ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸೀನುವಾಗ ತಮ್ಮ ಕೈಯನ್ನು—ಅಥವಾ ಬಟ್ಟೆಯನ್ನು—ಮುಖದ…

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸೀನುವಾಗ ತಮ್ಮ ಕೈಯನ್ನು—ಅಥವಾ ಬಟ್ಟೆಯನ್ನು—ಮುಖದ ಮೇಲಿಡುತ್ತಿದ್ದರು ಮತ್ತು ಶಬ್ದವನ್ನು ಕಡಿಮೆ ಮಾಡುತ್ತಿದ್ದರು—ಅಥವಾ ತಗ್ಗಿಸುತ್ತಿದ್ದರು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸೀನುವಾಗ ತಮ್ಮ ಕೈಯನ್ನು—ಅಥವಾ ಬಟ್ಟೆಯನ್ನು—ಮುಖದ ಮೇಲಿಡುತ್ತಿದ್ದರು ಮತ್ತು ಶಬ್ದವನ್ನು ಕಡಿಮೆ ಮಾಡುತ್ತಿದ್ದರು—ಅಥವಾ ತಗ್ಗಿಸುತ್ತಿದ್ದರು.

[صحيح] [رواه أبو داود والترمذي وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸೀನುವಾಗ: ಮೊದಲನೆಯದಾಗಿ, ಅವರು ತಮ್ಮ ಬಾಯಿಯಿಂದ ಅಥವಾ ಮೂಗಿನಿಂದ ಏನಾದರೂ ಹೊರಬಂದು ತಮ್ಮ ಬಳಿಯಿರುವವರಿಗೆ ತೊಂದರೆಯಾಗದಿರಲು ತಮ್ಮ ಬಾಯಿಯ ಮೇಲೆ ಕೈ ಅಥವಾ ಬಟ್ಟೆಯನ್ನಿಡುತ್ತಿದ್ದರು. ಎರಡನೆಯದಾಗಿ, ಶಬ್ದವನ್ನು ತಗ್ಗಿಸುತ್ತಿದ್ದರು, ಎತ್ತುತ್ತಿರಲಿಲ್ಲ.

فوائد الحديث

ಸೀನುವ ವಿಷಯದಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾದರಿ ಹೇಗಿತ್ತೆಂದು ಮತ್ತು ಅದನ್ನು ಅನುಸರಿಸುವ ವಿಧಾನವನ್ನು ವಿವರಿಸಲಾಗಿದೆ.

ಸೀನುವಾಗ ಬಾಯಿಯಿಂದ ಏನಾದರೂ ಹೊರಬಂದು ಹತ್ತಿರದಲ್ಲಿರುವವರಿಗೆ ತೊಂದರೆಯಾಗದಿರಲು ಬಟ್ಟೆ, ಕರವಸ್ತ್ರ ಮುಂತಾದವುಗಳನ್ನು ಬಾಯಿ ಮತ್ತು ಮೂಗಿನ ಮೇಲಿಡುವುದು ಅಪೇಕ್ಷಣೀಯವಾಗಿದೆ.

ಸೀನುವಾಗ ಶಬ್ದವನ್ನು ತಗ್ಗಿಸುವುದು ಅತ್ಯಾವಶ್ಯವಾಗಿದೆ. ಇದು ಶಿಷ್ಟಾಚಾರದ ಸಂಪೂರ್ಣತೆ ಮತ್ತು ಉತ್ತಮ ನಡವಳಿಕೆಯಾಗಿದೆ.

التصنيفات

Manners of Sneezing and Yawning, Muhammadan Qualities