إعدادات العرض
“ಆಡಳಿತಗಾರರು ಬರುವರು. ಆಗ ಅವರು ಮಾಡುವ ಕೆಲವು ಕಾರ್ಯಗಳನ್ನು ನೀವು ಗುರುತಿಸುವಿರಿ ಮತ್ತು ಕೆಲವು ಕಾರ್ಯಗಳನ್ನು ಅಲ್ಲಗಳೆಯುವಿರಿ.…
“ಆಡಳಿತಗಾರರು ಬರುವರು. ಆಗ ಅವರು ಮಾಡುವ ಕೆಲವು ಕಾರ್ಯಗಳನ್ನು ನೀವು ಗುರುತಿಸುವಿರಿ ಮತ್ತು ಕೆಲವು ಕಾರ್ಯಗಳನ್ನು ಅಲ್ಲಗಳೆಯುವಿರಿ. ಯಾರು (ಅವರ ಕೆಡುಕುಗಳನ್ನು) ಗುರುತಿಸುತ್ತಾರೋ ಅವರು ದೋಷಮುಕ್ತರಾಗುವರು. ಯಾರು (ಅವುಗಳಿಗೆ) ಅಸಮ್ಮತಿ ಸೂಚಿಸುತ್ತಾರೋ ಅವರು ಸುರಕ್ಷಿತರಾಗುವರು. ಆದರೆ ಅವರ ಬಗ್ಗೆ ಸಂತೃಪ್ತರಾಗಿ ಅವರನ್ನು ಅನುಸರಿಸುವವರು ಇದಕ್ಕೆ ಹೊರತಾಗಿದ್ದಾರೆ
ಸತ್ಯವಿಶ್ವಾಸಿಗಳ ಮಾತೆ ಉಮ್ಮು ಸಲಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಆಡಳಿತಗಾರರು ಬರುವರು. ಆಗ ಅವರು ಮಾಡುವ ಕೆಲವು ಕಾರ್ಯಗಳನ್ನು ನೀವು ಗುರುತಿಸುವಿರಿ ಮತ್ತು ಕೆಲವು ಕಾರ್ಯಗಳನ್ನು ಅಲ್ಲಗಳೆಯುವಿರಿ. ಯಾರು (ಅವರ ಕೆಡುಕುಗಳನ್ನು) ಗುರುತಿಸುತ್ತಾರೋ ಅವರು ದೋಷಮುಕ್ತರಾಗುವರು. ಯಾರು (ಅವುಗಳಿಗೆ) ಅಸಮ್ಮತಿ ಸೂಚಿಸುತ್ತಾರೋ ಅವರು ಸುರಕ್ಷಿತರಾಗುವರು. ಆದರೆ ಅವರ ಬಗ್ಗೆ ಸಂತೃಪ್ತರಾಗಿ ಅವರನ್ನು ಅನುಸರಿಸುವವರು ಇದಕ್ಕೆ ಹೊರತಾಗಿದ್ದಾರೆ.” ಅವರು (ಸಹಾಬಿಗಳು) ಕೇಳಿದರು: “ನಾವು ಅವರ (ಆಡಳಿತಗಾರರ) ವಿರುದ್ಧ ಯುದ್ಧ ಮಾಡಬೇಕೇ?” ಪ್ರವಾದಿಯವರು ಉತ್ತರಿಸಿದರು: “ಬೇಡ, ಅವರು ನಮಾಝ್ ನಿರ್ವಹಿಸುತ್ತಿರುವ ತನಕ.”
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी ئۇيغۇرچە Kurdî Hausa Português മലയാളം తెలుగు Kiswahili မြန်မာ Deutsch 日本語 پښتو Tiếng Việt অসমীয়া Shqip Svenska Čeština ગુજરાતી አማርኛ Yorùbá සිංහල தமிழ் ไทย دری Кыргызча or Kinyarwanda नेपाली Română Malagasy Lietuvių Oromoo Nederlands Soomaali Српски Українська Wolof Mooreالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ನಮ್ಮ ಮೇಲೆ ಕೆಲವು ಆಡಳಿತಗಾರರು ಆಡಳಿತ ನಡೆಸುವರು. ಆಗ ನಾವು ಅವರು ಮಾಡುವ ಕೆಲವು ಕಾರ್ಯಗಳನ್ನು ಗುರುತಿಸುತ್ತೇವೆ. ಏಕೆಂದರೆ ಅವು ನಮ್ಮ ಶರಿಯತ್ (ಧರ್ಮಶಾಸ್ತ್ರ) ಗೆ ಅನುಗುಣವಾಗಿರುತ್ತವೆ. ಕೆಲವು ಕಾರ್ಯಗಳನ್ನು ನಾವು ಅಲ್ಲಗಳೆಯುತ್ತೇವೆ. ಏಕೆಂದರೆ ಅವು ನಮ್ಮ ಶರಿಯತ್‌ಗೆ ವಿರುದ್ಧವಾಗಿರುತ್ತವೆ. ಆಡಳಿತಗಾರರು ಮಾಡುವ ದುಷ್ಕೃತ್ಯಗಳನ್ನು ತಡೆಯಲು ಸಾಧ್ಯವಾಗದೆ ಹೃದಯದಲ್ಲೇ ದ್ವೇಷಿಸುವವರು ಪಾಪ ಮತ್ತು ಕಪಟತೆಯಿಂದ ಮುಕ್ತರಾಗುತ್ತಾರೆ. ಅವರ ದುಷ್ಕೃತ್ಯಗಳನ್ನು ಕೈಯಿಂದ ಅಥವಾ ನಾಲಗೆಯಿಂದ ತಡೆಯಲು ಸಾಧ್ಯವಿದ್ದು ಅದನ್ನು ಮಾಡುವವರು ಪಾಪ ಮತ್ತು ಅದರಲ್ಲಿ ಸಹಭಾಗಿತ್ವದಿಂದ ಸುರಕ್ಷಿತರಾಗುತ್ತಾರೆ. ಆದರೆ ಯಾರು ಅವರ ದುಷ್ಕೃತ್ಯಗಳಿಗೆ ಸಂತೃಪ್ತಿ ಸೂಚಿಸಿ ಅವರನ್ನು ಅನುಸರಿಸುತ್ತಾರೋ ಅವರು ಆ ಆಡಳಿತಗಾರರು ನಾಶವಾಗುವಂತೆಯೇ ನಾಶವಾಗುತ್ತಾರೆ. ಆಗ ಸಹಾಬಿಗಳು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಇಂತಹ ಆಡಳಿತಗಾರರ ವಿರುದ್ಧ ನಾವು ಯುದ್ಧ ಮಾಡಬೇಕೇ?" ಅವರು ಉತ್ತರಿಸಿದರು: "ಬೇಡ, ಅವರು ನಮಾಝ್ ಸಂಸ್ಥಾಪಿಸುತ್ತಿರುವ ತನಕ ಅವರ ವಿರುದ್ಧ ಯುದ್ಧ ಮಾಡಬಾರದು."فوائد الحديث
ಭವಿಷ್ಯದಲ್ಲಿ ಸಂಭವಿಸುವ ಸಂಗತಿಯ ಕುರಿತು ಭವಿಷ್ಯ ನುಡಿದದ್ದು ಮತ್ತು ಅದು ಹಾಗೆಯೇ ಸಂಭವಿಸಿದ್ದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಾದಿತ್ವದ ಚಿಹ್ನೆಗಳಲ್ಲಿ ಒಂದಾಗಿದೆ.
ದುಷ್ಕರ್ಮಗಳಿಗೆ ಸಂತೃಪ್ತಿ ಸೂಚಿಸಬಾರದು ಮತ್ತು ಅದರಲ್ಲಿ ಸಹಭಾಗಿಯಾಗಬಾರದು. ಬದಲಿಗೆ, ಅವುಗಳನ್ನು ವಿರೋಧಿಸುವುದು ಕಡ್ಡಾಯವಾಗಿದೆ.
ಆಡಳಿತಗಾರರು ಶರಿಯತ್ (ಧರ್ಮಶಾಸ್ತ್ರ) ಗೆ ವಿರುದ್ಧವಾದ ಸಂಗತಿಯನ್ನು ಮಾಡುವಾಗ ಅದರಲ್ಲಿ ಅವರನ್ನು ಅನುಸರಿಸಬಾರದು.
ಮುಸ್ಲಿಮ್ ಆಡಳಿತಗಾರರ ವಿರುದ್ಧ ದಂಗೆಯೇಳಬಾರದು. ಏಕೆಂದರೆ, ಅದು ಅನೇಕ ರೀತಿಯ ಹಾನಿ, ರಕ್ತಪಾತ ಮತ್ತು ಅಶಾಂತಿಗೆ ಕಾರಣವಾಗುತ್ತದೆ. ದುಷ್ಟ ಆಡಳಿತಗಾರರ ದುಷ್ಕರ್ಮಗಳನ್ನು ಸಹಿಸಿಕೊಳ್ಳುವುದು ಮತ್ತು ಅವರು ನೀಡುವ ತೊಂದರೆಗಳಿಗೆ ತಾಳ್ಮೆಯಿಂದ ಪ್ರತಿಕ್ರಿಯಿಸುವುದು ದಂಗೆಯಿಂದ ಉಂಟಾಗುವ ದುಷ್ಪರಿಣಾಮಗಳಷ್ಟು ಹಾನಿಕಾರಕವಾಗಿರುವುದಿಲ್ಲ.
ನಮಾಝ್‌ಗೆ ಬಹಳ ಪ್ರಾಮುಖ್ಯತೆಯಿದೆ. ಏಕೆಂದರೆ, ಅದು ಸತ್ಯನಿಷೇಧ ಮತ್ತು ಇಸ್ಲಾಮನ್ನು ಬೇರ್ಪಡಿಸುತ್ತದೆ.
التصنيفات
Rebelling against the Muslim Ruler