"ನಿಶ್ಚಯವಾಗಿಯೂ ಅಲ್ಲಾಹು ಮತ್ತು ಅವನ ಸಂದೇಶವಾಹಕರು ಮದ್ಯ, ಸತ್ತ ಪ್ರಾಣಿ, ಹಂದಿ ಮಾಂಸ ಮತ್ತು ವಿಗ್ರಹಗಳ ಮಾರಾಟವನ್ನು…

"ನಿಶ್ಚಯವಾಗಿಯೂ ಅಲ್ಲಾಹು ಮತ್ತು ಅವನ ಸಂದೇಶವಾಹಕರು ಮದ್ಯ, ಸತ್ತ ಪ್ರಾಣಿ, ಹಂದಿ ಮಾಂಸ ಮತ್ತು ವಿಗ್ರಹಗಳ ಮಾರಾಟವನ್ನು ನಿಷೇಧಿಸಿದ್ದಾರೆ."* ಆಗ ಒಬ್ಬರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಸತ್ತ ಪ್ರಾಣಿಗಳ ಕೊಬ್ಬನ್ನು ನಿಷೇಧಿಸಲಾಗಿದೆಯೇ? ಏಕೆಂದರೆ, ಇದನ್ನು ಹಡಗುಗಳಿಗೆ ಲೇಪಿಸಲು ಮತ್ತು ತೊಗಲನ್ನು ಹದಗೊಳಿಸಲು ಬಳಸಲಾಗುತ್ತದೆ. ಜನರು ಇದನ್ನು ದೀಪ ಉರಿಸಲು ಕೂಡ ಬಳಸುತ್ತಾರೆ." ಅವರು ಹೇಳಿದರು: "ಇಲ್ಲ. ಅದು ನಿಷೇಧಿಸಲಾಗಿದೆ." ನಂತರ ಇದಕ್ಕೆ ಸಂಬಂಧಿಸಿ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಯಹೂದಿಗಳನ್ನು ನಾಶಗೊಳಿಸಲಿ. ಅಲ್ಲಾಹು ಅವರಿಗೆ ಪ್ರಾಣಿಗಳ ಕೊಬ್ಬನ್ನು ನಿಷೇಧಿಸಿದಾಗ, ಅವರು ಅದನ್ನು ಕರಗಿಸಿ, ಅದರ ಎಣ್ಣೆಯನ್ನು ಮಾರಾಟ ಮಾಡಿದರು ಮತ್ತು ಅದರ ಹಣವನ್ನು ತಿಂದು ತೇಗಿದರು."

ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಕ್ಕಾ ವಿಜಯದ ವರ್ಷ ಮಕ್ಕಾದಲ್ಲಿದ್ದಾಗ ಹೀಗೆ ಹೇಳುವುದನ್ನು ಅವರು ಕೇಳಿದ್ದಾರೆ: "ನಿಶ್ಚಯವಾಗಿಯೂ ಅಲ್ಲಾಹು ಮತ್ತು ಅವನ ಸಂದೇಶವಾಹಕರು ಮದ್ಯ, ಸತ್ತ ಪ್ರಾಣಿ, ಹಂದಿ ಮಾಂಸ ಮತ್ತು ವಿಗ್ರಹಗಳ ಮಾರಾಟವನ್ನು ನಿಷೇಧಿಸಿದ್ದಾರೆ." ಆಗ ಒಬ್ಬರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಸತ್ತ ಪ್ರಾಣಿಗಳ ಕೊಬ್ಬನ್ನು ನಿಷೇಧಿಸಲಾಗಿದೆಯೇ? ಏಕೆಂದರೆ, ಇದನ್ನು ಹಡಗುಗಳಿಗೆ ಲೇಪಿಸಲು ಮತ್ತು ತೊಗಲನ್ನು ಹದಗೊಳಿಸಲು ಬಳಸಲಾಗುತ್ತದೆ. ಜನರು ಇದನ್ನು ದೀಪ ಉರಿಸಲು ಕೂಡ ಬಳಸುತ್ತಾರೆ." ಅವರು ಹೇಳಿದರು: "ಇಲ್ಲ. ಅದು ನಿಷೇಧಿಸಲಾಗಿದೆ." ನಂತರ ಇದಕ್ಕೆ ಸಂಬಂಧಿಸಿ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಯಹೂದಿಗಳನ್ನು ನಾಶಗೊಳಿಸಲಿ. ಅಲ್ಲಾಹು ಅವರಿಗೆ ಪ್ರಾಣಿಗಳ ಕೊಬ್ಬನ್ನು ನಿಷೇಧಿಸಿದಾಗ, ಅವರು ಅದನ್ನು ಕರಗಿಸಿ, ಅದರ ಎಣ್ಣೆಯನ್ನು ಮಾರಾಟ ಮಾಡಿದರು ಮತ್ತು ಅದರ ಹಣವನ್ನು ತಿಂದು ತೇಗಿದರು."

