ಶುದ್ಧಿಯಾದ ನಂತರ ನಾವು ಕಂದು ಬಣ್ಣ ಅಥವಾ ಹಳದಿ ಬಣ್ಣವನ್ನು ಪರಿಗಣಿಸುತ್ತಿರಲಿಲ್ಲ

ಶುದ್ಧಿಯಾದ ನಂತರ ನಾವು ಕಂದು ಬಣ್ಣ ಅಥವಾ ಹಳದಿ ಬಣ್ಣವನ್ನು ಪರಿಗಣಿಸುತ್ತಿರಲಿಲ್ಲ

ಉಮ್ಮು ಅತಿಯ್ಯ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷ್ಠೆಯ ಪ್ರತಿಜ್ಞೆ ಮಾಡಿದವರಾಗಿದ್ದರು. ಅವರು ಹೇಳಿದರು: "ಶುದ್ಧಿಯಾದ ನಂತರ ನಾವು ಕಂದು ಬಣ್ಣ ಅಥವಾ ಹಳದಿ ಬಣ್ಣವನ್ನು ಪರಿಗಣಿಸುತ್ತಿರಲಿಲ್ಲ."

[صحيح] [رواه أبو داود بهذا اللفظ، ورواه البخاري بدون زيادة (بعد الطهر)]

الشرح

ಸಹಾಬಿ ವನಿತೆ ಉಮ್ಮು ಅತಿಯ್ಯ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ತಿಳಿಸುವುದೇನೆಂದರೆ, ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲದಲ್ಲಿ ಮಹಿಳೆಯರು ಮುಟ್ಟಿನಿಂದ ಶುದ್ಧಿಯಾದ ನಂತರ ಜನನಾಂಗದಿಂದ ಸ್ರವಿಸುವ ಕಡುಗಂದು ಅಥವಾ ಕಡುಹಳದಿ ಬಣ್ಣದ ದ್ರವವನ್ನು ಮುಟ್ಟಿನ ರಕ್ತವೆಂದು ಪರಿಗಣಿಸುತ್ತಿರಲಿಲ್ಲ ಮತ್ತು ಅದರ ಕಾರಣದಿಂದ ನಮಾಝ್ ಅಥವಾ ಉಪವಾಸವನ್ನು ತೊರೆಯುತ್ತಿರಲಿಲ್ಲ.

فوائد الحديث

ಮುಟ್ಟಿನಿಂದ ಶುದ್ಧಿಯಾದ ನಂತರ ಮಹಿಳೆಯ ಜನನಾಂಗದಿಂದ ಸ್ರವಿಸುವ ದ್ರವವನ್ನು ಪರಿಗಣಿಸಬೇಕಾಗಿಲ್ಲ. ಅದು ರಕ್ತದಿಂದ ಉಂಟಾದ ಕಂದು ಅಥವಾ ಹಳದಿ ಬಣ್ಣವನ್ನು ಹೊಂದಿದ್ದರೂ ಸಹ.

ಮುಟ್ಟಿನ ಅವಧಿಯಲ್ಲಿ ಸ್ರವಿಸುವ ಕಂದು ಅಥವಾ ಹಳದಿ ಬಣ್ಣದ ರಕ್ತವು ಮುಟ್ಟಿನ ರಕ್ತವಾಗಿದೆ. ಏಕೆಂದರೆ, ಅದು ಮುಟ್ಟಿನ ಸಮಯದಲ್ಲಿ ಸ್ರವಿಸುವ ರಕ್ತವಾಗಿದೆ. ಆದರೆ ಅದರಲ್ಲಿ ದ್ರವವು ಮಿಶ್ರಿತವಾಗಿರುತ್ತದೆ.

ಶುದ್ಧಿಯಾದ ನಂತರ ಕಂಡುಬರುವ ಕಂದು ಅಥವಾ ಹಳದಿ ಬಣ್ಣದ ರಕ್ತದ ಕಾರಣದಿಂದ ಮಹಿಳೆಯರು ನಮಾಝ್ ಮತ್ತು ಉಪವಾಸವನ್ನು ತೊರೆಯಬಾರದು. ಬದಲಿಗೆ, ವುದೂ ನಿರ್ವಹಿಸಿ ನಮಾಝ್ ಮಾಡಬೇಕು.

التصنيفات

Menses, Postpartum Bleeding, Extra-Menses Bleeding