ದೇವದೂತರು ನಾಯಿ ಅಥವಾ ಗಂಟೆಯಿರುವ ಗುಂಪಿನ ಜೊತೆ ಸೇರುವುದಿಲ್ಲ

ದೇವದೂತರು ನಾಯಿ ಅಥವಾ ಗಂಟೆಯಿರುವ ಗುಂಪಿನ ಜೊತೆ ಸೇರುವುದಿಲ್ಲ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ದೇವದೂತರು ನಾಯಿ ಅಥವಾ ಗಂಟೆಯಿರುವ ಗುಂಪಿನ ಜೊತೆ ಸೇರುವುದಿಲ್ಲ."

[صحيح] [رواه مسلم]

الشرح

ನಾಯಿ ಅಥವಾ ಗಂಟೆ ಇರುವ ಪ್ರಯಾಣದಲ್ಲಿ ದೇವದೂತರು ಅವರ ಜೊತೆ ಸೇರುವುದಿಲ್ಲ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸಿದ್ದಾರೆ. ಗಂಟೆ ಎಂದರೆ ಮೃಗಗಳ ಕೊರಳುಗಳಲ್ಲಿ ತೂಗಿಸಲಾಗುವ ವಸ್ತುವಾಗಿದ್ದು ಅವು ಚಲಿಸುವಾಗ ಅದರಿಂದ ಶಬ್ದವುಂಟಾಗುತ್ತದೆ.

فوائد الحديث

ನಾಯಿಗಳನ್ನು ಸಾಕುವುದು ಮತ್ತು ಜೊತೆಯಲ್ಲಿಡುವುದನ್ನು ನಿಷೇಧಿಸಲಾಗಿದೆ. ಆದರೆ ಬೇಟೆ ನಾಯಿಗಳು ಅಥವಾ ಕಾವಲು ನಾಯಿಗಳು ಈ ನಿಷೇಧದಿಂದ ಹೊರತಾಗಿವೆ.

ಜೊತೆಯಲ್ಲಿ ಸೇರಲು ನಿರಾಕರಿಸುವುದು ಕರುಣೆಯ ದೇವದೂತರು ಮಾತ್ರ. ಕಾವಲುಗಾರರಾದ ದೇವದೂತರು ಊರಿನಲ್ಲಾಗಲಿ ಅಥವಾ ಪ್ರಯಾಣದಲ್ಲಾಗಲಿ ಯಾವುದೇ ಸಮಯದಲ್ಲೂ ಮನುಷ್ಯರಿಂದ ಬೇರ್ಪಡುವುದಿಲ್ಲ.

ಗಂಟೆಯನ್ನು ನಿಷೇಧಿಸಲಾಗಿದೆ. ಏಕೆಂದರೆ, ಅದು ಶೈತಾನನ ವಾದ್ಯಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲದೆ, ಅದರಲ್ಲಿ ಕ್ರೈಸ್ತರ ಗಂಟೆಗಳಿಗೆ ಹೋಲಿಕೆಯಿದೆ.

ಯಾವೆಲ್ಲಾ ವಿಷಯಗಳಲ್ಲಿ ದೇವದೂತರು ತನ್ನಿಂದ ದೂರವಾಗುತ್ತಾರೋ ಅವೆಲ್ಲಾ ವಿಷಯಗಳಿಂದಲೂ ದೂರವಿರಲು ಮುಸಲ್ಮಾನನು ಆಸಕ್ತಿ ತೋರುವುದು ಕಡ್ಡಾಯವಾಗಿದೆ.

التصنيفات

The Angels