Excellence of Knowledge

Excellence of Knowledge

8- "ಯಾರು ಒಬ್ಬ ಸತ್ಯವಿಶ್ವಾಸಿಯಿಂದ ಇಹಲೋಕದ ಕಷ್ಟಗಳಲ್ಲಿ ಒಂದು ಕಷ್ಟವನ್ನು ನಿವಾರಿಸುತ್ತಾನೋ, ಅಲ್ಲಾಹು ಪುನರುತ್ಥಾನದ ದಿನದ ಕಷ್ಟಗಳಲ್ಲಿ ಒಂದು ಕಷ್ಟವನ್ನು ಅವನಿಂದ ನಿವಾರಿಸುತ್ತಾನೆ.* ಯಾರು ಕಷ್ಟದಲ್ಲಿರುವವರಿಗೆ ಸುಲಭಗೊಳಿಸುತ್ತಾನೋ, ಅಲ್ಲಾಹು ಅವನಿಗೆ ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಸುಲಭಗೊಳಿಸುತ್ತಾನೆ. ಯಾರು ಒಬ್ಬ ಮುಸ್ಲಿಮನ ನ್ಯೂನತೆಗಳನ್ನು ಮುಚ್ಚಿಡುತ್ತಾನೋ, ಅಲ್ಲಾಹು ಅವನ ನ್ಯೂನತೆಗಳನ್ನು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಮುಚ್ಚಿಡುತ್ತಾನೆ. ದಾಸನು ತನ್ನ ಸಹೋದರನಿಗೆ ಸಹಾಯ ಮಾಡುತ್ತಿರುವ ತನಕ ಅಲ್ಲಾಹನು ದಾಸನಿಗೆ ಸಹಾಯ ಮಾಡುತ್ತಾನೆ. ಯಾರು ಜ್ಞಾನವನ್ನು ಹುಡುಕುತ್ತಾ ಒಂದು ದಾರಿಯನ್ನು ತುಳಿಯುತ್ತಾನೋ, ಅಲ್ಲಾಹು ಅವನಿಗೆ ಸ್ವರ್ಗಕ್ಕೆ ದಾರಿಯನ್ನು ಸುಲಭಗೊಳಿಸುತ್ತಾನೆ. ಒಂದು ಗುಂಪು ಜನರು ಅಲ್ಲಾಹನ ಮನೆಗಳ (ಮಸೀದಿಗಳ) ಪೈಕಿ ಒಂದರಲ್ಲಿ ಅಲ್ಲಾಹನ ಗ್ರಂಥವನ್ನು ಪಠಿಸಲು, ಮತ್ತು ಅದನ್ನು ತಮ್ಮ ನಡುವೆ ಅಧ್ಯಯನ ಮಾಡಲು ಒಟ್ಟುಗೂಡುತ್ತಾರೆ ಎಂದಾದರೆ, ಅವರ ಮೇಲೆ ಶಾಂತಿ ಇಳಿಯುತ್ತದೆ, ಕರುಣೆಯು ಅವರನ್ನು ಆವರಿಸುತ್ತದೆ, ದೇವದೂತರುಗಳು ಅವರನ್ನು ಸುತ್ತುವರಿಯುತ್ತಾರೆ ಮತ್ತು ಅಲ್ಲಾಹು ತನ್ನ ಹತ್ತಿರವಿರುವವರಿಗೆ ಅವರ ಬಗ್ಗೆ ತಿಳಿಸುತ್ತಾನೆ. ಯಾರ ಕರ್ಮಗಳು ಅವನನ್ನು ನಿಧಾನಗೊಳಿಸುತ್ತವೆಯೋ, ಅವನ ವಂಶವು ಅವನನ್ನು ಮುಂದಕ್ಕೆ ಒಯ್ಯುವುದಿಲ್ಲ."