“ಖಂಡಿತವಾಗಿಯೂ ನಾನು ನಿಮ್ಮ ಬಗ್ಗೆ ಸಣ್ಣ ಶಿರ್ಕ್ (ಸಣ್ಣ ಬಹುದೇವತ್ವ) ವನ್ನು ಅತಿಯಾಗಿ ಭಯಪಡುತ್ತೇನೆ." ಅವರು ಕೇಳಿದರು: "ಓ ಅಲ್ಲಾಹನ…

“ಖಂಡಿತವಾಗಿಯೂ ನಾನು ನಿಮ್ಮ ಬಗ್ಗೆ ಸಣ್ಣ ಶಿರ್ಕ್ (ಸಣ್ಣ ಬಹುದೇವತ್ವ) ವನ್ನು ಅತಿಯಾಗಿ ಭಯಪಡುತ್ತೇನೆ." ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಸಣ್ಣ ಶಿರ್ಕ್ ಎಂದರೇನು?" ಅವರು ಉತ್ತರಿಸಿದರು: "ತೋರಿಕೆಗಾಗಿ ಕೆಲಸ ಮಾಡುವುದು

ಮಹ್ಮೂದ್ ಬಿನ್ ಲಬೀದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಖಂಡಿತವಾಗಿಯೂ ನಾನು ನಿಮ್ಮ ಬಗ್ಗೆ ಸಣ್ಣ ಶಿರ್ಕ್ (ಸಣ್ಣ ಬಹುದೇವತ್ವ) ವನ್ನು ಅತಿಯಾಗಿ ಭಯಪಡುತ್ತೇನೆ." ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಸಣ್ಣ ಶಿರ್ಕ್ ಎಂದರೇನು?" ಅವರು ಉತ್ತರಿಸಿದರು: "ತೋರಿಕೆಗಾಗಿ ಕೆಲಸ ಮಾಡುವುದು. ಪುನರುತ್ಥಾನ ದಿನದಂದು ಜನರಿಗೆ ಅವರ ಕರ್ಮಗಳ ಪ್ರತಿಫಲವನ್ನು ನೀಡುವಾಗ ತೋರಿಕೆಗಾಗಿ ಕೆಲಸ ಮಾಡಿದವರೊಡನೆ ಅಲ್ಲಾಹು ಹೇಳುವನು: 'ನೀವು ಇಹಲೋಕದಲ್ಲಿ ಯಾರಿಗೆ ತೋರಿಸಲು ಕೆಲಸ ಮಾಡಿದ್ದೀರೋ ಅವರ ಬಳಿಗೆ ಹೋಗಿ, ಅವರಿಂದ ಏನಾದರೂ ಪ್ರತಿಫಲ ಸಿಗಬಹುದೇ ಎಂದು ನೋಡಿ."

[حسن] [رواه أحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅವರು ತಮ್ಮ ಸಮುದಾಯದ ಬಗ್ಗೆ ಸಣ್ಣ ಶಿರ್ಕನ್ನು (ಸಣ್ಣ ಬಹುದೇವತ್ವವನ್ನು), ಅಂದರೆ ತೋರಿಕೆಯನ್ನು ಅಥವಾ ಜನರ ತೃಪ್ತಿಗಾಗಿ ಕೆಲಸ ಮಾಡುವುದನ್ನು ಅತಿಯಾಗಿ ಭಯಪಡುತ್ತಾರೆ. ನಂತರ ಅವರು ತೋರಿಕೆಗಾಗಿ ಕೆಲಸ ಮಾಡುವವರಿಗೆ ಪರಲೋಕದಲ್ಲಿ ದೊರೆಯುವ ಶಿಕ್ಷೆಯ ಬಗ್ಗೆ ತಿಳಿಸುತ್ತಾರೆ. ಅದೇನೆಂದರೆ, ಅವರೊಡನೆ ಹೀಗೆ ಹೇಳಲಾಗುವುದು: "ನೀವು ಯಾರಿಗೆ ತೋರಿಸುವುದಕ್ಕಾಗಿ ಕೆಲಸ ಮಾಡಿದ್ದೀರೋ ಅವರ ಬಳಿಗೆ ಹೋಗಿ, ನೀವು ಮಾಡಿದ ಕೆಲಸಕ್ಕೆ ಏನಾದರೂ ಪ್ರತಿಫಲ ನೀಡಲು ಅವರಿಗೆ ಸಾಧ್ಯವೇ ಎಂದು ನೋಡಿ."

فوائد الحديث

ಯಾವುದೇ ಕೆಲಸ ಮಾಡುವಾಗ ಅಲ್ಲಾಹನ ಸಂಪ್ರೀತಿಯನ್ನು ಮಾತ್ರ ಬಯಸುವುದು ಮತ್ತು ತೋರಿಕೆಯ (ರಿಯಾ) ಬಗ್ಗೆ ಎಚ್ಚರವಾಗಿರುವುದು ಕಡ್ಡಾಯವಾಗಿದೆ.

ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಮುದಾಯದ ಮೇಲಿದ್ದ ಸಹಾನುಭೂತಿ ಮತ್ತು ಹಿತಚಿಂತನೆ ಮತ್ತು ಅವರಿಗೆ ಸನ್ಮಾರ್ಗವನ್ನು ತೋರಿಸುವ ತವಕವನ್ನು ತಿಳಿಸಲಾಗಿದೆ.

ಮಹಾಪುರುಷರ ನೇತಾರರಾಗಿರುವ ಸಹಾಬಿಗಳ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಷ್ಟೊಂದು ಭಯಪಡಬೇಕಾದರೆ, ಅವರ ಹೊರತಾದವರ ಬಗ್ಗೆ ಅವರಿಗಿದ್ದ ಭಯವು ಎಷ್ಟು ತೀವ್ರವಾಗಿತ್ತೆಂದು ಊಹಿಸಬಹುದಾಗಿದೆ.

التصنيفات

Polytheism, Prophet's Mercy