ನೀವು ಅದನ್ನು (ಚಂದ್ರನನ್ನು) ಕಂಡರೆ ಉಪವಾಸವನ್ನು ಪ್ರಾರಂಭಿಸಿರಿ, ಮತ್ತು ನೀವು ಅದನ್ನು ಕಂಡರೆ ಉಪವಾಸವನ್ನು ನಿಲ್ಲಿಸಿರಿ. ಮೋಡಗಳ…

ನೀವು ಅದನ್ನು (ಚಂದ್ರನನ್ನು) ಕಂಡರೆ ಉಪವಾಸವನ್ನು ಪ್ರಾರಂಭಿಸಿರಿ, ಮತ್ತು ನೀವು ಅದನ್ನು ಕಂಡರೆ ಉಪವಾಸವನ್ನು ನಿಲ್ಲಿಸಿರಿ. ಮೋಡಗಳ ಕಾರಣ ನಿಮಗೆ ಅದನ್ನು ಕಾಣಲಾಗದಿದ್ದರೆ ಮೂವತ್ತು ದಿನಗಳನ್ನು ಪೂರ್ಣಗೊಳಿಸಿರಿ

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನೀವು ಅದನ್ನು (ಚಂದ್ರನನ್ನು) ಕಂಡರೆ ಉಪವಾಸವನ್ನು ಪ್ರಾರಂಭಿಸಿರಿ, ಮತ್ತು ನೀವು ಅದನ್ನು ಕಂಡರೆ ಉಪವಾಸವನ್ನು ನಿಲ್ಲಿಸಿರಿ. ಮೋಡಗಳ ಕಾರಣ ನಿಮಗೆ ಅದನ್ನು ಕಾಣಲಾಗದಿದ್ದರೆ ಮೂವತ್ತು ದಿನಗಳನ್ನು ಪೂರ್ಣಗೊಳಿಸಿರಿ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ರಮದಾನ್ ತಿಂಗಳ ಪ್ರಾರಂಭ ಮತ್ತು ಅಂತ್ಯವನ್ನು ವಿವರಿಸುತ್ತಾ ಹೇಳುವುದೇನೆಂದರೆ: ನೀವು ರಮದಾನ್ ತಿಂಗಳ ಚಂದ್ರನನ್ನು ಕಂಡರೆ ಉಪವಾಸ ಆರಂಭಿಸಿರಿ. ನಿಮ್ಮ ಮತ್ತು ಅದರ ಮಧ್ಯೆ ಮೋಡಗಳಿದ್ದು ಅದು ಮರೆಯಾದರೆ ಶಅಬಾನ್ ತಿಂಗಳ ಮೂವತ್ತು ದಿನಗಳನ್ನು ಪೂರ್ಣಗೊಳಿಸಿರಿ. ನಂತರ ನೀವು ಶವ್ವಾಲ್ ತಿಂಗಳ ಚಂದ್ರನನ್ನು ಕಂಡರೆ ಉಪವಾಸ ಕೊನೆಗೊಳಿಸಿರಿ. ನಿಮ್ಮ ಮತ್ತು ಅದರ ಮಧ್ಯೆ ಮೋಡಗಳಿದ್ದು ಅದು ಮರೆಯಾದರೆ ರಮದಾನ್ ತಿಂಗಳ ಮೂವತ್ತು ದಿನಗಳನ್ನು ಪೂರ್ಣಗೊಳಿಸಿರಿ.

فوائد الحديث

ತಿಂಗಳ ಪ್ರಾರಂಭವನ್ನು ದೃಢೀಕರಿಸಲು ಚಂದ್ರ ದರ್ಶನವನ್ನು ಅವಲಂಬಿಸಬೇಕೇ ಹೊರತು ಖಗೋಳಶಾಸ್ತ್ರ ಲೆಕ್ಕವನ್ನಲ್ಲ.

ಖಗೋಳಶಾಸ್ತ್ರದ ಲೆಕ್ಕದಂತೆ ರಮದಾನ್ ತಿಂಗಳು ಪ್ರಾರಂಭವಾಗಿ ಅದರ ಚಂದ್ರ ದರ್ಶನವಾಗದಿದ್ದರೆ, ಉಪವಾಸ ಆಚರಿಸುವುದು ಕಡ್ಡಾಯವಿಲ್ಲ ಎಂದು ವಿದ್ವಾಂಸರು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆಂದು ಇಬ್ನುಲ್ ಮುಂದಿರ್ ಹೇಳಿದ್ದಾರೆ.

ರಮದಾನ್ ತಿಂಗಳ ಚಂದ್ರ ದರ್ಶನವಾಗದಂತೆ ಮೋಡ ಮುಂತಾದವುಗಳು ಅಡ್ಡ ಬಂದರೆ ಶವ್ವಾಲ್ ತಿಂಗಳ ಮೂವತ್ತು ದಿನಗಳನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.

ಚಂದ್ರ ಮಾಸವು ಇಪ್ಪತ್ತೊಂಬತ್ತು ಅಥವಾ ಮೂವತ್ತು ದಿನಗಳನ್ನು ಮಾತ್ರ ಹೊಂದಿರುತ್ತದೆ.

ಶವ್ವಾಲ್ ತಿಂಗಳ ಚಂದ್ರ ದರ್ಶನವಾಗದಂತೆ ಮೋಡ ಮುಂತಾದವುಗಳು ಅಡ್ಡ ಬಂದರೆ ರಮದಾನ್ ತಿಂಗಳ ಮೂವತ್ತು ದಿನಗಳನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.

ಉಪವಾಸದ ವಿಷಯದಲ್ಲಿ ಮುಸಲ್ಮಾನರ ಕಾರ್ಯವನ್ನು ವಹಿಸಿಕೊಂಡಿರುವವರು ಯಾರೂ ಇಲ್ಲದ ಅಥವಾ ಇದ್ದರೂ ಅದರ ಬಗ್ಗೆ ನಿರ್ಲಕ್ಷ್ಯ ಭಾವನೆಯಿರುವವರು ಇರುವ ಸ್ಥಳದಲ್ಲಿರುವವರು ಅದರ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಸ್ವತಃ ಚಂದ್ರನನ್ನು ನೋಡುವ ಮೂಲಕ ಅಥವಾ ವಿಶ್ವಾಸಯೋಗ್ಯರಾದ ಇತರರು ನೋಡಿದ್ದನ್ನು ತಿಳಿಸುವ ಮೂಲಕ ಚಂದ್ರ ದರ್ಶನವಾಗಿರುವುದನ್ನು ದೃಢೀಕರಿಸಿಕೊಂಡು ಅದರ ಪ್ರಕಾರ ಉಪವಾಸವನ್ನು ಆರಂಭಿಸಬೇಕು ಮತ್ತು ಕೊನೆಗೊಳಿಸಬೇಕು.

التصنيفات

Sighting the Crescent