ನಿಮ್ಮ ಸಾಲುಗಳನ್ನು ನೇರಗೊಳಿಸಿರಿ. ಏಕೆಂದರೆ, ಸಾಲನ್ನು ನೇರಗೊಳಿಸುವುದು ನಮಾಝನ್ನು ಪೂರ್ಣಗೊಳಿಸುವುದರ ಭಾಗವಾಗಿದೆ

ನಿಮ್ಮ ಸಾಲುಗಳನ್ನು ನೇರಗೊಳಿಸಿರಿ. ಏಕೆಂದರೆ, ಸಾಲನ್ನು ನೇರಗೊಳಿಸುವುದು ನಮಾಝನ್ನು ಪೂರ್ಣಗೊಳಿಸುವುದರ ಭಾಗವಾಗಿದೆ

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮ ಸಾಲುಗಳನ್ನು ನೇರಗೊಳಿಸಿರಿ. ಏಕೆಂದರೆ, ಸಾಲನ್ನು ನೇರಗೊಳಿಸುವುದು ನಮಾಝನ್ನು ಪೂರ್ಣಗೊಳಿಸುವುದರ ಭಾಗವಾಗಿದೆ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಮಾಡುವವರಿಗೆ ತಮ್ಮ ಸಾಲುಗಳನ್ನು ನೇರಗೊಳಿಸಲು ಮತ್ತು ಕೆಲವರು ಮುಂದೆ ಮತ್ತು ಕೆಲವರು ಹಿಂದೆ ನಿಲ್ಲಬಾರದೆಂದು ಆದೇಶಿಸುತ್ತಿದ್ದಾರೆ. ಸಾಲನ್ನು ನೇರಗೊಳಿಸುವುದು ನಮಾಝಿನ ಸಂಪೂರ್ಣತೆ ಮತ್ತು ಸಮಗ್ರತೆಯ ಭಾಗವಾಗಿದ್ದು, ಸಾಲು ವಕ್ರವಾಗಿರುವುದು ನಮಾಝಿನಲ್ಲಿರುವ ದೋಷ ಮತ್ತು ಕೊರತೆಯಾಗಿದೆ.

فوائد الحديث

ನಮಾಝನ್ನು ಪೂರ್ಣಗೊಳಿಸುವ ಮತ್ತು ಅದನ್ನು ಅಪೂರ್ಣತೆಗಳಿಂದ ದೂರವಿರಿಸುವ ಎಲ್ಲಾ ವಿಷಯಗಳಿಗೂ ಗಮನ ನೀಡಬೇಕೆಂದು ಧರ್ಮಶಾಸ್ತ್ರವು ನಿರ್ದೇಶಿಸಿದೆ.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬೋಧನಾಶೈಲಿಯಲ್ಲಿರುವ ಜಾಣ್ಮೆಯನ್ನು ತಿಳಿಸಲಾಗಿದೆ. ಅದು ಹೇಗೆಂದರೆ, ಜನರಿಗೆ ನಿಯಮ ರಚನೆಯ ಉದ್ದೇಶವು ಸ್ಪಷ್ಟವಾಗಿ, ಆ ನಿಯಮವನ್ನು ಅನುಸರಿಸಲು ಅವರ ಮನಸ್ಸುಗಳು ಸಕ್ರಿಯವಾಗಲು ಅವರು ನಿಯಮಗಳ ಜೊತೆಗೆ ಅದರ ಕಾರಣವನ್ನು ವಿವರಿಸಿದ್ದಾರೆ.

التصنيفات

Rulings of the Imam and Followers in Prayer, The rulings of mosques