[صحيح] [متفق عليه]

الشرح

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಕ್ಕಾ ವಿಜಯದ ವರ್ಷ ಮಕ್ಕಾದಲ್ಲಿದ್ದಾಗ ಹೀಗೆ ಹೇಳುವುದನ್ನು ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಕೇಳಿದರು: "ನಿಶ್ಚಯವಾಗಿಯೂ ಅಲ್ಲಾಹು ಮತ್ತು ಅವನ ಸಂದೇಶವಾಹಕರು ಮದ್ಯ, ಸತ್ತ ಪ್ರಾಣಿ, ಹಂದಿ ಮಾಂಸ ಮತ್ತು ವಿಗ್ರಹಗಳ ಮಾರಾಟವನ್ನು ನಿಷೇಧಿಸಿದ್ದಾರೆ." ಆಗ ಒಬ್ಬರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಾವು ಸತ್ತ ಪ್ರಾಣಿಗಳ ಕೊಬ್ಬನ್ನು ಮಾರಾಟ ಮಾಡಬಹುದೇ? ಏಕೆಂದರೆ, ಹಡಗುಗಳಿಗೆ ಲೇಪಿಸಲು, ತೊಗಲನ್ನು ಹದಗೊಳಿಸಲು ಮತ್ತು ಜನರು ದೀಪ ಉರಿಸಲು ಇದನ್ನು ಬಳಸುತ್ತಾರೆ." ಆಗ ಅವರು ಹೇಳಿದರು: "ಇಲ್ಲ, ಅದರ ಮಾರಾಟವನ್ನು ನಿಷೇಧಿಸಲಾಗಿದೆ." ನಂತರ ಇದಕ್ಕೆ ಸಂಬಂಧಿಸಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಯಹೂದಿಗಳನ್ನು ನಾಶಗೊಳಿಸಲಿ ಮತ್ತು ಶಪಿಸಲಿ. ಅಲ್ಲಾಹು ಅವರಿಗೆ ಜಾನುವಾರುಗಳ ಕೊಬ್ಬನ್ನು ನಿಷೇಧಿಸಿದಾಗ, ಅವರು ಅದನ್ನು ಕರಗಿಸಿದರು. ನಂತರ ಅದರ ಎಣ್ಣೆಯನ್ನು ಮಾರಾಟ ಮಾಡಿ ಅದರ ಹಣವನ್ನು ತಿಂದು ತೇಗಿದರು."

فوائد الحديث

ನವವಿ ಹೇಳಿದರು: "ಸತ್ತ ಪ್ರಾಣಿಗಳು, ಮದ್ಯ ಮತ್ತು ಹಂದಿ ಮಾಂಸ ಇವುಗಳನ್ನು ಮಾರಾಟ ಮಾಡುವುದು ನಿಷಿದ್ಧವಾಗಿದೆ ಎಂಬ ವಿಷಯದಲ್ಲಿ ವಿದ್ವಾಂಸರಲ್ಲಿ ಒಮ್ಮತಾಭಿಪ್ರಾಯವಿದೆ."

