ಸಂಕೋಚವು ಸತ್ಯವಿಶ್ವಾಸದ ಒಂದು ಭಾಗವಾಗಿದೆ

ಸಂಕೋಚವು ಸತ್ಯವಿಶ್ವಾಸದ ಒಂದು ಭಾಗವಾಗಿದೆ

ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಬ್ಬ ವ್ಯಕ್ತಿ ತನ್ನ ಸಹೋದರನಿಗೆ ಸಂಕೋಚ ಪಡಬಾರದೆಂದು ಬುದ್ಧಿ ಹೇಳುವುದನ್ನು ಕೇಳಿದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸಂಕೋಚವು ಸತ್ಯವಿಶ್ವಾಸದ ಒಂದು ಭಾಗವಾಗಿದೆ."

[صحيح] [متفق عليه]

الشرح

ಅತಿಯಾಗಿ ಸಂಕೋಚಪಡುವುದನ್ನು ಬಿಟ್ಟುಬಿಡಬೇಕೆಂದು ಒಬ್ಬ ವ್ಯಕ್ತಿ ತನ್ನ ಸಹೋದರನಿಗೆ ಬುದ್ಧಿ ಹೇಳುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು. ಆಗ ಅವರು, ಸಂಕೋಚ ಪಡುವುದು ಸತ್ಯವಿಶ್ವಾಸದ ಭಾಗವಾಗಿದೆ ಮತ್ತು ಅದು ಒಳಿತಲ್ಲದೆ ಬೇರೇನನ್ನು ತರುವುದಿಲ್ಲ ಎಂದರು. ಸಂಕೋಚ ಸ್ವಭಾವವು ಸುಂದರವಾದುದನ್ನು ಮಾಡಲು ಮತ್ತು ಹೊಲಸನ್ನು ಬಿಟ್ಟುಬಿಡಲು ಪ್ರೇರೇಪಿಸುತ್ತದೆ.

فوائد الحديث

ಒಳಿತು ಮಾಡದಂತೆ ತಡೆಯುವುದು ಸಂಕೋಚವಲ್ಲ; ಬದಲಿಗೆ ಅದು ನಾಚಿಕೆ, ಅಸಹಾಯಕತೆ, ನಿಶಕ್ತಿ ಮತ್ತು ಹೇಡಿತನವಾಗಿದೆ.

ಅಲ್ಲಾಹನ ಕುರಿತಾದ ಸಂಕೋಚವೆಂದರೆ ಆದೇಶಿಸಲಾದ ಕಾರ್ಯಗಳನ್ನು ಮಾಡುವುದು ಮತ್ತು ನಿಷೇಧಿಸಲಾದ ಕಾರ್ಯಗಳನ್ನು ತೊರೆಯುವುದು.

ಜನರ ಕುರಿತಾದ ಸಂಕೋಚವೆಂದರೆ ಅವರನ್ನು ಗೌರವಿಸುವುದು, ಅವರಿಗೆ ಹೊಂದಿಕೆಯಾಗುವ ರೀತಿಯಲ್ಲಿ ವರ್ತಿಸುವುದು, ಸಾಮಾನ್ಯವಾಗಿ ಜನರು ಹೊಲಸಾಗಿ ಕಾಣುವ ಕಾರ್ಯಗಳನ್ನು ತೊರೆಯುವುದು.

التصنيفات

Praiseworthy Morals