ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂತಃಪುರದಲ್ಲಿರುವ ಕನ್ಯೆಗಿಂತಲೂ ತೀವ್ರ ನಾಚಿಕೆಯನ್ನು…

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂತಃಪುರದಲ್ಲಿರುವ ಕನ್ಯೆಗಿಂತಲೂ ತೀವ್ರ ನಾಚಿಕೆಯನ್ನು ಹೊಂದಿದ್ದರು. ಅವರು ಅವರಿಗೆ ಇಷ್ಟವಿಲ್ಲದ ಏನನ್ನಾದರೂ ನೋಡಿದರೆ, ಅದನ್ನು ಅವರ ಮುಖದಲ್ಲಿ ನಾವು ಗುರುತಿಸುತ್ತಿದ್ದೆವು

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂತಃಪುರದಲ್ಲಿರುವ ಕನ್ಯೆಗಿಂತಲೂ ತೀವ್ರ ನಾಚಿಕೆಯನ್ನು ಹೊಂದಿದ್ದರು. ಅವರು ಅವರಿಗೆ ಇಷ್ಟವಿಲ್ಲದ ಏನನ್ನಾದರೂ ನೋಡಿದರೆ, ಅದನ್ನು ಅವರ ಮುಖದಲ್ಲಿ ನಾವು ಗುರುತಿಸುತ್ತಿದ್ದೆವು."

[صحيح] [متفق عليه]

الشرح

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಪುರುಷರು ಇರುವ ತನ್ನ ಮನೆಯಲ್ಲಿ ಪರ್ದಾ ಹಾಕಿ ಅಂತಃಪುರದಲ್ಲಿ ವಾಸಿಸುವ ಅವಿವಾಹಿತೆ, ಕನ್ಯೆ ಯುವತಿಗಿಂತಲೂ ತೀವ್ರವಾದ ನಾಚಿಕೆಯನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೊಂದಿದ್ದರು. ತನ್ನ ನಾಚಿಕೆಯ ತೀವ್ರತೆಯಿಂದಾಗಿ, ಅವರಿಗೆ ಒಂದು ವಸ್ತು ಇಷ್ಟವಾಗದಿದ್ದರೆ ಅವರ ಮುಖಭಾವ ಬದಲಾಗುತ್ತಿತ್ತು. ಅವರು ಅದನ್ನು ಹೇಳುತ್ತಿರಲಿಲ್ಲ. ಬದಲಿಗೆ, ಅವರಿಗೆ ಇಷ್ಟವಾಗಲಿಲ್ಲ ಎಂಬುದನ್ನು ಸಹಾಬಿಗಳು ಅವರ ಮುಖಭಾವದಿಂದ ಗ್ರಹಿಸುತ್ತಿದ್ದರು.

فوائد الحديث

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಂತಹ ನಾಚಿಕೆಯನ್ನು ಹೊಂದಿದ್ದರೆಂದು ವಿವರಿಸಲಾಗಿದೆ. ನಾಚಿಕೆಯು ಶ್ರೇಷ್ಠ ಗುಣವಾಗಿದೆ.

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಾಚಿಕೆ ಪಡುತ್ತಿದ್ದದ್ದು ಅಲ್ಲಾಹು ನಿಷೇಧಿಸಿದ ವಿಷಯಗಳು ಉಲ್ಲಂಘನೆಯಾಗದೇ ಇದ್ದಾಗ ಮಾತ್ರ. ಅವು ಉಲ್ಲಂಘನೆಯಾದರೆ, ಅವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೋಪಿಸುತ್ತಿದ್ದರು ಮತ್ತು ತಮ್ಮ ಸಂಗಡಿಗರಿಗೆ ಆದೇಶ ಮತ್ತು ನಿಷೇಧಗಳನ್ನು ನೀಡುತ್ತಿದ್ದರು.

ನಾಚಿಕೆಯೆಂಬ ಗುಣವನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗಿದೆ. ಏಕೆಂದರೆ, ಅದು ಮನುಷ್ಯನನ್ನು ಉತ್ತಮ ಕೆಲಸಗಳನ್ನು ಮಾಡಲು ಮತ್ತು ಕೆಟ್ಟ ಕೆಲಸಗಳನ್ನು ತೊರೆಯಲು ಪ್ರೇರೇಪಿಸುತ್ತದೆ.

التصنيفات

Prophet's Modesty