ನೀವು ಹೊಲಗದ್ದೆಗಳನ್ನು (ಅತಿಯಾಗಿ) ಇಟ್ಟುಕೊಳ್ಳಬೇಡಿ, (ಹಾಗೆ ಮಾಡಿದರೆ) ನೀವು ಈ ಪ್ರಪಂಚದಲ್ಲೇ ಆಸಕ್ತರಾಗುತ್ತೀರಿ

ನೀವು ಹೊಲಗದ್ದೆಗಳನ್ನು (ಅತಿಯಾಗಿ) ಇಟ್ಟುಕೊಳ್ಳಬೇಡಿ, (ಹಾಗೆ ಮಾಡಿದರೆ) ನೀವು ಈ ಪ್ರಪಂಚದಲ್ಲೇ ಆಸಕ್ತರಾಗುತ್ತೀರಿ

ಅಬ್ದುಲ್ಲಾ ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಹೊಲಗದ್ದೆಗಳನ್ನು (ಅತಿಯಾಗಿ) ಇಟ್ಟುಕೊಳ್ಳಬೇಡಿ, (ಹಾಗೆ ಮಾಡಿದರೆ) ನೀವು ಈ ಪ್ರಪಂಚದಲ್ಲೇ ಆಸಕ್ತರಾಗುತ್ತೀರಿ".

[حسن لغيره] [رواه الترمذي وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜಮೀನು, ತೋಟ ಮತ್ತು ಹೊಲವನ್ನು (ಅತಿಯಾಗಿ) ಇಟ್ಟುಕೊಳ್ಳುವುದನ್ನು ನಿಷೇಧಿಸಿದರು. ಏಕೆಂದರೆ ಅದು ಇಹಲೋಕದಲ್ಲಿ ಆಸಕ್ತಿಯನ್ನುಂಟುಮಾಡುವ ಮತ್ತು ಅದರ ಕಡೆಗೆ ವಾಲಿಕೊಂಡು ಪರಲೋಕದಿಂದ ವಿಮುಖಗೊಳಿಸುವ ಕಾರಣಗಳಲ್ಲಿ ಒಂದಾಗಿದೆ.

فوائد الحديث

ಪರಲೋಕದಿಂದ ವಿಮುಖರಾಗಲು ಕಾರಣವಾಗುವ ರೀತಿಯಲ್ಲಿ ಇಹಲೋಕದ ವಸ್ತುಗಳನ್ನು ಅತಿಯಾಗಿ ಇಟ್ಟುಕೊಳ್ಳುವುದನ್ನು ನಿಷೇಧಿಸಲಾಗಿದೆ.

ಜೀವನೋಪಾಯಕ್ಕೆ ಬೇಕಾದಷ್ಟು ವಸ್ತುಗಳನ್ನು ಇಟ್ಟುಕೊಳ್ಳುವುದಕ್ಕೆ ಈ ಹದೀಸ್‌ನಲ್ಲಿ ನಿಷೇಧವಿಲ್ಲ. ಬದಲಿಗೆ, ಇಹಲೋಕದ ವಿಷಯಗಳಲ್ಲಿ ಸಂಪೂರ್ಣವಾಗಿ ಮುಳುಗಿಹೋಗುವುದನ್ನು ಮತ್ತು ಪರಲೋಕವನ್ನು ಮರೆಯುವುದನ್ನು ಇದರಲ್ಲಿ ನಿಷೇಧಿಸಲಾಗಿದೆ.

ಅಸ್ಸಿಂದಿ ಹೇಳುತ್ತಾರೆ: ಇದರ ಅರ್ಥವೇನೆಂದರೆ, ಜಮೀನನ್ನು ಇಟ್ಟುಕೊಳ್ಳುವುದರಲ್ಲಿ ಅತಿಯಾಗಿ ಮುಳುಗಿಹೋಗಬೇಡಿ. ಹಾಗೆ ಮಾಡಿದರೆ ನೀವು ಅದರಿಂದಾಗಿ ಅಲ್ಲಾಹನ ಸ್ಮರಣೆಯಿಂದ ವಿಮುಖರಾಗುತ್ತೀರಿ.

التصنيفات

Virtues and Manners, Condemning Love of the World