إعدادات العرض
ಸೌಮ್ಯತೆಯಿಂದ ವಂಚಿತನಾದವನು ಒಳಿತಿನಿಂದಲೂ ವಂಚಿತನಾಗಿದ್ದಾನೆ
ಸೌಮ್ಯತೆಯಿಂದ ವಂಚಿತನಾದವನು ಒಳಿತಿನಿಂದಲೂ ವಂಚಿತನಾಗಿದ್ದಾನೆ
ಜರೀರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸೌಮ್ಯತೆಯಿಂದ ವಂಚಿತನಾದವನು ಒಳಿತಿನಿಂದಲೂ ವಂಚಿತನಾಗಿದ್ದಾನೆ."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी Tiếng Việt සිංහල Kurdî Português தமிழ் አማርኛ অসমীয়া Kiswahili ગુજરાતી Nederlands پښتو नेपाली Hausa മലയാളം Svenska ไทย Кыргызча Română Malagasy Српски తెలుగు ქართული Moore Magyarالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು ಸೌಮ್ಯತೆಯಿಂದ ವಂಚಿತನಾಗಿದ್ದಾನೋ, ಅಂದರೆ ತನ್ನ ಧಾರ್ಮಿಕ ಮತ್ತು ಲೌಕಿಕ ವಿಷಯಗಳಲ್ಲಿ ಮತ್ತು ಸ್ವತಃ ತನ್ನೊಡನೆ ಹಾಗೂ ಇತರರೊಡನೆ ಮಾಡುವ ವ್ಯವಹಾರಗಳಲ್ಲಿ ಯಾರಿಗೆ ಸೌಮ್ಯವಾಗಿ ವರ್ತಿಸುವುದಿಲ್ಲವೋ ಅವನಿಗೆ ಎಲ್ಲಾ ಒಳಿತುಗಳನ್ನು ತಡೆಯಲಾಗಿದೆ.فوائد الحديث
ಸೌಮ್ಯತೆಯ ಶ್ರೇಷ್ಠತೆಯನ್ನು ತಿಳಿಸಲಾಗಿದೆ ಮತ್ತು ಅದನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗಿದೆ. ಹಾಗೆಯೇ ಕಠೋರತೆಯನ್ನು ಖಂಡಿಸಲಾಗಿದೆ.
ಸೌಮ್ಯತೆಯಿಂದಾಗಿ ದ್ವಿಲೋಕಗಳ ಒಳಿತು ಮತ್ತು ಅದಕ್ಕಾಗಿ ಮಾಡುವ ಕರ್ಮಗಳ ವೈಶಾಲ್ಯತೆಯು ವ್ಯವಸ್ಥಿತವಾಗುತ್ತದೆ. ಕಠೋರತೆಯು ಇದಕ್ಕೆ ತದ್ವಿರುದ್ಧವಾಗಿದೆ.
ಸೌಮ್ಯತೆಯು ಉತ್ತಮ ಗುಣನಡತೆ ಹಾಗೂ ಸುರಕ್ಷತೆಯ ಫಲವಾಗಿದ್ದರೆ ಕಠೋರತೆಯು ಕೋಪ ಮತ್ತು ಒರಟುತನದ ಫಲವಾಗಿದೆ. ಆದ್ದರಿಂದಲೇ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸೌಮ್ಯತೆಯನ್ನು ಅತಿಯಾಗಿ ಪ್ರಶಂಸಿಸಿದ್ದಾರೆ.
ಸುಫ್ಯಾನ್ ಸೌರಿ (ಅಲ್ಲಾಹು ಅವರಿಗೆ ದಯೆ ತೋರಲಿ) ತಮ್ಮ ಶಿಷ್ಯರೊಡನೆ ಕೇಳಿದರು: "ಸೌಮ್ಯತೆ ಏನೆಂದು ನಿಮಗೆ ಗೊತ್ತೇ? ಅದು ವಸ್ತುಗಳನ್ನು ಅವುಗಳ ಸ್ಥಾನಗಳಲ್ಲಿಡುವುದು. ಉಗ್ರ ನಿಲುವನ್ನು ಅದರ ಸ್ಥಾನದಲ್ಲಿ, ಮೃದು ನಿಲುವನ್ನು ಅದರ ಸ್ಥಾನದಲ್ಲಿ, ಖಡ್ಗವನ್ನು ಅದರ ಸ್ಥಾನದಲ್ಲಿ ಮತ್ತು ಕೊರಡನ್ನು ಅದರ ಸ್ಥಾನದಲ್ಲಿ ಇಡುವುದು. (ಅಂದರೆ ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಅವುಗಳನ್ನು ಬಳಸುವುದು)."
التصنيفات
Praiseworthy Morals