ಸುಬ್‌ಹಾನಲ್ಲಾಹಿ, ವಲ್‌ಹಂದುಲಿಲ್ಲಾಹಿ, ವಲಾಇಲಾಹ ಇಲ್ಲಲ್ಲಾಹು ವಲ್ಲಾಹು ಅಕ್ಬರ್ ಎಂದು ಹೇಳುವುದು ಸೂರ್ಯ ಬೆಳಗಿದ ಎಲ್ಲ…

ಸುಬ್‌ಹಾನಲ್ಲಾಹಿ, ವಲ್‌ಹಂದುಲಿಲ್ಲಾಹಿ, ವಲಾಇಲಾಹ ಇಲ್ಲಲ್ಲಾಹು ವಲ್ಲಾಹು ಅಕ್ಬರ್ ಎಂದು ಹೇಳುವುದು ಸೂರ್ಯ ಬೆಳಗಿದ ಎಲ್ಲ ವಸ್ತುಗಳಿಗಿಂತಲೂ ನನಗೆ ಹೆಚ್ಚು ಇಷ್ಟವಾಗಿದೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸುಬ್‌ಹಾನಲ್ಲಾಹಿ, ವಲ್‌ಹಂದುಲಿಲ್ಲಾಹಿ, ವಲಾಇಲಾಹ ಇಲ್ಲಲ್ಲಾಹು ವಲ್ಲಾಹು ಅಕ್ಬರ್ ಎಂದು ಹೇಳುವುದು ಸೂರ್ಯ ಬೆಳಗಿದ ಎಲ್ಲ ವಸ್ತುಗಳಿಗಿಂತಲೂ ನನಗೆ ಹೆಚ್ಚು ಇಷ್ಟವಾಗಿದೆ."

[Sahih/Authentic.] [Muslim]

الشرح

ಈ ಮಹಾನ್ ವಚನಗಳ ಮೂಲಕ ಅಲ್ಲಾಹನನ್ನು ಸ್ಮರಿಸುವುದು ಇಹಲೋಕ ಮತ್ತು ಅದರಲ್ಲಿರುವ ಎಲ್ಲಾ ವಸ್ತುಗಳಿಗಿಂತಲೂ ಶ್ರೇಷ್ಠವಾಗಿದೆಯೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುತ್ತಾರೆ. ಸುಬ್‌ಹಾನಲ್ಲಾಹ್ ಎಂದರೆ ಅಲ್ಲಾಹನನ್ನು ಎಲ್ಲಾ ರೀತಿಯ ಅಪರಿಪೂರ್ಣತೆಗಳಿಂದ ಪರಿಶುದ್ಧಗೊಳಿಸುವುದು. ಅಲ್-ಹಮ್ದುಲಿಲ್ಲಾಹ್ ಎಂದರೆ ಅಲ್ಲಾಹನನ್ನು ಪ್ರೀತಿಸುವುದು ಮತ್ತು ಅತಿಯಾಗಿ ಗೌರವಿಸುವುದರ ಜೊತೆಗೆ ಅವನನ್ನು ಸಂಪೂರ್ಣತೆಯ ಗುಣಗಳಿಂದ ಪ್ರಶಂಸಿಸುವುದು. ಲಾ ಇಲಾಹ ಇಲ್ಲಲ್ಲಾಹ್ ಎಂದರೆ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ. ಅಲ್ಲಾಹು ಅಕ್ಬರ್ ಅಂದರೆ ಅಲ್ಲಾಹು ಎಲ್ಲಾ ವಸ್ತುಗಳಿಗಿಂತಲೂ ಪರಮೋಚ್ಛನು ಮತ್ತು ಮಹಾಮಹಿಮನು.

فوائد الحديث

ಈ ಹದೀಸ್ ಅಲ್ಲಾಹನನ್ನು ಸ್ಮರಿಸಲು ಪ್ರೋತ್ಸಾಹಿಸುವುದರ ಜೊತೆಗೆ ಅದು ಸೂರ್ಯ ಬೆಳಗುವ ಎಲ್ಲಾ ವಸ್ತುಗಳಿಗಿಂತಲೂ ಇಷ್ಟಕರವೆಂದು ತಿಳಿಸುತ್ತದೆ‌.

ಹೆಚ್ಚು ಹೆಚ್ಚು ದಿಕ್ರ್ ಹೇಳಲು ಈ ಹದೀಸ್ ಪ್ರೋತ್ಸಾಹಿಸುತ್ತದೆ. ಏಕೆಂದರೆ ಅದರಲ್ಲಿ ಅನೇಕ ಪ್ರತಿಫಲಗಳು ಮತ್ತು ಅನುಗ್ರಹಗಳಿವೆ.

ಇಹಲೋಕದ ಸುಖಗಳು ತಾತ್ಕಾಲಿಕವಾಗಿವೆ ಮತ್ತು ಅವುಗಳ ಕುರಿತಾದ ಮೋಹಗಳು ಕ್ಷಣಿಕವಾಗಿವೆಯೆಂದು ಈ ಹದೀಸ್ ತಿಳಿಸುತ್ತದೆ.