ನಾಯಿ ನಿಮ್ಮಲ್ಲೊಬ್ಬರ ಪಾತ್ರೆಯಲ್ಲಿ ಕುಡಿದರೆ, ಅವನು ಅದನ್ನು ಏಳು ಬಾರಿ ತೊಳೆಯಬೇಕಾಗಿದೆ

ನಾಯಿ ನಿಮ್ಮಲ್ಲೊಬ್ಬರ ಪಾತ್ರೆಯಲ್ಲಿ ಕುಡಿದರೆ, ಅವನು ಅದನ್ನು ಏಳು ಬಾರಿ ತೊಳೆಯಬೇಕಾಗಿದೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾಯಿ ನಿಮ್ಮಲ್ಲೊಬ್ಬರ ಪಾತ್ರೆಯಲ್ಲಿ ಕುಡಿದರೆ, ಅವನು ಅದನ್ನು ಏಳು ಬಾರಿ ತೊಳೆಯಬೇಕಾಗಿದೆ."

[صحيح] [متفق عليه]

الشرح

ಪಾತ್ರೆಯೊಳಗೆ ನಾಯಿ ನಾಲಗೆಯನ್ನು ತೂರಿಸಿದರೆ, ಆ ಪಾತ್ರೆಯನ್ನು ಏಳು ಬಾರಿ ತೊಳೆಯಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಜ್ಞಾಪಿಸಿದ್ದಾರೆ. ಮೊದಲನೆಯ ಬಾರಿ ತೊಳೆಯುವಾಗ ಮಣ್ಣನ್ನು ಸೇರಿಸಬೇಕು. ನಂತರ ನೀರಿನಿಂದ ಶುಚೀಕರಿಸಬೇಕು. ಇದರಿಂದ ಆ ಅಶುದ್ಧಿಯು ಮತ್ತು ಅದರಿಂದ ಉಂಟಾಗುವ ಹಾನಿಯು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

فوائد الحديث

ನಾಯಿಯ ಜೊಲ್ಲು ತೀವ್ರಸ್ವರೂಪದ ಅಶುದ್ಧಿಯಾಗಿದೆ.

ನಾಯಿ ಪಾತ್ರೆಯನ್ನು ನೆಕ್ಕಿದರೆ, ಆ ಪಾತ್ರೆ ಮತ್ತು ಅದರಲ್ಲಿರುವ ನೀರು ಅಶುದ್ಧವಾಗುತ್ತದೆ.

ಮಣ್ಣಿನ ಮೂಲಕ ಮತ್ತು ಏಳು ಬಾರಿ ಪುನರಾವರ್ತಿಸಿ ತೊಳೆಯುವ ಮೂಲಕ ಶುದ್ಧೀಕರಿಸಬೇಕೆಂದು ಹೇಳಿರುವುದು ಕೇವಲ ನಾಯಿ ನೆಕ್ಕಿರುವುದನ್ನು ಶುದ್ಧೀಕರಿಸಲು ಮಾತ್ರ. ಅದರ ಮಲ-ಮೂತ್ರ ತಾಗಿದರೆ, ಅಥವಾ ನಾಯಿ ಅಶುದ್ಧಗೊಳಿಸಿರುವುದನ್ನು ಶುದ್ಧೀಕರಿಸಲು ಹೀಗೆ ಮಾಡಬೇಕಾಗಿಲ್ಲ.

ಮಣ್ಣು ಬಳಸಿ ಪಾತ್ರೆಯನ್ನು ತೊಳೆಯುವ ವಿಧಾನ: ಪಾತ್ರೆಗೆ ನೀರು ಸುರಿದು ಅದಕ್ಕೆ ಮಣ್ಣು ಬೆರೆಸಬೇಕು, ನಂತರ ಆ ಮಿಶ್ರಣದಿಂದ ಪಾತ್ರೆಯನ್ನು ಚೆನ್ನಾಗಿ ತೊಳೆಯಬೇಕು.

ಹದೀಸಿನ ಬಾಹ್ಯಾರ್ಥ ಪ್ರಕಾರ ಈ ನಿಯಮವು ಎಲ್ಲಾ ನಾಯಿಗಳಿಗೂ ಅನ್ವಯವಾಗುತ್ತದೆ. ಬೇಟೆ ನಾಯಿ, ಕಾವಲು ನಾಯಿ ಮತ್ತು ಜಾನುವಾರುಗಳನ್ನು ಕಾಯುವ ನಾಯಿ ಮುಂತಾದ ಶಾಸನಕರ್ತನು (ಅಲ್ಲಾಹು) ಇಟ್ಟುಕೊಳ್ಳಬಹುದೆಂದು ಅನುಮತಿ ನೀಡಿದ ನಾಯಿಗಳಿಗೂ ಈ ನಿಯಮ ಅನ್ವಯವಾಗುತ್ತದೆ.

ಸಾಬೂನು ಮತ್ತು ಪೊಟಾಸಿಯಂ ಮಣ್ಣಿಗೆ ಬದಲಿಯಾಗುವುದಿಲ್ಲ. ಏಕೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಣ್ಣು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

التصنيفات

Removing Impurities, Utensils