ಅವರು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ವಚನಗಳನ್ನು ಕಲಿಯುತ್ತಿದ್ದರು. ನಂತರ ಆ ಹತ್ತು…

ಅವರು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ವಚನಗಳನ್ನು ಕಲಿಯುತ್ತಿದ್ದರು. ನಂತರ ಆ ಹತ್ತು ವಚನಗಳಲ್ಲಿರುವ ಜ್ಞಾನ ಮತ್ತು ಕರ್ಮವನ್ನು ಕಲಿತುಕೊಳ್ಳದೆ ಅವರು ಮುಂದಿನ ಹತ್ತು ವಚನಗಳಿಗೆ ಹೋಗುತ್ತಿರಲಿಲ್ಲ

ಅಬೂ ಅಬ್ದುರ್‍ರಹ್ಮಾನ್ ಸುಲಮಿ (ಅಲ್ಲಾಹು ಅವರಿಗೆ ಕರುಣೆ ತೋರಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರ ಸಂಗಡಿಗರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪೈಕಿ ನಮಗೆ ಕುರ್‌ಆನ್ ಕಲಿಸಿಕೊಡುತ್ತಿದ್ದವರು ಹೇಳುತ್ತಿದ್ದರು: ಅವರು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ವಚನಗಳನ್ನು ಕಲಿಯುತ್ತಿದ್ದರು. ನಂತರ ಆ ಹತ್ತು ವಚನಗಳಲ್ಲಿರುವ ಜ್ಞಾನ ಮತ್ತು ಕರ್ಮವನ್ನು ಕಲಿತುಕೊಳ್ಳದೆ ಅವರು ಮುಂದಿನ ಹತ್ತು ವಚನಗಳಿಗೆ ಹೋಗುತ್ತಿರಲಿಲ್ಲ. ಅವರು ಹೇಳುತ್ತಿದ್ದರು: ನಾವು ಜ್ಞಾನ ಮತ್ತು ಕರ್ಮವನ್ನು ಒಟ್ಟೊಟ್ಟಿಗೆ ಕಲಿಯುತ್ತಿದ್ದೆವು."

[حسن] [رواه أحمد]

الشرح

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಗಡಿಗರು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ವಚನಗಳನ್ನು ಕಲಿಯುತ್ತಿದ್ದರು. ಆ ಹತ್ತು ವಚನಗಳಲ್ಲಿರುವ ಜ್ಞಾನವನ್ನು ಕಲಿತು ಅದರ ಪ್ರಕಾರ ಕರ್ಮಗಳನ್ನು ಮಾಡುವ ತನಕ ಅವರು ಮುಂದಿನ ಹತ್ತು ವಚನಗಳನ್ನು ಕಲಿಯಲು ಹೋಗುತ್ತಿರಲಿಲ್ಲ. ಅವರು ಜ್ಞಾನ ಮತ್ತು ಕರ್ಮವನ್ನು ಒಟ್ಟೊಟ್ಟಿಗೆ ಕಲಿಯುತ್ತಿದ್ದರು.

فوائد الحديث

ಸಹಾಬಿಗಳ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಶ್ರೇಷ್ಠತೆಯನ್ನು ಮತ್ತು ಕುರ್‌ಆನ್ ಕಲಿಯಲು ಅವರಿಗಿದ್ದ ಉತ್ಸಾಹವನ್ನು ಈ ಹದೀಸ್ ವಿವರಿಸುತ್ತದೆ.

ಜ್ಞಾನ ಮತ್ತು ಅದರ ಆಧಾರದಲ್ಲಿ ಕರ್ಮಗಳನ್ನು ಮಾಡುವುದರ ಮೂಲಕ ಕುರ್‌ಆನ್ ಕಲಿಯಬೇಕಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ. ಇದಲ್ಲದೆ ಕುರ್‌ಆನ್ ಕಲಿಯುವುದು ಎಂದರೆ ಕೇವಲ ಪಠಿಸುವುದು ಮತ್ತು ಕಂಠಪಾಠ ಮಾಡುವುದಲ್ಲ.

ಮಾತನಾಡುವುದಕ್ಕೆ ಮತ್ತು ಕರ್ಮವೆಸಗುವುದಕ್ಕೆ ಮುಂಚಿತವಾಗಿ ಅದರ ಜ್ಞಾನವನ್ನು ಹೊಂದಿರಬೇಕೆಂದು ಈ ಹದೀಸ್ ತಿಳಿಸುತ್ತದೆ.

التصنيفات

Science of Tajweed, Manners of Reading and Memorizing the Qur'an, Excellence of Knowledge