ಕಾದಿ ಹೇಳಿದರು: "ಯಾವುದನ್ನು ಸೇವಿಸುವುದು ಮತ್ತು ಉಪಯೋಗಿಸುವುದು ನಿಷೇಧಿಸಲಾಗಿದೆಯೋ ಅವುಗಳನ್ನು ಮಾರಾಟ ಮಾಡುವುದು ಕೂಡ ನಿಷೇಧಿಸಲಾಗಿದೆಯೆಂದು ಈ ಹದೀಸ್‌ನಲ್ಲಿದೆ. ಹದೀಸಿನಲ್ಲಿ ತಿಳಿಸಲಾದ ಕೊಬ್ಬಿನಂತೆ ಇವುಗಳನ್ನು ‌ಮಾರಿ ಪಡೆದ ಹಣವನ್ನು ಕೂಡ ಸೇವಿಸಬಾರದು."

ಇಬ್ನ್ ಹಜರ್ ಹೇಳಿದರು: "ನಿಷೇಧಿಸಲಾಗಿರುವುದು ಮಾರಾಟ ಮಾತ್ರ ಬಳಕೆಯನ್ನಲ್ಲ ಎಂಬ ಹೆಚ್ಚಿನ ವಿದ್ವಾಂಸರ ಅಭಿಪ್ರಾಯವನ್ನೇ ಇದು ಬಲವಾಗಿ ಸೂಚಿಸುತ್ತದೆ."

ನಿಷೇಧವನ್ನು ಅನುಮತಿಗೊಳಿಸುವುದರೆಡೆಗೆ ಸಾಗಿಸುವ ಎಲ್ಲಾ ಕುಟಿಲ ತಂತ್ರಗಳು ವ್ಯರ್ಥವೆಂದು ತಿಳಿಸಲಾಗಿದೆ.

ನವವಿ ಹೇಳಿದರು: "ವಿದ್ವಾಂಸರು ಹೇಳಿದರು: ಸತ್ತ ಜೀವಿಗಳ ಮಾರಾಟವನ್ನು ನಿಷೇಧಿಸುವ ಈ ಸಾರ್ವತ್ರಿಕ ನಿಷೇಧದಲ್ಲಿ ಸತ್ಯನಿಷೇಧಿಯೊಬ್ಬನ ಮೃತದೇಹವನ್ನು ಮಾರಾಟ ಮಾಡುವುದು ಕೂಡ ಒಳಪಡುತ್ತದೆ. ಸತ್ಯನಿಷೇಧಿಗಳು ಅವನ ದೇಹಕ್ಕಾಗಿ ಬೇಡಿಕೆಯಿಟ್ಟರೆ, ಅಥವಾ ಅದಕ್ಕಾಗಿ ಪರಿಹಾರ ನೀಡಲು ಒಪ್ಪಿಕೊಂಡರೆ ಅದನ್ನು ಮಾರಾಟ ಮಾಡಬಾರದು. ಹದೀಸಿನಲ್ಲಿ ಹೀಗೆ ಬಂದಿದೆ: ಮುಸ್ಲಿಮರು ಖಂದಕ್ ಯುದ್ಧದ ಸಂದರ್ಭ ನೌಫಲ್ ಬಿನ್ ಅಬ್ದುಲ್ಲಾ ಮಖ್ಝೂಮಿಯನ್ನು ಕೊಂದರು. ಆಗ ಸತ್ಯನಿಷೇಧಿಗಳು ಅವನ ದೇಹಕ್ಕಾಗಿ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ಸಾವಿರ ದಿರ್ಹಂ ಕಳುಹಿಸಿದರು. ಆದರೆ ಅವರು ಅದನ್ನು ಸ್ವೀಕರಿಸಲಿಲ್ಲ. ಅದನ್ನು ಅವರಿಗೇ ಹಿಂದಿರುಗಿಸಿದರು."

التصنيفات

Lawful and Unlawful Animals and Birds