ಅಲ್ಲಾಹು ಯಾರಿಗಾದರೂ ಒಳಿತನ್ನು ಬಯಸಿದರೆ, ಅವನಿಗೆ ಕಷ್ಟಗಳು ಬಾಧಿಸುವಂತೆ ಮಾಡುತ್ತಾನೆ

ಅಲ್ಲಾಹು ಯಾರಿಗಾದರೂ ಒಳಿತನ್ನು ಬಯಸಿದರೆ, ಅವನಿಗೆ ಕಷ್ಟಗಳು ಬಾಧಿಸುವಂತೆ ಮಾಡುತ್ತಾನೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಯಾರಿಗಾದರೂ ಒಳಿತನ್ನು ಬಯಸಿದರೆ, ಅವನಿಗೆ ಕಷ್ಟಗಳು ಬಾಧಿಸುವಂತೆ ಮಾಡುತ್ತಾನೆ."

[Sahih/Authentic.] [Al-Bukhari]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ತನ್ನ ಸತ್ಯವಿಶ್ವಾಸಿ ದಾಸರಲ್ಲಿ ಯಾರಿಗಾದರೂ ಒಳಿತನ್ನು ಬಯಸಿದರೆ, ಅವರನ್ನು ಅವರ ದೇಹದಲ್ಲಿ, ಆಸ್ತಿಯಲ್ಲಿ ಅಥವಾ ಕುಟುಂಬದಲ್ಲಿ ಪರೀಕ್ಷಿಸುತ್ತಾನೆ. ಈ ಪರೀಕ್ಷೆಗಳು ಸತ್ಯವಿಶ್ವಾಸಿಯು ಅಲ್ಲಾಹನಲ್ಲಿ ಪ್ರಾರ್ಥಿಸುತ್ತಾ ಅವನ ಕಡೆಗೆ ಮರಳಲು, ಅವನ ಪಾಪಗಳು ಪರಿಹಾರವಾಗಲು ಮತ್ತು ಅವನ ಪದವಿಗಳು ಉನ್ನತವಾಗಲು ಕಾರಣವಾಗುತ್ತವೆ.

فوائد الحديث

ಸತ್ಯವಿಶ್ವಾಸಿಯು ಅನೇಕ ವಿಧಗಳ ಪರೀಕ್ಷೆಗಳಿಗೆ ಗುರಿಯಾಗುತ್ತಾನೆಂದು ಈ ಹದೀಸ್ ತಿಳಿಸುತ್ತದೆ.

ಕೆಲವೊಮ್ಮೆ ಪರೀಕ್ಷೆಗಳು ದಾಸನ ಮೇಲೆ ಅಲ್ಲಾಹನಿಗಿರುವ ಪ್ರೀತಿಯ ಸಂಕೇತವಾಗಿದ್ದು, ಅವನು ದಾಸನ ಪದವಿಯನ್ನು ಏರಿಸಲು, ಸ್ಥಾನಮಾನವನ್ನು ಹೆಚ್ಚಿಸಲು ಮತ್ತು ಅವನ ಪಾಪಗಳನ್ನು ಅಳಿಸಲು ಕಾರಣವಾಗಬಹುದು.

ಸಂಕಷ್ಟಗಳು ಎದುರಾಗುವಾಗ ತಾಳ್ಮೆಯಿಂದಿರಬೇಕು ಮತ್ತು ತಾಳ್ಮೆಗೆಡಬಾರದೆಂದು ಈ ಹದೀಸ್ ಪ್ರೇರೇಪಿಸುತ್ತದೆ.