ಓ ಅಲ್ಲಾಹನ ಸಂದೇಶವಾಹಕರೇ! ನಾವು ಜಿಹಾದ್ ಅನ್ನು ಅತಿಶ್ರೇಷ್ಠ ಕರ್ಮವೆಂದು ಪರಿಗಣಿಸುತ್ತೇವೆ. ನಾವು ಕೂಡ ಜಿಹಾದ್ ಮಾಡಬಾರದೇ?" ಅವರು…

ಓ ಅಲ್ಲಾಹನ ಸಂದೇಶವಾಹಕರೇ! ನಾವು ಜಿಹಾದ್ ಅನ್ನು ಅತಿಶ್ರೇಷ್ಠ ಕರ್ಮವೆಂದು ಪರಿಗಣಿಸುತ್ತೇವೆ. ನಾವು ಕೂಡ ಜಿಹಾದ್ ಮಾಡಬಾರದೇ?" ಅವರು ಉತ್ತರಿಸಿದರು: "ಬೇಡ, ಬದಲಿಗೆ ಅತಿಶ್ರೇಷ್ಠ ಜಿಹಾದ್ ಎಂದರೆ ಹಜ್ಜ್ ಮಬ್ರೂರ್ (ಸ್ವೀಕೃತ ಹಜ್ಜ್) ಆಗಿದೆ

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಾವು ಜಿಹಾದ್ ಅನ್ನು ಅತಿಶ್ರೇಷ್ಠ ಕರ್ಮವೆಂದು ಪರಿಗಣಿಸುತ್ತೇವೆ. ನಾವು ಕೂಡ ಜಿಹಾದ್ ಮಾಡಬಾರದೇ?" ಅವರು ಉತ್ತರಿಸಿದರು: "ಬೇಡ, ಬದಲಿಗೆ ಅತಿಶ್ರೇಷ್ಠ ಜಿಹಾದ್ ಎಂದರೆ ಹಜ್ಜ್ ಮಬ್ರೂರ್ (ಸ್ವೀಕೃತ ಹಜ್ಜ್) ಆಗಿದೆ."

[صحيح] [رواه البخاري]

الشرح

ಅಲ್ಲಾಹನ ಮಾರ್ಗದಲ್ಲಿರುವ ಜಿಹಾದ್ ಮತ್ತು ಶತ್ರುಗಳ ವಿರುದ್ಧದ ಯುದ್ಧವನ್ನು ಸಹಾಬಿಗಳು (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅತಿಶ್ರೇಷ್ಠ ಕರ್ಮವೆಂದು ಪರಿಗಣಿಸಿದ್ದರು. ಆದ್ದರಿಂದ ಮಹಿಳೆಯರು ಕೂಡ ಜಿಹಾದ್ ಮಾಡಬೇಕೇ? ಎಂದು ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು. ಆಗ ಅವರ ಪಾಲಿಗೆ ಯಾವುದು ಅತಿಶ್ರೇಷ್ಠ ಜಿಹಾದ್ ಆಗಿದೆಯೆಂದು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಮಾರ್ಗದರ್ಶನ ನೀಡಿದರು. ಅದು ಸ್ವೀಕೃತ ಹಜ್ಜ್ ಆಗಿದೆ. ಸ್ವೀಕೃತ ಹಜ್ಜ್ ಎಂದರೆ ಕುರ್‌ಆನ್ ಮತ್ತು ಸುನ್ನತ್‌ಗೆ ಅನುಗುಣವಾಗಿರುವ ಮತ್ತು ಪಾಪಗಳು ಹಾಗೂ ತೋರಿಕೆಗಳಿಂದ ಮುಕ್ತವಾಗಿರುವ ಹಜ್ಜ್.

فوائد الحديث

ಪುರುಷರಿಗೆ ಜಿಹಾದ್ ಅತಿಶ್ರೇಷ್ಠ ಕರ್ಮವಾಗಿದೆ.

ಮಹಿಳೆಯರಿಗೆ ಜಿಹಾದ್‌ಗಿಂತಲೂ ಹಜ್ಜ್ ಶ್ರೇಷ್ಠವಾಗಿದೆ. ಅದು ಅವರಿಗೆ ಅತಿಶ್ರೇಷ್ಠ ಕರ್ಮವಾಗಿದೆ.

ಕರ್ಮಗಳು ಅವುಗಳನ್ನು ನಿರ್ವಹಿಸುವವರನ್ನು ಅನುಸರಿಸಿ ಹೆಚ್ಚು ಅಥವಾ ಕಡಿಮೆ ಶ್ರೇಷ್ಠತೆಯನ್ನು ಹೊಂದಿರುತ್ತದೆ.

ಹಜ್ಜ್ ಅನ್ನು ಜಿಹಾದ್ ಎಂದು ಕರೆದಿರುವುದು ಏಕೆಂದರೆ ಅದು ಆತ್ಮದ ವಿರುದ್ಧದ ಹೋರಾಟವಾಗಿದೆ, ಅದಕ್ಕಾಗಿ ಸಂಪತ್ತು ಖರ್ಚಾಗುತ್ತದೆ ಮತ್ತು ದೈಹಿಕ ಶಕ್ತಿಯನ್ನು ವಿನಿಯೋಗಿಸಬೇಕಾಗುತ್ತದೆ. ಅದು ಅಲ್ಲಾಹನ ಮಾರ್ಗದಲ್ಲಿರುವ ಜಿಹಾದ್‌ನಂತೆಯೇ ದೈಹಿಕ ಮತ್ತು ಆರ್ಥಿಕ ಆರಾಧನೆಯಾಗಿದೆ.

التصنيفات

Virtue of Hajj and Umrah