ನಿಮ್ಮಲ್ಲೊಬ್ಬರು ಮಸೀದಿಯೊಳಗೆ ಪ್ರವೇಶ ಮಾಡಿದರೆ ಕುಳಿತುಕೊಳ್ಳುವುದಕ್ಕೆ ಮೊದಲು ಎರಡು ರಕಅತ್ ನಮಾಝ್ ನಿರ್ವಹಿಸಲಿ

ನಿಮ್ಮಲ್ಲೊಬ್ಬರು ಮಸೀದಿಯೊಳಗೆ ಪ್ರವೇಶ ಮಾಡಿದರೆ ಕುಳಿತುಕೊಳ್ಳುವುದಕ್ಕೆ ಮೊದಲು ಎರಡು ರಕಅತ್ ನಮಾಝ್ ನಿರ್ವಹಿಸಲಿ

ಅಬೂ ಕತಾದ ಅಸ್ಸಲಮಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬರು ಮಸೀದಿಯೊಳಗೆ ಪ್ರವೇಶ ಮಾಡಿದರೆ ಕುಳಿತುಕೊಳ್ಳುವುದಕ್ಕೆ ಮೊದಲು ಎರಡು ರಕಅತ್ ನಮಾಝ್ ನಿರ್ವಹಿಸಲಿ."

[صحيح] [متفق عليه]

الشرح

ಒಬ್ಬರು ಮಸೀದಿಗೆ ಯಾವ ಸಮಯದಲ್ಲಿ ಬಂದರೂ, ಯಾವ ಉದ್ದೇಶದಿಂದ ಬಂದರೂ, ಕುಳಿತುಕೊಳ್ಳುವುದಕ್ಕೆ ಮೊದಲು ಎರಡು ರಕಅತ್ ನಮಾಝ್ ನಿರ್ವಹಿಸಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರೋತ್ಸಾಹಿಸಿದ್ದಾರೆ. ಇದನ್ನು ತಹಿಯ್ಯತುಲ್ ಮಸ್ಜಿದ್ ನಮಾಝ್ ಎನ್ನಲಾಗುತ್ತದೆ.

فوائد الحديث

ಕುಳಿತುಕೊಳ್ಳುವುದಕ್ಕೆ ಮೊದಲು ಎರಡು ರಕಅತ್ ತಹಿಯ್ಯತುಲ್-ಮಸ್ಜಿದ್ ನಮಾಝ್ ನಿರ್ವಹಿಸುವುದು ಅಪೇಕ್ಷಣೀಯವಾಗಿದೆ.

ಇದು ಮಸೀದಿಯಲ್ಲಿ ಕುಳಿತುಕೊಳ್ಳಲು ಬಯಸುವವರಿಗೆ ಮಾತ್ರ. ಯಾರಾದರೂ ಮಸೀದಿಯನ್ನು ಪ್ರವೇಶಿಸಿ ಕುಳಿತುಕೊಳ್ಳುವುದಕ್ಕೆ ಮೊದಲೇ ಅಲ್ಲಿಂದ ಹೊರಟು ಹೋದರೆ ಅವರಿಗೆ ಈ ಆಜ್ಞೆಯು ಅನ್ವಯವಾಗುವುದಿಲ್ಲ.

ಒಬ್ಬರು ಮಸೀದಿಯನ್ನು ಪ್ರವೇಶಿಸುವಾಗ ಅಲ್ಲಿ ಜನರು ನಮಾಝ್ ನಿರ್ವಹಿಸುತ್ತಿದ್ದರೆ ಅವರು ಕೂಡ ನಮಾಝಿನಲ್ಲಿ ಸೇರಿಕೊಳ್ಳಬೇಕು. ಈ ಎರಡು ರಕಅತ್ ನಿರ್ವಹಿಸಬೇಕಾಗಿಲ್ಲ.

التصنيفات

Voluntary Prayer, The rulings of mosques