ಯಾರು ಅಲ್ಲಾಹನೊಡನೆ ಪ್ರಾಮಾಣಿಕವಾಗಿ ಹುತಾತ್ಮತೆಯನ್ನು ಬೇಡುತ್ತಾನೋ ಅವನನ್ನು ಅಲ್ಲಾಹು ಹುತಾತ್ಮರ ಸ್ಥಾನಗಳಿಗೆ…

ಯಾರು ಅಲ್ಲಾಹನೊಡನೆ ಪ್ರಾಮಾಣಿಕವಾಗಿ ಹುತಾತ್ಮತೆಯನ್ನು ಬೇಡುತ್ತಾನೋ ಅವನನ್ನು ಅಲ್ಲಾಹು ಹುತಾತ್ಮರ ಸ್ಥಾನಗಳಿಗೆ ತಲುಪಿಸುತ್ತಾನೆ. ಅವನು ತನ್ನ ಹಾಸಿಗೆಯಲ್ಲಿ ಪ್ರಾಣ ಬಿಟ್ಟರೂ ಸಹ

ಸಹಲ್ ಬಿನ್ ಹನೀಫ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಅಲ್ಲಾಹನೊಡನೆ ಪ್ರಾಮಾಣಿಕವಾಗಿ ಹುತಾತ್ಮತೆಯನ್ನು ಬೇಡುತ್ತಾನೋ ಅವನನ್ನು ಅಲ್ಲಾಹು ಹುತಾತ್ಮರ ಸ್ಥಾನಗಳಿಗೆ ತಲುಪಿಸುತ್ತಾನೆ. ಅವನು ತನ್ನ ಹಾಸಿಗೆಯಲ್ಲಿ ಪ್ರಾಣ ಬಿಟ್ಟರೂ ಸಹ."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು ಅಲ್ಲಾಹನ ಮಾರ್ಗದಲ್ಲಿ ಹುತಾತ್ಮನಾಗಲು ಮತ್ತು ಹತನಾಗಲು ಬೇಡುತ್ತಾನೋ, ಅವನು ಸತ್ಯವಂತನಾಗಿದ್ದು ತನ್ನ ಸಂಕಲ್ಪವನ್ನು ಅಲ್ಲಾಹನಿಗಾಗಿ ನಿಷ್ಕಳಂಕಗೊಳಿಸಿದ್ದರೆ, ಅಲ್ಲಾಹು ಅವನ ಪ್ರಾಮಾಣಿಕ ಸಂಕಲ್ಪಕ್ಕೆ ತಕ್ಕಂತೆ ಅವನಿಗೆ ಹುತಾತ್ಮರ ಪದವಿಯನ್ನು ನೀಡುವನು. ಅವನು ಧರ್ಮಯುದ್ಧದಲ್ಲಿ ಪಾಲ್ಗೊಳ್ಳದೆ ತನ್ನ ಹಾಸಿಗೆಯಲ್ಲೇ ಪ್ರಾಣ ಬಿಟ್ಟರೂ ಸಹ.

فوائد الحديث

ಪ್ರಾಮಾಣಿಕ ಸಂಕಲ್ಪ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಅದಕ್ಕಾಗಿ ಪ್ರಯತ್ನಿಸುವುದರಿಂದ ಉದ್ದೇಶಿತ ಪ್ರತಿಫಲ ಮತ್ತು ಪುಣ್ಯವನ್ನು ಸಾಧಿಸಬಹುದು. ಅದಕ್ಕೆ ಆವಶ್ಯಕವಾಗಿರುವ ಕೆಲಸವನ್ನು ಮಾಡಲು ಸಾಧ್ಯವಾಗದಿದ್ದರೂ ಸಹ.

ಅಲ್ಲಾಹನ ಮಾರ್ಗದಲ್ಲಿ ಹೋರಾಡುವುದನ್ನು ಮತ್ತು ಹುತಾತ್ಮತೆಯನ್ನು ಬೇಡುವುದನ್ನು ಪ್ರೋತ್ಸಾಹಿಸಲಾಗಿದೆ.

ಅಲ್ಲಾಹು ಈ ಸಮುದಾಯಕ್ಕೆ ನೀಡಿದ ಗೌರವವನ್ನು ತಿಳಿಸಲಾಗಿದೆ. ಏಕೆಂದರೆ, ಅವನು ಸಣ್ಣ ಕರ್ಮಗಳಿಗಾಗಿ ಸ್ವರ್ಗದಲ್ಲಿ ದೊಡ್ಡ ದೊಡ್ಡ ಸ್ಥಾನಮಾನಗಳನ್ನು ನೀಡುತ್ತಾನೆ.

التصنيفات

Acts of Heart, Excellence of Jihad