إعدادات العرض
“ಒಬ್ಬ ವ್ಯಕ್ತಿ ತನ್ನ ಸಹೋದರನನ್ನು ಪ್ರೀತಿಸಿದರೆ, ತಾನು ಅವನನ್ನು ಪ್ರೀತಿಸುತ್ತೇನೆಂದು ಅವನಿಗೆ ತಿಳಿಸಬೇಕು.”
“ಒಬ್ಬ ವ್ಯಕ್ತಿ ತನ್ನ ಸಹೋದರನನ್ನು ಪ್ರೀತಿಸಿದರೆ, ತಾನು ಅವನನ್ನು ಪ್ರೀತಿಸುತ್ತೇನೆಂದು ಅವನಿಗೆ ತಿಳಿಸಬೇಕು.”
ಮಿಕ್‌ದಾಮ್ ಬಿನ್ ಮಅದೀಕರಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಒಬ್ಬ ವ್ಯಕ್ತಿ ತನ್ನ ಸಹೋದರನನ್ನು ಪ್ರೀತಿಸಿದರೆ, ತಾನು ಅವನನ್ನು ಪ್ರೀತಿಸುತ್ತೇನೆಂದು ಅವನಿಗೆ ತಿಳಿಸಬೇಕು.”
[صحيح] [رواه أبو داود والترمذي والنسائي في السنن الكبرى وأحمد]
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी Tiếng Việt Kurdî Hausa Português മലയാളം తెలుగు Kiswahili မြန်မာ Deutsch 日本語 پښتو অসমীয়া Shqip Svenska Čeština ગુજરાતી አማርኛ Yorùbá Nederlands ئۇيغۇرچە සිංහල தமிழ் ไทย دری Akan Azərbaycan Български Fulfulde Magyar Italiano Кыргызча Lietuvių Malagasy नेपाली or Română Kinyarwanda тоҷикӣ O‘zbek Moore Wolof Oromoo Српски Soomaali bm Українська rn km ქართული Македонски mnkالشرح
ಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸತ್ಯವಿಶ್ವಾಸಿಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವ ಮತ್ತು ಅವರ ನಡುವೆ ಪ್ರೀತಿಯನ್ನು ಹಬ್ಬಿಸುವ ಒಂದು ಮಾರ್ಗವನ್ನು ವಿವರಿಸಿದ್ದಾರೆ. ಅದೇನೆಂದರೆ, ಒಬ್ಬ ವ್ಯಕ್ತಿ ತನ್ನ ಮುಸ್ಲಿಂ ಸಹೋದರನನ್ನು ಪ್ರೀತಿಸಿದರೆ, ತಾನು ಅವನನ್ನು ಪ್ರೀತಿಸುತ್ತೇನೆಂದು ಅವನಿಗೆ ತಿಳಿಸುವುದು.فوائد الحديث
ಭೌತಿಕ ಹಿತಾಸಕ್ತಿಯಿಲ್ಲದೆ, ಕೇವಲ ಅಲ್ಲಾಹನಿಗಾಗಿ ಮಾತ್ರ ಪ್ರೀತಿಸುವುದರ ಶ್ರೇಷ್ಠತೆಯನ್ನು ಈ ಹದೀಸ್ ವ್ಯಕ್ತಪಡಿಸುತ್ತದೆ.
ಒಬ್ಬ ವ್ಯಕ್ತಿ ಅಲ್ಲಾಹನಿಗಾಗಿ ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸಿದರೆ, ಅದನ್ನು ಅವನಿಗೆ ತಿಳಿಸುವುದು ಅಪೇಕ್ಷಣೀಯವಾಗಿದೆ. ಇದರಿಂದ ಅವರ ನಡುವೆ ಪ್ರೀತಿ ಮತ್ತು ಅನ್ಯೋನ್ಯತೆಯು ಹೆಚ್ಚುತ್ತದೆ.
ಸತ್ಯವಿಶ್ವಾಸಿಗಳ ನಡುವೆ ಪ್ರೀತಿ ಹರಡುವುದರಿಂದ ಸತ್ಯವಿಶ್ವಾಸದ ಆಧಾರದಲ್ಲಿರುವ ಸಹೋದರತೆಯು ಪ್ರಬಲವಾಗುವುದು ಮಾತ್ರವಲ್ಲದೆ, ಮುಸ್ಲಿಂ ಸಮಾಜದಲ್ಲಿ ಒಡಕು ಹಾಗೂ ಭಿನ್ನಮತಗಳು ನಿವಾರಣೆಯಾಗುತ್ತವೆ.