ಯಾರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಲು ಒಬ್ಬ ಯೋಧನನ್ನು ಸಿದ್ಧಗೊಳಿಸುತ್ತಾನೋ ಅವನು ಯುದ್ಧ ಮಾಡಿದವನಿಗೆ ಸಮಾನನಾಗುತ್ತಾನೆ.…

ಯಾರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಲು ಒಬ್ಬ ಯೋಧನನ್ನು ಸಿದ್ಧಗೊಳಿಸುತ್ತಾನೋ ಅವನು ಯುದ್ಧ ಮಾಡಿದವನಿಗೆ ಸಮಾನನಾಗುತ್ತಾನೆ. ಯಾರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವವನು ಬಿಟ್ಟು ಹೋದ ಅವನ ಆಶ್ರಿತರನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೋ ಅವನು ಯುದ್ಧ ಮಾಡಿದವನಿಗೆ ಸಮಾನನಾಗುತ್ತಾನೆ

ಝೈದ್ ಬಿನ್ ಖಾಲಿದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಲು ಒಬ್ಬ ಯೋಧನನ್ನು ಸಿದ್ಧಗೊಳಿಸುತ್ತಾನೋ ಅವನು ಯುದ್ಧ ಮಾಡಿದವನಿಗೆ ಸಮಾನನಾಗುತ್ತಾನೆ. ಯಾರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವವನು ಬಿಟ್ಟು ಹೋದ ಅವನ ಆಶ್ರಿತರನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೋ ಅವನು ಯುದ್ಧ ಮಾಡಿದವನಿಗೆ ಸಮಾನನಾಗುತ್ತಾನೆ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವವನಿಗೆ, ಅವನ ಪ್ರಯಾಣಕ್ಕೆ ಬೇಕಾದ ವಸ್ತುಗಳನ್ನು ಮತ್ತು ಅವನಿಗೆ ಅತ್ಯಗತ್ಯವಾದ ಶಸ್ತ್ರ, ಸವಾರಿ, ಆಹಾರ, ಖರ್ಚು ಮುಂತಾದವುಗಳನ್ನು ಸಿದ್ಧಗೊಳಿಸುತ್ತಾನೋ, ಅವನು ಯುದ್ಧ ಮಾಡಿದವನಿಗೆ ಸಮಾನನಾಗುತ್ತಾನೆ ಮತ್ತು ಯುದ್ಧ ಮಾಡುವವರಿಗೆ ದೊರೆಯುವ ಪ್ರತಿಫಲವು ಅವನಿಗೂ ದೊರೆಯುತ್ತದೆ. ಅದೇ ರೀತಿ, ಯಾರು ಯುದ್ಧ ಮಾಡುವವರ ಕಾರ್ಯವನ್ನು ವಹಿಸಿಕೊಳ್ಳುತ್ತಾರೋ ಮತ್ತು ಅವರ ಅನುಪಸ್ಥಿತಿಯಲ್ಲಿ ಅವರ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಾ ಅವನ ಸ್ಥಾನದಲ್ಲಿ ನಿಲ್ಲುತ್ತಾರೋ ಅವರೂ ಕೂಡ ಯುದ್ಧ ಮಾಡಿದವರಿಗೆ ಸಮಾನರಾಗುತ್ತಾರೆ.

فوائد الحديث

ಒಳಿತಿನ ವಿಷಯಗಳಲ್ಲಿ ಸಹಕರಿಸಲು ಮುಸಲ್ಮಾನರನ್ನು ಪ್ರೋತ್ಸಾಹಿಸಲಾಗಿದೆ.

ಇಬ್ನ್ ಹಜರ್ ಹೇಳಿದರು: "ಮುಸ್ಲಿಮರ ಹಿತಕ್ಕಾಗಿ ಕಾರ್ಯವೆಸಗುವವರಿಗೆ ಉಪಕಾರ ಮಾಡಲು ಅಥವಾ ಅವರ ಪ್ರಮುಖ ಕಾರ್ಯಗಳನ್ನು ವಹಿಸಿಕೊಳ್ಳಲು ಈ ಹದೀಸ್ ಪ್ರೋತ್ಸಾಹಿಸುತ್ತದೆ."

ಸಾಮಾನ್ಯ ನಿಯಮ: ಅಲ್ಲಾಹನ ಆಜ್ಞಾಪಾಲನೆ ಮಾಡುವ ವಿಷಯದಲ್ಲಿ ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡಿದರೆ, ಅವರಿಗೆ ದೊರೆಯುವಷ್ಟೇ ಪ್ರತಿಪಲ ಇವರಿಗೂ ದೊರೆಯುತ್ತದೆ. ಇದರಿಂದ ಅವರಿಗೆ ದೊರೆಯುವ ಪ್ರತಿಫಲದಲ್ಲಿ ಯಾವುದೇ ಕಡಿತ ಉಂಟಾಗುವುದಿಲ್ಲ.

التصنيفات

Excellence of Jihad