إعدادات العرض
ನೀನು ಎಲ್ಲೇ ಇದ್ದರೂ ಅಲ್ಲಾಹನನ್ನು ಭಯಪಡು. ಕೆಟ್ಟ ಕಾರ್ಯವನ್ನು ಮಾಡಿದರೆ, ಅದರ ನಂತರ ಒಳ್ಳೆಯ ಕಾರ್ಯವನ್ನು ಮಾಡು, ಅದು ಅದನ್ನು…
ನೀನು ಎಲ್ಲೇ ಇದ್ದರೂ ಅಲ್ಲಾಹನನ್ನು ಭಯಪಡು. ಕೆಟ್ಟ ಕಾರ್ಯವನ್ನು ಮಾಡಿದರೆ, ಅದರ ನಂತರ ಒಳ್ಳೆಯ ಕಾರ್ಯವನ್ನು ಮಾಡು, ಅದು ಅದನ್ನು ಅಳಿಸಿಹಾಕುತ್ತದೆ. ಮತ್ತು ಜನರೊಂದಿಗೆ ಉತ್ತಮ ನಡತೆಯಿಂದ ವರ್ತಿಸು
ಅಬೂ ದರ್ ಜುಂದುಬ್ ಇಬ್ನ್ ಜುನಾದಾ, ಮತ್ತು ಅಬೂ ಅಬ್ದುರ್ರಹ್ಮಾನ್ ಮುಆದ್ ಇಬ್ನ್ ಜಬಲ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀನು ಎಲ್ಲೇ ಇದ್ದರೂ ಅಲ್ಲಾಹನನ್ನು ಭಯಪಡು. ಕೆಟ್ಟ ಕಾರ್ಯವನ್ನು ಮಾಡಿದರೆ, ಅದರ ನಂತರ ಒಳ್ಳೆಯ ಕಾರ್ಯವನ್ನು ಮಾಡು, ಅದು ಅದನ್ನು ಅಳಿಸಿಹಾಕುತ್ತದೆ. ಮತ್ತು ಜನರೊಂದಿಗೆ ಉತ್ತಮ ನಡತೆಯಿಂದ ವರ್ತಿಸು".
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी Hausa Kurdî Português සිංහල Македонски नेपाली دری پښتو Shqip ગુજરાતી ភាសាខ្មែរ Українська Čeština Magyar Српски ქართული ਪੰਜਾਬੀ Kiswahili Lietuviųالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೂರು ವಿಷಯಗಳನ್ನು ಆದೇಶಿಸಿದ್ದಾರೆ: ಮೊದಲನೆಯದು: ಅಲ್ಲಾಹನ ಭಯ (ತಕ್ವಾ). ಅಂದರೆ, ಎಲ್ಲಾ ಸ್ಥಳಗಳಲ್ಲೂ, ಸಮಯಗಳಲ್ಲೂ ಮತ್ತು ಪರಿಸ್ಥಿತಿಗಳಲ್ಲೂ, ಖಾಸಗಿ ಜೀವನದಲ್ಲೂ, ಸಾರ್ವಜನಿಕ ಜೀವನದಲ್ಲೂ, ಆರೋಗ್ಯದಿಂದಿರುವಾಗಲೂ ಮತ್ತು ಅನಾರೋಗ್ಯದ ಸಂದರ್ಭದಲ್ಲೂ ಅಲ್ಲಾಹು ಆದೇಶಿಸಿದ ಕಡ್ಡಾಯ ಕರ್ತವ್ಯಗಳನ್ನು ನಿರ್ವಹಿಸುವುದು, ಮತ್ತು ಅವನು ನಿಷೇಧಿಸಿದ ವಿಷಯಗಳಿಂದ ದೂರವಿರುವುದು. ಎರಡನೆಯದು: ಒಂದು ಕೆಟ್ಟ ಕಾರ್ಯವನ್ನು ಮಾಡಿದರೆ, ಅದರ ನಂತರ ನಮಾಝ್, ದಾನ, ಉಪಕಾರ, ಸಂಬಂಧ ಬೆಸೆಯುವುದು, ಪಶ್ಚಾತ್ತಾಪ ಮುಂತಾದ ಒಳ್ಳೆಯ ಕಾರ್ಯವನ್ನು ಮಾಡುವುದು. ಖಂಡಿತವಾಗಿಯೂ ಅದು ಕೆಟ್ಟ ಕಾರ್ಯವನ್ನು ಅಳಿಸಿಹಾಕುತ್ತದೆ. ಮೂರನೆಯದು: ಜನರೊಂದಿಗೆ ಉತ್ತಮ ನಡತೆಯಿಂದ ವರ್ತಿಸುವುದು. ಅಂದರೆ, ಅವರ ಮುಖ ನೋಡಿ ಮುಗುಳ್ನಗುವುದು, ಮೃದುವಾಗಿ, ಸೌಮ್ಯವಾಗಿ ವರ್ತಿಸುವುದು, ಒಳಿತನ್ನು ಮಾಡುವುದು ಮತ್ತು ತೊಂದರೆ ನೀಡದಿರುವುದು.فوائد الحديث
ತನ್ನ ಕರುಣೆ, ಕ್ಷಮೆ ಮತ್ತು ಮನ್ನಣೆ ತೋರುವುದರಲ್ಲಿ ಸರ್ವಶಕ್ತನಾದ ಅಲ್ಲಾಹು ಅವನ ದಾಸರಿಗೆ ಶ್ರೇಷ್ಠತೆ ನೀಡಿದ್ದಾನೆಂದು ತಿಳಿಸಲಾಗಿದೆ.
ಈ ಹದೀಸ್ ಮೂರು ಹಕ್ಕುಗಳನ್ನು ಒಳಗೊಂಡಿದೆ: ತಖ್ವಾ ಪಾಲಿಸುವುದು ಎಂಬ ಅಲ್ಲಾಹನ ಹಕ್ಕು, ಕೆಟ್ಟ ಕಾರ್ಯಗಳ ನಂತರ ಒಳ್ಳೆಯ ಕಾರ್ಯಗಳನ್ನು ಮಾಡುವುದು ಎಂಬ ತನ್ನ ಹಕ್ಕು, ಮತ್ತು ಉತ್ತಮ ನಡತೆಯಿಂದ ವರ್ತಿಸುವುದು ಎಂಬ ಜನರ ಹಕ್ಕು.
ಕೆಟ್ಟ ಕಾರ್ಯಗಳ ನಂತರ ಒಳ್ಳೆಯ ಕಾರ್ಯಗಳನ್ನು ಮಾಡಲು ಪ್ರೋತ್ಸಾಹಿಸಲಾಗಿದೆ. ಉತ್ತಮ ನಡತೆಯು ತಖ್ವಾದ ಗುಣಲಕ್ಷಣಗಳಲ್ಲಿ ಒಳಪಡುತ್ತದೆ. ಆದರೆ ಅದರ ಪ್ರಾಮುಖ್ಯತೆಯನ್ನು ಸ್ಪಷ್ಟಪಡಿಸುವ ಅಗತ್ಯವಿರುವುದರಿಂದ ಅದನ್ನು ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ.
التصنيفات
Praiseworthy Morals