ಅಂತ್ಯಸಮಯವು ಸಂಭವಿಸುವಾಗ ಜೀವಂತವಿರುವವರು ಮತ್ತು ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಳ್ಳುವವರು ನಿಶ್ಚಯವಾಗಿಯೂ…

ಅಂತ್ಯಸಮಯವು ಸಂಭವಿಸುವಾಗ ಜೀವಂತವಿರುವವರು ಮತ್ತು ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಳ್ಳುವವರು ನಿಶ್ಚಯವಾಗಿಯೂ ಜನರಲ್ಲೇ ಅತಿ ನಿಕೃಷ್ಟರಾಗಿದ್ದಾರೆ

ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಅಂತ್ಯಸಮಯವು ಸಂಭವಿಸುವಾಗ ಜೀವಂತವಿರುವವರು ಮತ್ತು ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಳ್ಳುವವರು ನಿಶ್ಚಯವಾಗಿಯೂ ಜನರಲ್ಲೇ ಅತಿ ನಿಕೃಷ್ಟರಾಗಿದ್ದಾರೆ."

[حسن] [رواه أحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಅತಿನಿಕೃಷ್ಟ ಜನರ ಬಗ್ಗೆ ತಿಳಿಸುತ್ತಿದ್ದಾರೆ. ಅವರು ಯಾರೆಂದರೆ ಅಂತ್ಯದಿನ ಸಂಭವಿಸುವಾಗ ಜೀವಂತವಿರುವವರು ಮತ್ತು ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿ ಅವುಗಳ ಬಳಿ ಮತ್ತು ಅವುಗಳಿಗೆ ಮುಖಮಾಡಿ ನಮಾಝ್ ಮಾಡುವವರು.

فوائد الحديث

ಸಮಾಧಿಗಳ ಮೇಲೆ ಆರಾಧನಾಲಯಗಳನ್ನು (ಮಸೀದಿಗಳನ್ನು) ನಿರ್ಮಿಸುವುದನ್ನು ನಿಷೇಧಿಸಲಾಗಿದೆ. ಏಕೆಂದರೆ, ಅವು ಬಹುದೇವಾರಾಧನೆಗೆ ಸಾಗಿಸುವ ಮಾಧ್ಯಮಗಳಾಗಿವೆ.

ಸಮಾಧಿಗಳ ಮೇಲೆ ಕಟ್ಟಡಗಳಿಲ್ಲದಿದ್ದರೂ ಅವುಗಳ ಬಳಿ ನಮಾಝ್ ಮಾಡುವುದನ್ನು ವಿರೋಧಿಸಲಾಗಿದೆ. ಏಕೆಂದರೆ, ಅರಬ್ಬಿ ಭಾಷೆಯಲ್ಲಿ ಸಾಷ್ಟಾಂಗ ಮಾಡುವ ಸ್ಥಳವನ್ನು 'ಮಸ್ಜಿದ್' ಎಂದು ಕರೆಯಲಾಗುತ್ತದೆ. ಅಲ್ಲಿ ಕಟ್ಟಡ ಇದ್ದರೂ ಇಲ್ಲದಿದ್ದರೂ ಸಹ.

ಮಹಾಪುರುಷರ ಸಮಾಧಿಗಳ ಬಳಿ ನಮಾಝ್ ಮಾಡುತ್ತಾ ಅವುಗಳನ್ನು ಆರಾಧನಾಲಯಗಳಾಗಿ ಮಾಡಿಕೊಳ್ಳುವವರು ಸೃಷ್ಟಿಗಳಲ್ಲೇ ಅತಿ ನಿಕೃಷ್ಟರಾಗಿದ್ದಾರೆ. ಅವರ ಉದ್ದೇಶವು ಅಲ್ಲಾಹನ ಸಾಮೀಪ್ಯವನ್ನು ಪಡೆಯುವುದೆಂದು ಅವರು ವಾದಿಸಿದರೂ ಸಹ.

التصنيفات

Portents of the Hour