ನಿಮ್ಮಲ್ಲೊಬ್ಬನು ತನ್ನ ಮನೆಗೆ ಹಿಂದಿರುಗಿ ಬರುವಾಗ ಅಲ್ಲಿ ಮೂರು ದೊಡ್ಡ ಕೊಬ್ಬಿದ ಗರ್ಭಿಣಿ ಹೆಣ್ಣು ಒಂಟೆಗಳನ್ನು ಕಾಣಲು…

ನಿಮ್ಮಲ್ಲೊಬ್ಬನು ತನ್ನ ಮನೆಗೆ ಹಿಂದಿರುಗಿ ಬರುವಾಗ ಅಲ್ಲಿ ಮೂರು ದೊಡ್ಡ ಕೊಬ್ಬಿದ ಗರ್ಭಿಣಿ ಹೆಣ್ಣು ಒಂಟೆಗಳನ್ನು ಕಾಣಲು ಇಷ್ಟಪಡುತ್ತಾನೆಯೇ?

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬನು ತನ್ನ ಮನೆಗೆ ಹಿಂದಿರುಗಿ ಬರುವಾಗ ಅಲ್ಲಿ ಮೂರು ದೊಡ್ಡ ಕೊಬ್ಬಿದ ಗರ್ಭಿಣಿ ಹೆಣ್ಣು ಒಂಟೆಗಳನ್ನು ಕಾಣಲು ಇಷ್ಟಪಡುತ್ತಾನೆಯೇ?" ನಾವು ಹೇಳಿದೆವು: "ಹೌದು." ಅವರು ಹೇಳಿದರು: "ನಿಮ್ಮಲ್ಲೊಬ್ಬನು ನಮಾಝ್ ಮಾಡುವಾಗ ಪಠಿಸುವ ಮೂರು ವಚನಗಳು ಮೂರು ದೊಡ್ಡ ಕೊಬ್ಬಿದ ಗರ್ಭಿಣಿ ಹೆಣ್ಣು ಒಂಟೆಗಳಿಗಿಂತಲೂ ಉತ್ತಮವಾಗಿವೆ."

[صحيح] [رواه مسلم]

الشرح

ಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ನಮಾಝಿನಲ್ಲಿ ಪಠಿಸುವ ಮೂರು ವಚನಗಳಿಗೆ ಸಿಗುವ ಪ್ರತಿಫಲವು ಒಬ್ಬ ವ್ಯಕ್ತಿ ತನ್ನ ಮನೆಯಲ್ಲಿ ಮೂರು ಕೊಬ್ಬಿದ ದೊಡ್ಡ ಗರ್ಭಿಣಿ ಹೆಣ್ಣು ಒಂಟೆಗಳನ್ನು ಹೊಂದಿರುವುದಕ್ಕಿಂತಲೂ ಉತ್ತಮವಾಗಿದೆ.

فوائد الحديث

ನಮಾಝ್‌ನಲ್ಲಿ ಕುರ್‌ಆನ್ ಪಠಿಸುವ ಶ್ರೇಷ್ಠತೆಯನ್ನು ಈ ಹದೀಸ್ ವಿವರಿಸುತ್ತದೆ.

ಇಹಲೋಕದ ನಶ್ವರ ವಸ್ತುಗಳಿಗಿಂತಲೂ ಸತ್ಕರ್ಮಗಳು ಉತ್ತಮ ಮತ್ತು ಶಾಶ್ವತವಾಗಿವೆಯೆಂದು ಈ ಹದೀಸ್ ತಿಳಿಸುತ್ತದೆ.

ಈ ಶ್ರೇಷ್ಠತೆಯು ಕೇವಲ ಮೂರು ವಚನಗಳ ಪಠಣಕ್ಕೆ ಮಾತ್ರ ಸೀಮಿತವಲ್ಲ. ಒಬ್ಬ ವ್ಯಕ್ತಿ ನಮಾಝ್ ಮಾಡುವಾಗ ಎಷ್ಟು ವಚನಗಳನ್ನು ಪಠಿಸುತ್ತಾನೋ ಅವುಗಳಿಗೆ ಸಿಗುವ ಪ್ರತಿಫಲವು ಅಷ್ಟೇ ಸಂಖ್ಯೆಯ ಒಂಟೆಗಳಿಗಿಂತಲೂ ಶ್ರೇಷ್ಠವಾಗಿದೆ.

التصنيفات

Merits of the Noble Qur'an