ಅಲ್ಲಾಹನ ವಚನವು ಸರ್ವೋಚ್ಛವಾಗಬೇಕೆಂದು ಯಾರು ಹೋರಾಡುತ್ತಾರೋ ಅವರೇ ಅಲ್ಲಾಹನ ಮಾರ್ಗದಲ್ಲಿರುವವರು

ಅಲ್ಲಾಹನ ವಚನವು ಸರ್ವೋಚ್ಛವಾಗಬೇಕೆಂದು ಯಾರು ಹೋರಾಡುತ್ತಾರೋ ಅವರೇ ಅಲ್ಲಾಹನ ಮಾರ್ಗದಲ್ಲಿರುವವರು

ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶೌರ್ಯಕ್ಕಾಗಿ ಹೋರಾಡುವ, ಕೋಮುವಾದಕ್ಕಾಗಿ ಹೋರಾಡುವ, ಮತ್ತು ತೋರಿಕೆಗಾಗಿ ಹೋರಾಡುವ ವ್ಯಕ್ತಿಯ ಬಗ್ಗೆ—ಇವರಲ್ಲಿ ಅಲ್ಲಾಹನ ಮಾರ್ಗದಲ್ಲಿರುವವರು ಯಾರು? ಎಂದು ಕೇಳಲಾಯಿತು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅಲ್ಲಾಹನ ವಚನವು ಸರ್ವೋಚ್ಛವಾಗಬೇಕೆಂದು ಯಾರು ಹೋರಾಡುತ್ತಾರೋ ಅವರೇ ಅಲ್ಲಾಹನ ಮಾರ್ಗದಲ್ಲಿರುವವರು."

[صحيح] [متفق عليه]

الشرح

ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯೋಧರ ವಿಭಿನ್ನ ಉದ್ದೇಶಗಳ ಬಗ್ಗೆ ಕೇಳಲಾಯಿತು. ಶೌರ್ಯಕ್ಕಾಗಿ ಹೋರಾಡುವ, ಕೋಮುವಾದಕ್ಕಾಗಿ ಹೋರಾಡುವ, ಜನರ ಪ್ರಶಂಸೆಗಾಗಿ ಹೋರಾಡುವ ಮತ್ತು ಇತರ ಉದ್ದೇಶಗಳಿಗಾಗಿ ಹೋರಾಡುವ ಜನರಿರುವಾಗ ಇವರಲ್ಲಿ ಅಲ್ಲಾಹನ ಮಾರ್ಗದಲ್ಲಿರುವವರು ಯಾರು? ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದ್ದೇನೆಂದರೆ, ಅಲ್ಲಾಹನ ವಚನವು ಸರ್ವೋಚ್ಛವಾಗಬೇಕು ಎಂಬ ಉದ್ದೇಶದಿಂದ ಯಾರು ಹೋರಾಡುತ್ತಾರೋ ಅವರೇ ಅಲ್ಲಾಹನ ಮಾರ್ಗದಲ್ಲಿ ಹೋರಾಡುವವರು.

فوائد الحديث

ಉದ್ದೇಶ ಶುದ್ಧಿ ಮತ್ತು ಅಲ್ಲಾಹನಿಗಾಗಿ ಮಾತ್ರ ಎಂಬ ನಿಷ್ಕಳಂಕತೆಯು ಕರ್ಮಗಳ ಸ್ವೀಕಾರ ಮತ್ತು ತಿರಸ್ಕಾರಕ್ಕೆ ಮೂಲ ಮಾನದಂಡವಾಗಿದೆ.

ಹೋರಾಟದ ನೈಜ ಉದ್ದೇಶವು ಅಲ್ಲಾಹನ ವಚನವನ್ನು ಸರ್ವೋಚ್ಛಗೊಳಿಸುವುದಾಗಿದ್ದು, ಅದರೊಂದಿಗೆ ಯುದ್ಧಾರ್ಜಿತ ಸೊತ್ತನ್ನು ಪಡೆಯುವುದು ಮುಂತಾದ ಶಾಸ್ತ್ರೋಕ್ತ ಉದ್ದೇಶವು ಸೇರಿಕೊಂಡರೆ, ಅದರಿಂದ ಮೂಲ ಉದ್ದೇಶಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.

ಸ್ವದೇಶದಿಂದ ಮತ್ತು ಪವಿತ್ರ ಸ್ಥಳಗಳಿಂದ ಶತ್ರುಗಳನ್ನು ಹೊರದಬ್ಬಲು ಹೋರಾಡುವುದು ಅಲ್ಲಾಹನ ಮಾರ್ಗದಲ್ಲಿರುವ ಜಿಹಾದ್ ಆಗಿದೆ.

ಹೋರಾಟಗಾರರ ವಿಷಯದಲ್ಲಿ ವರದಿಯಾದ ಶ್ರೇಷ್ಠತೆಗಳೆಲ್ಲವೂ ಅಲ್ಲಾಹನ ವಚನವು ಸರ್ವೋಚ್ಛವಾಗಬೇಕೆಂದು ಹೋರಾಡುವವರಿಗೆ ಮಾತ್ರ ಅನ್ವಯವಾಗುತ್ತವೆ.

التصنيفات

Manners of Jihad