ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಬೂ ಬಕರ್ ಮತ್ತು ಉಮರ್ ರಿಗೆ ಹೇಳಿದರು: "ಪ್ರವಾದಿಗಳು ಮತ್ತು…

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಬೂ ಬಕರ್ ಮತ್ತು ಉಮರ್ ರಿಗೆ ಹೇಳಿದರು: "ಪ್ರವಾದಿಗಳು ಮತ್ತು ಸಂದೇಶವಾಹಕರುಗಳನ್ನು ಹೊರತುಪಡಿಸಿದರೆ ಇವರಿಬ್ಬರು ಪೂರ್ವಿಕ ಮತ್ತು ನಂತರದ ವಯಸ್ಕ ಸ್ವರ್ಗವಾಸಿಗಳಿಗೆ ಮುಖಂಡರಾಗಿದ್ದಾರೆ

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಬೂ ಬಕರ್ ಮತ್ತು ಉಮರ್ ರಿಗೆ ಹೇಳಿದರು: "ಪ್ರವಾದಿಗಳು ಮತ್ತು ಸಂದೇಶವಾಹಕರುಗಳನ್ನು ಹೊರತುಪಡಿಸಿದರೆ ಇವರಿಬ್ಬರು ಪೂರ್ವಿಕ ಮತ್ತು ನಂತರದ ವಯಸ್ಕ ಸ್ವರ್ಗವಾಸಿಗಳಿಗೆ ಮುಖಂಡರಾಗಿದ್ದಾರೆ."

[صحيح] [رواه الترمذي]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಅಬೂಬಕರ್ ಸಿದ್ಧೀಕ್ ಮತ್ತು ಉಮರ್ ಫಾರೂಕ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಗಳನ್ನು ಬಿಟ್ಟರೆ ಮನುಷ್ಯರಲ್ಲಿ ಅತಿಶ್ರೇಷ್ಠರಾಗಿದ್ದಾರೆ. ಹಾಗೆಯೇ, ಪ್ರವಾದಿಗಳು ಮತ್ತು ಸಂದೇಶವಾಹಕರುಗಳನ್ನು ಬಿಟ್ಟರೆ ಸ್ವರ್ಗವನ್ನು ಪ್ರವೇಶಿಸಿದವರಲ್ಲೂ ಇವರು ಅತಿಶ್ರೇಷ್ಠರಾಗಿದ್ದಾರೆ.

فوائد الحديث

ಪ್ರವಾದಿಗಳನ್ನು ಮತ್ತು ಸಂದೇಶವಾಹಕರುಗಳನ್ನು ಹೊರತುಪಡಿಸಿದರೆ, ಅಬೂಬಕರ್ ಮತ್ತು ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಮನುಷ್ಯರಲ್ಲೇ ಅತಿಶ್ರೇಷ್ಠರಾಗಿದ್ದಾರೆ.

ಸ್ವರ್ಗದಲ್ಲಿ ವಯಸ್ಕರಿಲ್ಲ. ಬದಲಿಗೆ, ಅದನ್ನು ಪ್ರವೇಶಿಸುವವರು ಮೂವತ್ತಮೂರು ವರ್ಷ ವಯಸ್ಸಿನವರಾಗಿರುತ್ತಾರೆ. ಹದೀಸಿನ ಅರ್ಥವೇನೆಂದರೆ, ಅವರಿಬ್ಬರು ಜಗತ್ತಿನಲ್ಲಿ ವಯಸ್ಕರಾಗಿದ್ದು ನಿಧನರಾದವರ ಮುಖಂಡರಾಗಿದ್ದಾರೆ. ಅಥವಾ ಆ ಹದೀಸನ್ನು ಹೇಳುವ ಸಮಯದಲ್ಲಿ ಜಗತ್ತಿನಲ್ಲಿ ಅವರು ಯಾವ ವಯಸ್ಸಿನಲ್ಲಿದ್ದರೋ ಅದನ್ನು ಪರಿಗಣಿಸಿ ಹೇಳಲಾಗಿದೆ.

التصنيفات

Degrees of the Companions, Merits of the Companions