ್ಠ, ನೀತಿವಂತ ಜನರು ಮತ್ತು ಅಲ್ಲಾಹು ತುಚ್ಛವಾಗಿ ಪರಿಗಣಿಸುವ ಕೆಟ್ಟ, ನತದೃಷ್ಟ ಜನರು. ಮನುಷ್ಯರೆಲ್ಲರೂ ಆದಮರ ಮಕ್ಕಳು. ಅಲ್ಲಾಹು ಆದಮರನ್ನು ಮಣ್ಣಿನಿಂದ ಸೃಷ್ಟಿಸಿದನು. ಅಲ್ಲಾಹು ಹೇಳುತ್ತಾನೆ: "ಜನರೇ! ನಿಶ್ಚಯವಾಗಿಯೂ ನಾವು ನಿಮ್ಮನ್ನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿದ್ದೇವೆ. ನೀವು ಪರಸ್ಪರ ಗುರುತಿಸುವುದಕ್ಕಾಗಿ ನಾವು ನಿಮ್ಮನ್ನು ವಿಭಿನ್ನ ಜನಾಂಗ ಮತ್ತು ಗೋತ್ರಗಳನ್ನಾಗಿ ಮಾಡಿದೆವು. ನಿಶ್ಚಯವಾಗಿಯೂ ನಿಮ್ಮಲ್ಲಿ ಅತ್ಯಧಿಕ ದೇವಭಯವುಳ್ಳವನು ಯಾರೋ ಅವನೇ ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ಗೌರವಾನ್ವಿತನು. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ಸೂಕ್ಷ್ಮ ಜ್ಞಾನಿಯಾಗಿದ್ದಾನೆ." [ಹುಜುರಾತ್ 13]."

[صحيح] [رواه الترمذي وابن حبان]

الشرح

ಮಕ್ಕಾ ವಿಜಯದ ದಿನದಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಚನ ನೀಡುತ್ತಾ ಹೇಳಿದರು: ಓ ಜನರೇ! ನಿಶ್ಚಯವಾಗಿಯೂ ಅಲ್ಲಾಹು ನಿಮ್ಮಿಂದ ಅಜ್ಞಾನಕಾಲದ ಅಹಂಕಾರ ಮತ್ತು ಪೂರ್ವಜರ ಹೆಸರು ಹೇಳಿ ಜಂಭಕೊಚ್ಚುವುದನ್ನು ತೆಗೆದುಹಾಕಿದ್ದಾನೆ. ಜನರಲ್ಲಿ ಎರಡು ವಿಧಗಳಿವೆ: ಒಂದೋ ಅವರು ಸತ್ಯವಿಶ್ವಾಸಿಗಳು, ಧರ್ಮನಿಷ್ಠರು ಮತ್ತು ಅಲ್ಲಾಹನನ್ನು ಆರಾಧಿಸುವವರಾಗಿದ್ದಾರೆ. ಇಂತಹ ಜನರು ಅಲ್ಲಾಹನ ಗೌರವಕ್ಕೆ ಪಾತ್ರರಾದವರು. ಅವರಿಗೆ ಯಾವುದೇ ಕುಲಮಹಿಮೆ ಅಥವಾ ಸ್ಥಾನಮಾನವಿಲ್ಲದಿದ್ದರೂ ಸಹ. ಅಥವಾ ಅವರು ಸತ್ಯನಿಷೇಧಿಗಳು, ದುಷ್ಟರು ಮತ್ತು ನತದೃಷ್ಟರಾಗಿದ್ದಾರೆ. ಇವರು ಅಲ್ಲಾಹನ ದೃಷ್ಟಿಯಲ್ಲಿ ನೀಚರು ಮತ್ತು ತುಚ್ಛರು. ಅವರಿಗೆ ಕುಲಮಹಿಮೆ ಅಥವಾ ಸ್ಥಾನಮಾನಗಳಿದ್ದರೂ ಸಹ. ಮನುಷ್ಯರೆಲ್ಲರೂ ಆದಮರ ಮಕ್ಕಳು. ಅಲ್ಲಾಹು ಆದಮರನ್ನು ಮಣ್ಣಿನಿಂದ ಸೃಷ್ಟಿಸಿದನು. ಯಾರ ಮೂಲವು ಮಣ್ಣಿನಿಂದಾಗಿದೆಯೋ ಅವರಿಗೆ ಅಹಂಕಾರಪಡುವುದು, ಜಂಭಕೊಚ್ಚುವುದು ಯೋಗ್ಯವಲ್ಲ. ಅಲ್ಲಾಹನ ಈ ವಚನ ಈ ವಿಷಯವನ್ನು ದೃಢೀಕರಿಸುತ್ತದೆ: "ಜನರೇ! ನಿಶ್ಚಯವಾಗಿಯೂ ನಾವು ನಿಮ್ಮನ್ನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿದ್ದೇವೆ. ನೀವು ಪರಸ್ಪರ ಗುರುತಿಸುವುದಕ್ಕಾಗಿ ನಾವು ನಿಮ್ಮನ್ನು ವಿಭಿನ್ನ ಜನಾಂಗ ಮತ್ತು ಗೋತ್ರಗಳನ್ನಾಗಿ ಮಾಡಿದೆವು. ನಿಶ್ಚಯವಾಗಿಯೂ ನಿಮ್ಮಲ್ಲಿ ಅತ್ಯಧಿಕ ದೇವಭಯವುಳ್ಳವನು ಯಾರೋ ಅವನೇ ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ಗೌರವಾನ್ವಿತನು. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ಸೂಕ್ಷ್ಮ ಜ್ಞಾನಿಯಾಗಿದ್ದಾನೆ." [ಕುರ್‌ಆನ್ 49:13]

فوائد الحديث

ವಂಶ ಮತ್ತು ಅಂತಸ್ತಿನ ಹೆಸರಿನಲ್ಲಿ ಜಂಭಪಡುವುದನ್ನು ವಿರೋಧಿಸಲಾಗಿದೆ.

التصنيفات

Excellence and Merits of Islam, Universality of Islam, Human Rights in Islam, Interpretation of verses