ಕುರ್‌ಆನ್ ಅನ್ನು ಕಲಿಯುವವರು ಮತ್ತು ಅದನ್ನು ಕಲಿಸುವವರು ನಿಮ್ಮಲ್ಲಿ ಅತ್ಯುತ್ತಮರು

ಕುರ್‌ಆನ್ ಅನ್ನು ಕಲಿಯುವವರು ಮತ್ತು ಅದನ್ನು ಕಲಿಸುವವರು ನಿಮ್ಮಲ್ಲಿ ಅತ್ಯುತ್ತಮರು

ಉಸ್ಮಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕುರ್‌ಆನ್ ಅನ್ನು ಕಲಿಯುವವರು ಮತ್ತು ಅದನ್ನು ಕಲಿಸುವವರು ನಿಮ್ಮಲ್ಲಿ ಅತ್ಯುತ್ತಮರು."

[Sahih/Authentic.] [Al-Bukhari]

الشرح

ಪವಿತ್ರ ಕುರ್‌ಆನ್ ಅನ್ನು ಪಠಿಸುವವರು, ಕಂಠಪಾಠ ಮಾಡುವವರು, ಸುಶ್ರಾವ್ಯವಾಗಿ ಪಾರಾಯಣ ಮಾಡುವವರು, ಅದರಿಂದ ಜ್ಞಾನವನ್ನು ಪಡೆಯುವವರು, ಅದರ ವ್ಯಾಖ್ಯಾನವನ್ನು ಕಲಿಯುವವರು ಅದರ ಪ್ರಕಾರ ಜೀವನವನ್ನು ರೂಪಿಸಿಕೊಳ್ಳುವುದರ ಜೊತೆಗೆ ತನ್ನಲ್ಲಿರುವ ಕುರ್‌ಆನಿನ ಜ್ಞಾನವನ್ನು ಇತರರಿಗೆ ಕಲಿಸಿಕೊಡುವವರು ಮುಸಲ್ಮಾನರ ಪೈಕಿ ಅತ್ಯುತ್ತಮರು ಮತ್ತು ಅಲ್ಲಾಹನ ಬಳಿ ಉನ್ನತ ಸ್ಥಾನಮಾನಗಳನ್ನು ಪಡೆಯುವವರು ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುತ್ತಿದ್ದಾರೆ.

فوائد الحديث

ಪವಿತ್ರ ಕುರ್‌ಆನಿನ ಶ್ರೇಷ್ಠತೆಯನ್ನು ಮತ್ತು ಅದು ವಚನಗಳಲ್ಲೇ ಅತಿ ಶ್ರೇಷ್ಠವೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅದು ಅಲ್ಲಾಹನ ವಚನಗಳಾಗಿವೆ.

ನಿಜವಾದ ಜ್ಞಾನಾರ್ಥಿಗಳು ಎಂದರೆ ತಾವು ಕಲಿತದ್ದನ್ನು ಇತರರಿಗೆ ಕಲಿಸಿಕೊಡುವವರೇ ವಿನಾ ತಾವು ಮಾತ್ರ ಕಲಿಯುವವರಲ್ಲ.

ಕುರ್‌ಆನ್ ಅನ್ನು ಕಲಿಯುವುದು ಮತ್ತು ಅದನ್ನು ಕಲಿಸುವುದರಲ್ಲಿ ಅದರ ಪಠಣವನ್ನು, ಅರ್ಥ ಮತ್ತು ನಿಯಮಗಳನ್ನು ಕಲಿಯುವುದು ಮತ್ತು ಕಲಿಸುವುದು ಒಳಪಡುತ್ತದೆ.